ಫೆ. 1ರಿಂದ ಎಟಿಎಂನಿಂದ ಈ ಹಿಂದಿನಂತೆ ಹಣ ಡ್ರಾ ಮಾಡಿ!

Posted By:
Subscribe to Oneindia Kannada

ನವದೆಹಲಿ, ಜನವರಿ 30: ಚಾಲ್ತಿ ಖಾತೆ ಗಳಿಂದ ಎಟಿಎಂ ಮೂಲಕ ಡ್ರಾ ಮಾಡಿಕೊಳ್ಳುವ ವಿತ್ ಡ್ರಾ ಮಿತಿಯ ನಿಯಮವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿ ಐ) ಸಡಿಲಗೊಳಿಸಿದೆ. ಈ ಅನುಕೂಲ ಫೆ. 1ರಿಂದ ಜಾರಿಗೊಳ್ಳಲಿದೆ.

ಅಪನಗದೀಕರಣ ಹಿನ್ನೆಲೆಯಲ್ಲಿ ಚಾಲ್ತಿ ಖಾತೆಯಿಂದ ವಾರಕ್ಕೆ 1 ಲಕ್ಷ ರು. ಹಣವನ್ನು ಎಟಿಎಂಗಳ ಮೂಲಕ ಪಡೆಯಬಹುದೆಂದು ಇತ್ತೀಚೆಗೆ ಆರ್ ಬಿಐ ಸೂಚಿಸಿತ್ತು. ಇದೀಗ, ಆ ನಿಯಮವನ್ನು ಹಿಂಪಡೆಯಲಾಗಿದೆ.

 RBI withdraws cash limit for bank customers from ATMs

ಆದರೆ, ಈ ಸೌಕರ್ಯ ಉಳಿತಾಯ ಖಾತೆದಾರರಿಗೆ (ಸೇವಿಂಗ್ಸ್ ಅಕೌಂಟ್) ನೀಡಲಾಗಿಲ್ಲ. ಹೀಗಾಗಿ, ಇತ್ತೀಚಿನ ಆರ್ ಬಿಐ ಆದೇಶದನುಸಾರ ಉಳಿತಾಯ ಖಾತೆದಾರರು ವಾರಕ್ಕೆ ಗರಿಷ್ಠ 24 ಸಾವಿರ ರು. ಹಾಗೂ ದಿನವೊಂದಕ್ಕೆ 10 ಸಾವಿರ ರು.ಗಳನ್ನು ಮಾತ್ರ ಹಿಂಪಡೆಯಬಹುದಾಗಿದೆ.
ಇದು ಉಳಿತಾಯ ಖಾತೆ ಗ್ರಾಹಕರಿಗೆ ಕೊಂಚ ನಿರಾಸೆ ತರಲಿದೆ. ಆದರೆ, ಸದ್ಯದಲ್ಲೇ ಆ ನಿಯಮವನ್ನೂ ಶೀಘ್ರದಲ್ಲೇ ಹಿಂಪಡೆಯುವುದಾಗಿ ಆರ್ ಬಿಐ ಆಶ್ವಾಸನೆ ಕೊಟ್ಟಿದೆ.


ಮುಖ್ಯಾಂಶಗಳು:

- ಚಾಲ್ತಿ ಖಾತೆದಾರರಿಗೆ ಫೆ. 1ರಿಂದ ವಾರದ ಮಿತಿ ನಿಯಮವಿಲ್ಲ.

- ಇತ್ತೀಚೆಗೆ ತಾನು ನೀಡಿದ್ದ ಸೂಚನೆ ಹಿಂಪಡೆದ ಆರ್ ಬಿಐ.

- ಆದರೆ, ಉಳಿತಾಯ ಖಾತೆದಾರರಿಗೆ ಈ ಅನುಕೂಲವಿಲ್ಲ.

- ಶೀಘ್ರದಲ್ಲೇ ಉಳಿತಾಯ ಖಾತೆದಾರರ ಮಿತಿಯೂ ಸಡಿಲಿಕೆ ಸಾಧ್ಯತೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
RBI says limits on cash withdrawal from ATMs is withdrawn. Recently it has exerted the limit on bank customers to draw only Rs. 10,000 form ATMs per week.
Please Wait while comments are loading...