ಉದ್ದಿಮೆದಾರರ ಸಾಲ WRITTEN OFF: ರಾಜಕೀಯ ನಾಯಕರ ಪ್ರತಿಕ್ರಿಯೆ
ಮುಂಬೈ, ಏಪ್ರಿಲ್ 29: ಉದ್ಯಮಿ ಮೆಹುಲ್ ಚೋಕ್ಸಿ, ವಿಜಯ್ ಮಲ್ಯ ಅವರ ಕಂಪನಿ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ರೂ ಸುಸ್ತಿ ಸಾಲವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರಿಟನ್ ಆಫ್ಮಾಡಿದೆ.
ಆರ್‌ಬಿಐನ ಈ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,ಸುರ್ಜೇವಾಲಾ ಸೇರಿದಂತ ಅನೇಕ ರಾಜಕೀಯ ಮುಖಂಡರುಗಳು ಖಂಡಿಸಿದ್ದಾರೆ.
ರೈತರು ಹಾಗೂ ವಿವಿಧ ವರ್ಗಗಳಿಗೆ ಮಾಡುವ ಸಾಲ ಮನ್ನಾ ಇದಲ್ಲ. ಬ್ಯಾಂಕುಗಳು ವಸೂಲಾಗದ ಸಾಲಗಳನ್ನು ತಮ್ಮ ಬ್ಯಾಲೆನ್ಸ್‌ಶೀಟ್‌ನಿಂದ ಕೈಬಿಡಲು ಈ ಕಸರತ್ತು ನಡೆಸುತ್ತವೆ. ಆದರೆ ವಸೂಲಾತಿ ಪ್ರಕ್ರಿಯೆ ಮುಂದುವರೆಯುತ್ತದೆ.
ಮುಂದೊಂದು ದಿನ ಸಾಲ ವಸೂಲಾದರೆ ಅದನ್ನು ಲಾಭ ಎಂದು ತೋರಿಸಿಕೊಳ್ಳುತ್ತವೆ, ರೈಟಾಫ್ ಆದ ಸಾಲವನ್ನು ವಸೂಲಿ ಮಾಡಿರುವ ಸಾಕಷ್ಟು ನಿದರ್ಶನಗಳು ಕಣ್ಣ ಮುಂದಿವೆ.
ಬ್ಯಾಂಕ್‌ಗಳು ತಾವು ನೀಡಿರುವ ಸಾಲದ ಮರು ವಸೂಲಾತಿ ತುಂಬಾ ಕಷ್ಟ ಎಂದು ಗಮನಕ್ಕೆ ಬಂದಾಗ ಈ ಕ್ರಮ ಕೈಗೊಳ್ಳುತ್ತವೆ. ಸುಸ್ತಿ ಸಾಲಗಳನ್ನು ತಮ್ಮ ಬ್ಯಾಲೆನ್ಸ್ ಶೀಟ್‌ನಿಂದ ಪ್ರತ್ಯೇಕಗೊಳಿಸಲು 'ರಿಟನ್ ಆಫ್' ಪದ್ಧತಿಯನ್ನು ಬಳಸುತ್ತವೆ.
ಇದು ಲೆಕ್ಕಪತ್ರಗಳ ಅನುಕೂಲಕ್ಕಾಗಿ ಬಳಸಬಹುದಾದ ವಿಧಾನ ಮಾತ್ರ. ಇದರಿಂದ ಬ್ಯಾಂಕ್‌ಗಳಿಗೆ ತೆರಿಗೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ರಿಟನ್ ಆಫ್ಎಂದರೆ ಯಾವುದೇ ಕಾರಣಕ್ಕೂ ಸಾಲ ಮನ್ನಾ ಅಲ್ಲವೇ ಅಲ್ಲ.
