ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋಫೋರ್ಸ್ ಹಗರಣಕ್ಕೆ ಮರುಜೀವ? ಸಿಬಿಐಗೆ ಕೆಲ ಸಂಸದರ ತಾಕೀತು?

ರಾಜೀವಾ ಗಾಂಧಿಯವರು ಪ್ರಧಾನಿಯಾಗಿದ್ದ ವೇಳೆ ನಡೆದಿದ್ದ ಬೋಫೋರ್ಸ್ ಹಗರಣದ ತನಿಖೆಯನ್ನು ಮತ್ತೆ ಆರಂಭಿಸುವಂತೆ ಸಿಬಿಐಗೆ ಸಂಸದರ ಸಲಹೆ. ಅವಶ್ಯಕತೆ ಬಿದ್ದರೆ ಸರ್ಕಾರದಿಂದ ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆಯುವಂತೆ ಸಲಹೆ.

|
Google Oneindia Kannada News

ನವದೆಹಲಿ, ಜುಲೈ 14: ಬೋಫೋರ್ಸ್ ಹಗರಣಕ್ಕೆ ಮರು ಜೀವ ಕೊಟ್ಟು ಆ ಹಗರಣದ ಮರು ತನಿಖೆಯನ್ನು ಆರಂಭಿಸುವಂತೆ ಸಂಸದೀಯ ಸಮಿತಿಯೊಂದರ ಇಬ್ಬರು ಸದಸ್ಯರು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ತಾಕೀತು ಮಾಡಿದೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಈ ಹಿಂದೆ, ರಾಜೀವ್ ಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದಾಗ ಈ ಬೋಫೋರ್ಸ್ ಹಗರಣ ನಡೆದಿರುವ ಬಗ್ಗೆ ಈಗಾಗಲೇ ಅನೇಕ ವರದಿಗಳು ಬಂದಿವೆ. ಸ್ವೀಡನ್ ನಿಂದ ಬೋಫೋರ್ಸ್ ಎಂಬ ಫಿರಂಗಿಗಳನ್ನು ಭಾರತೀಯ ಸೇನೆಗಾಗಿ ಕೊಳ್ಳುವ ವ್ಯವಹಾರದಲ್ಲಿ ದೊಡ್ಡ ಭ್ರಷ್ಟಾಚಾರವಾಗಿತ್ತೆಂಬ ಆರೋಪಗಳು ಕೇಳಿಬಂದಿದ್ದವು. ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಆಗಿನ ಕಾಲದಲ್ಲಿ ದೊಡ್ಡ ಮಟ್ಟದ ಹಗರಣದ ಅಲೆ ಎಬ್ಬಿಸಿದ ಪ್ರಕರಣವದು.

ಉತ್ತರ ಪ್ರದೇಶ ಅಸೆಂಬ್ಲಿಯನ್ನೇ ಸ್ಫೋಟಿಸಲು ಹೊರಟಿದ್ದ ಆ ಬಿಳಿಪುಡಿಯ ರಹಸ್ಯಉತ್ತರ ಪ್ರದೇಶ ಅಸೆಂಬ್ಲಿಯನ್ನೇ ಸ್ಫೋಟಿಸಲು ಹೊರಟಿದ್ದ ಆ ಬಿಳಿಪುಡಿಯ ರಹಸ್ಯ

Reopen Bofors Arms Case, CBI Told By Lawmakers

2005ರಲ್ಲಿ ದೆಹಲಿ ನ್ಯಾಯಾಲಯವು ಆದೇಶವನ್ನು ನೀಡಿ ಬೋಫೋರ್ಸ್ ಹಗರಣದ ಬಗ್ಗೆ ಮತ್ಯಾವುದೇ ತನಿಖೆ ನಡೆಸದಂತೆ ಕಟ್ಟಾಜ್ಞೆ ವಿಧಿಸಿತ್ತು.

ಇದನ್ನು, ಶುಕ್ರವಾರ ನಡೆದ ರಕ್ಷಣಾ ಇಲಾಖೆಯ ಸಂಸದೀಯ ಸಮಿತಿಯೊಂದರ ಸಭೆ ಇತ್ತೀಚೆಗೆ ನಡೆದಿತ್ತು. ಅದರಲ್ಲಿ, ಬಿಜೆಡಿ ಸಂಸದ ಭಾರ್ತೃಹರಿ ಮೆಹತಾಬ್, ಬಿಜೆಪಿಯ ಸಂಸದ ನಿಶಿಕಾಂತ್ ದುಬೆ ಭಾಗವಹಿಸಿದ್ದರು. ಮೆಹತಾಬ್ ಈ ಸಮಿತಿಯ ಅಧ್ಯಕ್ಷರೂ ಹೌದು.

ಮಣಿಪುರದ 62 ನಕಲಿ ಎನ್‌ಕೌಂಟರ್‌ಗಳ ತನಿಖೆ ಸಿಬಿಐ ಹೆಗಲಿಗೆಮಣಿಪುರದ 62 ನಕಲಿ ಎನ್‌ಕೌಂಟರ್‌ಗಳ ತನಿಖೆ ಸಿಬಿಐ ಹೆಗಲಿಗೆ

ಸಭೆಯಲ್ಲಿ ಬೋರ್ಫೋರ್ಸ್ ಹಗರಣವನ್ನು ಮತ್ತೊಮ್ಮೆ ತನಿಖೆ ನಡೆಸುವಂತೆ ಅಲ್ಲಿನ ಸದಸ್ಯರು ಸಿಬಿಐಗೆ ಶಿಫಾರಸು ಮಾಡಿದರೆಂದು ಅದೇ ಸಮಿತಿಯಲ್ಲಿದ್ದ, ಹೆಸರನ್ನೇಳಲು ಇಚ್ಛಿಸದ ಸದಸ್ಯರುಗಳು ತನಗೆ ತಿಳಿಸಿರುವುದಾಗಿ ವಾಹಿನಿಯು ವರದಿಯಲ್ಲಿ ಹೇಳಿದೆ.

ಬೋಫೋರ್ಸ್ ಫಿರಂಗಿಗೆ ಕಿಚ್ಚು ಹಚ್ಚಿದ ಪ್ರಣಬ್ಬೋಫೋರ್ಸ್ ಫಿರಂಗಿಗೆ ಕಿಚ್ಚು ಹಚ್ಚಿದ ಪ್ರಣಬ್

2005ರಲ್ಲಿ ದೆಹಲಿ ನ್ಯಾಯಾಲಯ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ಬೋಫೋರ್ಸ್ ಹಗರಣವನ್ನು ಮತ್ತೆ ತನಿಖೆಗೆ ಒಳಪಡಿಸಲು ಸಾಧ್ಯವಿದೆ ಎಂದು ಆ ಸಂಸದರು ಹೇಳಿದ್ದಾರೆನ್ನಲಾಗಿದೆ.

English summary
The Bofors arms case involving allegations of kickbacks to then prime minister Rajiv Gandhi and other top officials should be reopened and the CBI should ask for the government's permission to go to the Supreme Court for it, a group of MPs said at a meeting yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X