ಕಪ್ಪು ಮಾರುಕಟ್ಟೆ: ಒಂದು ಡೋಸ್ ರೆಮ್ಡೆಸಿವಿರ್ ಲಸಿಕೆಗೆ 25 ರಿಂದ 40 ಸಾವಿರ ರೂ.!

ಮೀರತ್, ಏಪ್ರಿಲ್ 25: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ನಿತ್ಯ ಸಾವಿರ ಸಾವಿರ ಜನರು ಪ್ರಾಣ ಬಿಡುತ್ತಿದ್ದಾರೆ. ಇದರ ಮಧ್ಯೆ ಉತ್ತರ ಪ್ರದೇಶದ ಮೀರತ್ ನಲ್ಲಿ ಜೀವ ರಕ್ಷಣ ಲಸಿಕೆ ಆಗಿರುವ ರೆಮ್ಡೆಸಿವಿರ್ ಲಸಿಕೆಯನ್ನು ಕಪ್ಪು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಮಾತ್ರ ರೆಮ್ಡೆಸಿವಿರ್ ಲಸಿಕೆಯನ್ನು ನೀಡಲಾಗುತ್ತಿದೆ. ಆದರೆ ಮೀರತ್ ಸಬರ್ಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಬ್ಬರು ವಾರ್ಡ್ ಸಿಬ್ಬಂದಿಯು ಒಂದು ಡೋಸ್ ರೆಮ್ಡೆಸಿವಿರ್ ಲಸಿಕೆಯನ್ನು ಕಳ್ಳದಾರಿಯಲ್ಲಿ 25,000 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸಬರ್ಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾದ ಕೊವಿಡ್-19 ರೋಗಿಗಳಿಗೆ ರೆಮ್ಡೆಸಿವಿರ್ ಲಸಿಕೆ ಬದಲು ಇಬ್ಬರು ವಾರ್ಡ್ ಸಿಬ್ಬಂದಿಯು ಇಂಜೆಕ್ಷನ್ ಗಳಲ್ಲಿ ನೀರನ್ನು ನೀಡುತ್ತಿದ್ದಾರೆ ಎಂಬುದನ್ನು ಮಫ್ತಿನಲ್ಲಿದ್ದ ಪೊಲೀಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

Remdesivir Injections Selling In Black Market For 2500 Per Dose; 6 Ward Boy Arrested In Meerat

ಆರು ಆರೋಪಿಗಳ ಬಂಧನ:

ರೆಮ್ಡೆಸಿವಿರ್ ಲಸಿಕೆಯನ್ನು ಕಳ್ಳ ದಾರಿಯಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಆರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧನಕ್ಕೆ ತೆರಳಿದ ವೇಳೆಯಲ್ಲಿ ನಾಲ್ವರು ಬೌನ್ಸರ್ಸ್ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ದೆಹಲಿಯಲ್ಲಿ ನಾಲ್ವರು ಆರೋಪಿಗಳ ಬಂಧನ:

ನವದೆಹಲಿಯಲ್ಲೂ ಕೂಡಾ ಕೊರೊನಾವೈರಸ್ ಸೋಂಕಿತರಿಗೆ ನೀಡಲು ಅಗತ್ಯವಾಗಿರುವ ರೆಮ್ಡೆಸಿವಿರ್ ಲಸಿಕೆಯನ್ನು ಕಪ್ಪು ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ನಾಲ್ವರು ಆರೋಪಿಗಳು ಪ್ರತ್ಯೇಕ ತಂಡಗಳಿಗೆ ಸೇರಿದವರು ಎಂದು ತಿಳಿದು ಬಂದಿದ್ದು, ಬಂಧಿತರಿಂದ 81 ಇಂಜೆಕ್ಷನ್ ಟ್ಯೂಬ್ ಅನ್ನು ವಶಕ್ಕೆ ಪಡೆಯಲಾಗಿದೆ.

ದೇಶಾದ್ಯಂತ ಕೊವಿಡ್ ಚಿಕಿತ್ಸೆಗೆ ಬಳಸುವ ರೆಮ್ಡೆಸಿವಿರ್ ಮತ್ತು ಇತರ ಔಷಧಿಗಳ ಕೊರತೆಯ ಬಗ್ಗೆ ದರೋಡೆಕೋರರಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಅವರು ಈ ಔಷಧಿಗಳನ್ನು ಸಂಗ್ರಹಿಸಿ ಕಪ್ಪು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಜಾಲದ ಕೈವಾಡವಿದೆ. ಅವರು ರೆಮ್ಡೆಸಿವಿರ್ ಲಸಿಕೆಯನ್ನು 25,000 ದಿಂದ, 000 40,000 ರೂಪಾಯಿಗೆ ಮಾರಾಟ ಮಾಡುತ್ತಿದೆ ಎಂದು ಅಪರಾಧ ವಿಭಾಗ ಪೊಲೀಸ್ ಉಪ-ಆಯುಕ್ತರಾದ ಮೋನಿಕಾ ಭಾರದ್ವಾಜ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+