ವಿಜಯ್ ಮಲ್ಯ ಬ್ಯಾಂಕ್ ರಜೆ ಇದ್ದಾಗ ಮಾತ್ರ ಟ್ವಿಟರ್‌ನಲ್ಲಿ ಪ್ರತ್ಯಕ್ಷರಾಗುತ್ತಾರೆ: ರಕ್ಷಾ ಬಂಧನ ಶುಭಾಶಯಕ್ಕೆ ನೆಟ್ಟಿಗರ ಟಾಂಟ್

Vijay Mallya: ದೇಶಾದ್ಯಂತ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿದೆ. ಇನ್ನೂ ರಾಯಲ್‌ ಚಾಲೆಂಜರ್ಸ್‌ ಹಾಗೂ ಕಿಂಗ್‌ಫಿಷರ್ ಸಂಸ್ಥೆಯ ಮಾಜಿ ಮಾಲೀಕರಾದ ವಿಜಯ್ ಮಲ್ಯ ಅವರು ಎಲ್ಲಾರಿಗೂ ರಕ್ಷಾ ಬಂಧನದ ಶುಭಾಶಯಗಳು ಎಂದು ಟ್ವಿಟ್‌ನಲ್ಲಿ ಬರೆದುಕೊಳ್ಳುವ ಮೂಲಕ ಟ್ರೋಲ್‌ ಆಗಿದ್ದಾರೆ. ಹಾಗಾದ್ರೆ ನೆಟ್ಟಿಗರು ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಭಾರತದಿಂದ ಲಂಡನ್‌ಗೆ ಹಾರಿರುವ ಖ್ಯಾತ ಉದ್ಯಮಿ ಹಾಗೂ ಮಾಜಿ ಕಿಂಗ್‌ಫಿಷರ್ ಸಂಸ್ಥೆಯ ಮಾಲೀಕ ವಿಜಯ್ ಮಲ್ಯ ಅವರು ಪವಿತ್ರ ಹಬ್ಬ ರಕ್ಷಾ ಬಂಧನದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

RCB Former Owner Vijay Mallya Raksha Bandhan Tweet Goes Viral Netizens Troll Him Know details

ರಕ್ಷಾ ಬಂಧನದ ಶುಭಾಶಯ ಕೋರಿದ ಮಲ್ಯ

'ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು' ಎಂದು ಬರೆದುಕೊಂಡಿರುವ ವಿಜಯ್ ಮಲ್ಯ ಅವರ ಟ್ವೀಟ್ ಇದೀಗ ವ್ಯಾಪಕ ಚರ್ಚೆ ಮತ್ತು ನೆಟ್ಟಿಗರ ಸರಣಿ ಟ್ರೋಲ್‌ಗಳಿಗೆ ಕಾರಣವಾಗಿದೆ. ವಿಜಯ್ ಮಲ್ಯ ಅವರು ಭಾರತೀಯ ಪ್ರಮುಖ ಹಬ್ಬಗಳು ಬಂದಾಗಲೆಲ್ಲಾ ಜಾಲತಾಣಗಳಲ್ಲಿ ಶುಭಾಶಯ ಸಂದೇಶಗಳನ್ನು ಹಂಚಿಕೊಳ್ಳುವ ಅಭ್ಯಾಸ ಇಟ್ಟುಕೊಂಡಿದ್ದಾರೆ.

ವಿಜಯ್ ಮಲ್ಯ ಟ್ವಿಟ್‌ಗೆ ನೆಟ್ಟಿಗರು ಹೇಳೋದೇನು?

ವಿಜಯ್ ಮಲ್ಯ ಅವರ ಈ ಶುಭಾಶಯ ಸಂದೇಶಕ್ಕೆ ಹಲವು ನೆಟ್ಟಿಗರು ವ್ಯಂಗ್ಯ ಕಾಮೆಂಟ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ. 'ಭಾರತದಲ್ಲಿ ಯಾವುದೇ ಪ್ರಮುಖ ಹಬ್ಬ ಅಥವಾ ಬ್ಯಾಂಕ್ ರಜೆ ಇದ್ದಾಗ ಮಾತ್ರ ವಿಜಯ್ ಮಲ್ಯ ಟ್ವಿಟರ್‌ನಲ್ಲಿ ಪ್ರತ್ಯಕ್ಷರಾಗುತ್ತಾರೆ. ಹಾಗಾಗಿ ಅವರ ಟ್ವೀಟ್ ನೋಡಿದರೆ ಇಂದು ಬ್ಯಾಂಕ್ ರಜೆ ಎಂದು ತಿಳಿಯುತ್ತದೆ,' ಎಂದು ಅನೇಕರು ಲೇವಡಿ ಮಾಡಿದ್ದಾರೆ.

'ಶುಭಾಶಯಗಳು ಸರಿ, ಮೊದಲು ಬ್ಯಾಂಕುಗಳಿಂದ ಪಡೆದ ಸಾಲದ ಹಣವನ್ನು ವಾಪಸ್ ಕೊಡಿ ಹಾಗೂ ಸ್ವಂತ ದೇಶಕ್ಕೆ ವಾಪಸ್ ಬಂದು ಹಬ್ಬ ಆಚರಿಸಿ,' ಅಂತಲೂ ಕಾಮೆಂಟ್‌ಗಳನ್ನು ಸಾಲು ಸಾಲಾಗಿ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಭಾರತೀಯ ಬ್ಯಾಂಕುಗಳನ್ನು ಟ್ಯಾಗ್ ಮಾಡಿ, ಮಲ್ಯ ಅವರಿಗೆ ಸಾಲ ಮರುಪಾವತಿ ಮಾಡಬೇಕೆಂದು ನೆನಪಿಸುವ ಹಾಸ್ಯಮಯ ಮೀಮ್ಸ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

ವಿಜಯ್ ಮಲ್ಯ ಪ್ರಕರಣದ ಹಿನ್ನೆಲೆ

ಕಿಂಗ್‌ಫಿಷರ್ ಏರ್‌ಲೈನ್ಸ್ ನಷ್ಟಕ್ಕೊಳಗಾದ ಬಳಿಕ ದೇಶದ 17ಕ್ಕೂ ಹೆಚ್ಚು ಪ್ರಮುಖ ಬ್ಯಾಂಕುಗಳಿಂದ ಪಡೆದ ಸುಮಾರು 9,000 ಕೋಟಿ ರೂಪಾಯಿಗೂ ಹೆಚ್ಚಿನ ಸಾಲವನ್ನು ಮರುಪಾವತಿಸದೆ ವಿಜಯ್ ಮಲ್ಯ 2016ರಲ್ಲಿ ಲಂಡನ್‌ಗೆ ತೆರಳಿದ್ದರು. ಸದ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಸುದೀರ್ಘ ಕಾನೂನು ಸಮರಗಳು ನಡೆಯುತ್ತಿವೆ. ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಭಾರತೀಯ ಬ್ಯಾಂಕುಗಳು ಈಗಾಗಲೇ ಮಲ್ಯ ಅವರ ಸಾವಿರಾರು ಕೋಟಿ ಮೌಲ್ಯದ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಪ್ರಕ್ರಿಯೆಯ ಮೂಲಕ ಕಾಯ್ದಿರಿಸಿದ ಬಾಕಿ ಹಣವನ್ನು ವಸೂಲಿ ಮಾಡುತ್ತಿವೆ.

ಇತ್ತೀಚಿನ ದಿನಗಳಲ್ಲಿ ಜೀ ಗ್ರೂಪ್ ಹಾಗೂ ಇತರೆ ಕಾರ್ಪೊರೇಟ್ ಸಾಲ ಮನ್ನಾ ವಿಚಾರಗಳಿಗೆ ಸಂಬಂಧಿಸಿದಂತೆ ಮಲ್ಯ ಬರೆದುಕೊಂಡಿದ್ದ ಟ್ವಿಟ್‌ಗಳು ಸುದ್ದಿಯಾಗಿದ್ದವು. ಇದರ ಬೆನ್ನಲ್ಲೇ ಈಗ ರಕ್ಷಾ ಬಂಧನ ಶುಭಾಶಯದ ಟ್ವಿಟ್‌ ಕೂಡ ವೈರಲ್ ಆಗಿದೆ. ವಿದೇಶದಲ್ಲಿ ನೆಲೆಸಿದ್ದರೂ ಅವರ ಪ್ರತಿಯೊಂದು ಸಾಮಾಜಿಕ ಜಾಲತಾಣದ ನಡೆ ಭಾರತದಲ್ಲಿ ದೊಡ್ಡ ಮಟ್ಟದ ಗಮನ ಸೆಳೆಯುತ್ತಿರುವುದಕ್ಕೆ ಈ ಘಟನೆ ಮತ್ತೊಂದು ನಿದರ್ಶನವಾಗಿದೆ ಎನ್ನಲಾಗುತ್ತಿದೆ.

ವಿಜಯ್ ಮಲ್ಯ ಅವರು ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದು, ಯುನೈಟೆಡ್ ಬ್ರೂವರೀಸ್‌ (ಯುಬಿ) ಗ್ರೂಪ್‌ನೊಂದಿಗೆ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಿದರು. 1955ರಲ್ಲಿ ಜನಿಸಿದ ಅವರು 28ನೇ ವಯಸ್ಸಿನಲ್ಲಿ ತಂದೆ ವಿಠ್ಠಲ್ ಮಲ್ಯ ಅವರ ನಿಧನದ ಬಳಿಕ ಯುಬಿ ಗ್ರೂಪ್‌ನ ಮಾಲೀಕತ್ವವನ್ನು ವಹಿಸಿಕೊಂಡರು. ಕಿಂಗ್‌ಫಿಶರ್ ಬ್ರ್ಯಾಂಡ್ ಮೂಲಕ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದ ಅವರು, ಬಳಿಕ ಕಿಂಗ್‌ಫಿಶರ್ ಏರ್‌ಲೈನ್ಸ್‌ ಆರಂಭಿಸಿದರು. ಆದರೆ ವಿಮಾನಯಾನ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ 2012ರಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿತು. ಇದೀಗ ಸದ್ಯ ಅವರು ವಿದೇಶದಲ್ಲಿದ್ದು, ಅವರು ಹಬ್ಬ-ಹರಿದಿನಗಳಿಗೆ ಶುಭಾಶಯಗಳ ಟ್ವಿಟ್‌ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+