ಅಯೋಧ್ಯಾ, ಗಂಗಾ, ತಿರಂಗಾಕ್ಕಾಗಿ ಜೈಲಿಗೆ ಹೋಗಲು ಸಿದ್ಧ : ಉಮಾ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 19: ಬಾಬ್ರಿ ಮಸೀದಿ ಧ್ವಂಸಗೊಳಿಸಲು ಸಂಚು ರೂಪಿಸಿದ ಆರೋಪ ಹೊತ್ತಿರುವ ಪೈಕಿ ಮೊದಲ ಪ್ರತಿಕ್ರಿಯೆ ಹೊರ ಬಂದಿದೆ. ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕಿ, ಗಂಗಾ ನದಿ ಪವಿತ್ರಗೊಳಿಸುವ ಕಾಯಕ ಹೊತ್ತಿರುವ ಕೇಂದ್ರ ಸಚಿವೆ ಉಮಾ ಭಾರತಿ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ಗಂಗಾ, ಅಯೋಗಧ್ಯಾ ಹಾಗೂ ತ್ರಿವರ್ಣ ಧ್ವಜಕ್ಕಾಗಿ ನಾನು ಯಾವುದೇ ಕಠಿಣ ಶಿಕ್ಷೆ ಅನುಭವಿಸಲು ಸಿದ್ಧ. ಯಾವ ಪಿತೂರಿಯನ್ನು ನಾವು ಮಾಡಿಲ್ಲ. ಬೇಕಾದರೆ ಜೈಲಿಗೆ ತಳ್ಳಿ ಎಂದಿದ್ದಾರೆ.[ಬಾಬ್ರಿ ಮಸೀದಿ ಧ್ವಂಸ ಪ್ರಕರಣ : 8 ಪ್ರಮುಖ ಬೆಳವಣಿಗೆ]

'Ready to face anything for Ayodhya, Ganga and Tiranga's sake', says Uma Bharti

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಬುಧವಾರ(ಏಪ್ರಿಲ್ 19) ಮಹತ್ವದ ಆದೇಶ ನೀಡಿದ್ದು, ಎಲ್ ಕೆ ಅಡ್ವಾಣಿ, ಉಮಾ ಭಾರತಿ,ಮುರಳಿ ಮನೋಹರ ಜೋಶಿ ಸೇರಿದಂತೆ 13 ಮಂದಿ ಬಿಜೆಪಿ ಹಾಗೂ ಕರಸೇವಕರ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸಲು ಸಿಬಿಐ ಕೋರಿದ್ದ ಮನವಿಗೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ.

25ವರ್ಷಗಳಿಗೂ ಅಧಿಕ ಕಾಲದ ಮಸೀದಿ ಧ್ವಂಸ ಪ್ರಕರಣದಲ್ಲಿ ಸಂಚಿನ ಆರೋಪ ಸಾಬೀತಾದರೆ ಭಾರತೀಯ ಜನತಾ ಪಕ್ಷದ ಭೀಷ್ಮ ಎಲ್.ಕೆ ಅಡ್ವಾಣಿ ಸೇರಿದಂತೆ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.[ಬಾಬ್ರಿ ಮಸೀದಿ ಧ್ವಂಸ ಕೇಸ್: ಅಡ್ವಾಣಿ ವಿರುದ್ಧ ವಿಚಾರಣೆಗೆ ಅಸ್ತು]

ರಾಜೀನಾಮೆ ನೀಡಲ್ಲ : ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ರಾಜೀನಾಮೆಗೆ ಎಲ್ಲೆಡೆಯಿಂದ ಒತ್ತಡ ಕೇಳಿ ಬರುತ್ತಿರುವುದಕ್ಕೆ ಖಾರವಾಗಿ ಉತ್ತರಿಸಿದ್ದಾರೆ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. 1984ರಲ್ಲಿ ಹಿಂಸಾಚಾರ, ಎಮರ್ಜೆನ್ಸಿಗೆ ಕಾರಣವಾದ ಪಕ್ಷವು ನನ್ನ ರಾಜೀನಾಮೆ ಕೇಳುವ ಹಕ್ಕು ಕಳೆದುಕೊಂಡಿದೆ ಎಂದು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ.

ಭಾರತೀಯತೆಯ ಮಂತ್ರ ಪಠಿಸಿದ ಉಮಾ ಭಾರತಿ, ರಾಮ, ಗಂಗಾ, ತಿರಂಗಾಕ್ಕಾಗಿ ಭಾರತ ಹಾಗೂ ಭಾರತಕ್ಕಾಗಿ ನಾನು ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧ. ಭಾರತಕ್ಕೆ ಅಪಮಾನ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Minister Uma Bharti on Wednesday said that she will not resign from her post and would face any punishment for the sake of Ganga, Ayodhya and the tricolour.
Please Wait while comments are loading...