Reliance & Disney: ರಿಲಯನ್ಸ್ & ಡಿಸ್ನಿ ವಿಲೀನ ಪ್ರಕ್ರಿಯೆ ಕಂಪ್ಲೀಟ್!
ಭಾರತದ ಬಹುದೊಡ್ಡ ಮಾಧ್ಯಮ ವಿಲೀನ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದೆ. ಹೀಗಾಗಿ, ರಿಲಯನ್ಸ್ & ಡಿಸ್ನಿ ವಿಲೀನ ಪ್ರಕ್ರಿಯೆ ಇದೀಗ ಇಡೀ ದೇಶದ ಗಮನವನ್ನ ಸೆಳೆದಿದೆ. ಕೆಲವು ದಿನಗಳಿಂದ ಕೂಡ ಈ ಪ್ರಕ್ರಿಯೆ ವೇಗ ಪಡೆದುಕೊಂಡಿತ್ತು. ಹಾಗೆಯೇ ದೇಶದ ಬಹುದೊಡ್ಡ ಸಂಸ್ಥೆ ರಿಲಯನ್ಸ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಡಿಸ್ನಿ ವಿಲೀನ ಪ್ರಕ್ರಿಯೆ ಮಾಧ್ಯಮ ಲೋಕದ ಗಮನ ಕೂಡ ಸೆಳೆದಿತ್ತು. ಇದೀಗ ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ವಯಾಕಾಮ್-18 ಮೀಡಿಯಾ ಪ್ರೈವೇಟ್ ಲಿಮಿಟೆಡ್ & ದಿ ವಾಲ್ಟ್ ಡಿಸ್ನಿ ಕಂಪನಿ ಘೋಷಣೆ ಮಾಡಿದಂತೆ ಇದೀಗ ವಿಲೀನ ಪ್ರಕ್ರಿಯೆ ಪೂರ್ಣವಾಗಿದೆ. ವಯಾಕಾಮ್-18 ಮಾಧ್ಯಮ ಹಾಗೂ ಜಿಯೋ ಸಿನಿಮಾ ವ್ಯವಹಾರಗಳ ವಿಲೀನವನ್ನು ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಪೂರ್ಣಗೊಳಿಸಲಾಗಿದೆ.

ಎಷ್ಟು ಸಾವಿರ ಕೋಟಿ ಹೂಡಿಕೆ?
ಎನ್‌ಸಿಎಲ್‌ಟಿ ಮುಂಬೈ, ಭಾರತದ ಸ್ಪರ್ಧಾತ್ಮಕ ಆಯೋಗ, ಇತರ ನಿಯಂತ್ರಣ ಪ್ರಾಧಿಕಾರಗಳ ಅನುಮೋದನೆಯ ನಂತರ ಈ ಘೋಷಣೆ ಹೊರಬಿದ್ದಿದೆ. ಇದರ ಜೊತೆ ರಿಲಯನ್ಸ್‌ನಿಂದ ಜಂಟಿ ಉದ್ಯಮದಲ್ಲಿ ₹11,500 ಕೋಟಿ ಅಂದ್ರೆ ಸುಮಾರು 1.4 ಬಿಲಿಯನ್ ಡಾಲರ್ ಹೂಡಿಕೆ ಆಗಿದೆ. ಜಂಟಿ ಉದ್ಯಮವು ವಯಾಕಾಮ್ 18 ಮತ್ತು ರಿಲಯನ್ಸ್‌ಗೆ ಷೇರುಗಳನ್ನು ಹಂಚಿಕೆ ಮಾಡಿದೆ. ಈ ವಿಲೀನ ಪ್ರಕ್ರಿಯೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿದೆ.
ನೀತಾ ಅಂಬಾನಿ ಅವರಿಗೆ ಅಧ್ಯಕ್ಷ ಸ್ಥಾನ
ಇದೀಗ ವಿಲೀನ ಪ್ರಕ್ರಿಯೆ ಹಿನ್ನೆಲೆ ಒಟ್ಟು ₹70,352 ಕೋಟಿ ಅಂದ್ರೆ 8.5 ಶತಕೋಟಿ ಡಾಲರ್ ಬೃಹತ್ ಜಂಟಿ ಉದ್ಯಮವಾಗಿ ಹೊರ ಹೊಮ್ಮಲಿದೆ. ಈ ಜಂಟಿ ಉದ್ಯಮದ ಮೇಲೆ ರಿಲಯನ್ಸ್ ಸಂಸ್ಥೆ ನಿಯಂತ್ರಣ ಹೊಂದಿರುತ್ತದೆ. ಇದರಲ್ಲಿ ರಿಲಯನ್ಸ್ ಶೇ 16.34ರಷ್ಟು, ವಯಾಕಾಮ್ 18 ಶೇಕಡಾ 46.82 ಮತ್ತು ಡಿಸ್ನಿ ಶೇ 36.84ರಷ್ಟು ಪಾಲನ್ನು ಹೊಂದಿರುತ್ತದೆ. ನೀತಾ ಎಂ. ಅಂಬಾನಿ ಅವರು ಈ ಜಂಟಿ ಉದ್ಯಮದಲ್ಲಿ ಅಧ್ಯಕ್ಷರಾಗಿದ್ದರೆ, ಉದಯ್ ಶಂಕರ್ ಅವರನ್ನ ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಜಂಟಿ ಉದ್ಯಮದ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.
ಭಾರತೀಯ ವೀಕ್ಷಕರಿಗೆ ಸಿಗಲಿದೆ ಬಂಪರ್!
ಜಂಟಿ ಉದ್ಯಮ, ಭಾರತದಲ್ಲಿ ಟಿವಿ & ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ್ಯಂತ ಅತ್ಯಂತ ಪ್ರತಿಷ್ಠಿತ ಮತ್ತು ಆಕರ್ಷಕ ಮಾಧ್ಯಮ ಬ್ರ್ಯಾಂಡ್‌ಗಳನ್ನು ಹೊಂದಿದೆ. ಟಿವಿ ಚಾನೆಲ್‌ಗಳಾದ 'ಸ್ಟಾರ್' & 'ಕಲರ್ಸ್' ಹೊರತುಪಡಿಸಿ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ 'ಜಿಯೋ ಸಿನಿಮಾ' ಹಾಗೂ 'ಹಾಟ್‌ಸ್ಟಾರ್' ವೀಕ್ಷಕರಿಗೆ ಮನರಂಜನೆ ಮತ್ತು ಕ್ರೀಡೆಗೆ ಸಂಬಂಧಿಸಿದ ಕಂಟೆಂಟ್ ಗಳಲ್ಲಿ ವ್ಯಾಪಕ ಆಯ್ಕೆಯನ್ನು ನೀಡುತ್ತದೆ.












Click it and Unblock the Notifications