संसद में मैंने एक सीधा सा प्रश्न पूछा था- मुझे देश के 50 सबसे बड़े बैंक चोरों के नाम बताइए।
— Rahul Gandhi (@RahulGandhi) April 28, 2020
वित्तमंत्री ने जवाब देने से मना कर दिया।
अब RBI ने नीरव मोदी, मेहुल चोकसी सहित भाजपा के ‘मित्रों’ के नाम बैंक चोरों की लिस्ट में डाले हैं।
इसीलिए संसद में इस सच को छुपाया गया। pic.twitter.com/xVAkxrxyVM
ಸಂಸದ ರಾಹುಲ್ ಗಾಂಧಿ ಪ್ರತಿಕ್ರಿಯೆ
ಸಂಸತ್ತಿನಲ್ಲಿ ಒಂದೇ ಒಂದು ಪ್ರಶ್ನೆ ಕೇಳಿದ್ದೆ, ದೇಶದ 50 ದೊಡ್ಡ ಕಳ್ಳರ ಹೆಸರು ಹೇಳಿ ಎಂದು, ವಿತ್ತ ಸಚಿವರು ಉತ್ತರ ಹೇಳಲು ನಿರಾಕರಿಸಿದರು. ಈ ಹಿಂದೆ ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಪ್ರಮುಖ 50 ಸುಸ್ತಿದಾರರ ಪಟ್ಟಿಯನ್ನು ನೀಡುವಂತೆ ನಾನು ಕೇಳಿದ್ದೆ. ಆದರೆ ಕೇಂದ್ರ ಸರ್ಕಾರ ಆ ಸಮಯದಲ್ಲಿ ಯಾವುದೇ ಉತ್ತರ ನೀಡಿರಲಿಲ್ಲ. ಈಗ ನೋಡಿದರೆ, ಬಿಜೆಪಿಗೆ ಬೇಕಿರುವ ಸ್ನೇಹಿತರ ಹೆಸರುಗಳುಳ್ಳ 50 ಸುಸ್ತಿದಾರರ ಪಟ್ಟಿಯನ್ನು ನೀಡಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದೇ ಕಾರಣಕ್ಕಾಗಿಯೇ ವಿತ್ತ ಸಚಿವರು ಮಾಹಿತಿ ನೀಡಲು ನಿರಾಕರಿಸಿದ್ದರು ಎನ್ನುವುದು ತಿಳಿದುಬಂದಿದೆ.

ಆರ್‌ಟಿಐ ಕಾರ್ಯಕರ್ತ ಗೋಖಲೆ ಹೇಳುವುದೇನು?
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಳಿದ್ದ ಪ್ರಶ್ನೆಗೆ 2020ರ ಫೆ.16 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ ಉತ್ತರ ನೀಡಲು ನಿರಾಕರಿಸಿದ್ದರಿಂದ ನಾನು ಆರ್‌ಟಿ ಐ ಅರ್ಜಿ ಸಲ್ಲಿಸಿದ್ದೆ. 2019ರ ಸೆಪ್ಟೆಂಬರ್ 30ರವರೆಗಿನ 68,607 ಕೋಟಿ ರೂ. ಸುಸ್ತಿಸಾಲವನ್ನು ತಾಂತ್ರಿಕವಾಗಿ ಮನ್ನಾ ಮಾಡಲಾಗಿದೆ ಎಂದು ಆರ್‌ಬಿಐ ಮಾಹಿತಿ ಅಧಿಕಾರಿ ಅಭಯ್ ಕುಮಾರ್ ಏ.24 ರಂದು ಲಿಖಿತ ಉತ್ತರ ನೀಡಿರುವುದಾಗಿ ತಿಳಿಸಿದ್ದಾರೆ.
|
ಭಾರತದಲ್ಲಿ ಹಣ ಲೂಟಿ ಮಾಡಿ ವಿದೇಶಕ್ಕೆ ಹೋಗುವ ದಂದೆ
ಬ್ಯಾಂಕ್‌ನಲ್ಲಿ ಹಣ ಲೂಟಿ ಮಾಡಿ, ವಿದೇಶಕ್ಕೆ ಹೋಗಿ ಅಲ್ಲಿಂದ ಸಾಲ ಮನ್ನಾ ಮಾಡಿಸುತ್ತಿದ್ದವರ ಬಣ್ಣ ಬಯಲಾಗಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ, ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಉದ್ದಿಮೆದಾರರ 68 ಸಾವಿರ ಕೋಟಿ ರೂ ರೈಟ್ ಆಫ್ ಮಾಡಿರುವ ಮೋದಿ ಸರ್ಕಾರಕ್ಕೆ ಏನೆನ್ನಬೇಕು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಸಾಲ ರೈಟ್ ಆಫ್ ಕುರಿತು ಕಾಂಗ್ರೆಸ್ ದೇಶದ ಜನರ ದಾರಿ ತಪ್ಪಿಸುತ್ತಿದೆ
ಆರ್‌ಬಿಐ ದೇಶದ 50 ಮಂದಿ ಉದ್ದೇಶಪೂರ್ವಕ ಸುಸ್ತಿದಾರರ ಸಾಲವನ್ನು ಮನ್ನಾ ಮಾಡಿಲ್ಲ ರೈಟ್ ಆಫ್ ಮಾಡಲಾಗಿದೆ. ಆದರೆ ಕಾಂಗ್ರೆಸ್ ಪಕ್ಷವು ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.
-
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications