ಅಪನಗದೀಕರಣ ಎಫೆಕ್ಟ್: ಅರ್ಧಕರ್ಧ ಇಳಿದ ರಿಸರ್ವ್ ಬ್ಯಾಂಕ್ ಲಾಭಾಂಶ!

Written By:
Subscribe to Oneindia Kannada

ನವದೆಹಲಿ, ಆ 10: ಭಾರತೀಯ ರಿಸರ್ವ್ ಬ್ಯಾಂಕ್ 2016-17ನೇ ಸಾಲಿನ ಲಾಭಾಂಶದ ಮೊತ್ತವನ್ನು ಕೇಂದ್ರ ಸರಕಾರಕ್ಕೆ ನೀಡಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭಾಂಶದ ಮೊತ್ತ ಅರ್ಧಕರ್ಧ ಇಳಿದಿದೆ. ಇದು ಅಪನಗದೀಕರಣದ ಪ್ರಭಾವ ಎಂದು ಹೇಳಲಾಗುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಸೆಂಟ್ರಲ್ ಬೋರ್ಡ್ ಮೀಟಿಂಗ್ ನಂತರ, RBI ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ 30,659 ಕೋಟಿ ರೂಪಾಯಿ ಹೆಚ್ಚುವರಿ ಲಾಭಾಂಶದ ಮೊತ್ತವನ್ನು ಕೇಂದ್ರಕ್ಕೆ ನೀಡಲು ತೀರ್ಮಾನಿಸಲಾಗಿದೆ. ಕಳೆದ ವರ್ಷ 65,876 ಕೋಟಿ ರೂಪಾಯಿ ಡಿವಿಡೆಂಟ್ ನೀಡಲಾಗಿತ್ತು ಎಂದು ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. (ದೀಪಾವಳಿ ವೇಳೆಗೆ 200 ರು. ನೋಟು ಮಾರುಕಟ್ಟೆಗೆ ಲಗ್ಗೆ)

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಐನೂರು ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ನಿಷೇಧಿಸಿದ ನಂತರ, ರಿಸರ್ವ್ ಬ್ಯಾಂಕ್ ಲಾಭಾಂಶದಲ್ಲಿ ಇಳಿಕೆಯಾಗಿದೆ. ಇದು ಅಪನಗದೀಕರಣದ ಎಫೆಕ್ಟ್ ಎಂದು ವಿರೋಧ ಪಕ್ಷಗಳು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ.

ರಿಸರ್ವ್ ಬ್ಯಾಂಕ್ ಲಾಭಾಂಶ ಕಮ್ಮಿಯಾಗಲು ನಿಜವಾದ ಕಾರಣ ಏನೆಂದು ಹೇಳಲಾಗದಿದ್ದರೂ, ಹೊಸ ಮುಖಬೆಲೆಯ ನೋಟಿನ ಮುದ್ರಣದ ವೆಚ್ಚ ಹೆಚ್ಚಾಗಿರುವುದರಿಂದ ಲಾಭಾಂಶದಲ್ಲಿ ಇಳಿಕೆಯಾಗಿರುವ ಸಾಧ್ಯತೆಯಿದೆ ಎಂದು ಇಕಾನಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಕೇಂದ್ರ ಆಯವ್ಯಯ ಮಂಡನೆಯ ವೇಳೆ 2016-17ನೇ ವರ್ಷಕ್ಕೆ 75,000 ರೂಪಾಯಿ ಲಾಭಾಂಶ ಬರಲಿದೆ ಎಂದು ಹಣಕಾಸು ಸಚಿವ ಜೇಟ್ಲಿ ಹೇಳಿದ್ದರು. ಕಳೆದ ಐದು ವರ್ಷದಲ್ಲಿ ರಿಸರ್ವ್ ಬ್ಯಾಂಕ್ ನೀಡುತ್ತಿರುವ ಅತ್ಯಂತ ಕಡಿಮೆ ಲಾಭಾಂಶದ ಮೊತ್ತ ಇದಾಗಿದೆ. ಎಂದಿನಂತೆ, ಸಾಮಾಜಿಕ ತಾಣದಲ್ಲಿ ನರೇಂದ್ರ ಮೋದಿ ಸರಕಾರವನ್ನು ಟ್ವಿಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮುಂದೆ ಓದಿ..

ಐದು ವರ್ಷದಲ್ಲಿ ರಿಸರ್ವ್ ಬ್ಯಾಂಕ್ ನೀಡಿದ ಹೆಚ್ಚುವರಿ ಲಾಭಾಂಶ

ಐದು ವರ್ಷದಲ್ಲಿ ರಿಸರ್ವ್ ಬ್ಯಾಂಕ್ ನೀಡಿದ ಹೆಚ್ಚುವರಿ ಲಾಭಾಂಶ

ಕಳೆದ ಐದು ವರ್ಷದಲ್ಲಿ ರಿಸರ್ವ್ ಬ್ಯಾಂಕ್ ನೀಡಿದ ಹೆಚ್ಚುವರಿ ಲಾಭಾಂಶ (surplus dividend) ಈ ರೀತಿಯಿದೆ (ಕೋಟಿಯಲ್ಲಿ):
2012-13 - 33,010
2013-14- 52,679
2014-15 - 65,896
2015-16 - 65,876
2016-17 - 30,659

ರಿಸರ್ವ್ ಬ್ಯಾಂಕ್ ಹಳೇ ನೋಟನ್ನು ಕೌಂಟ್ ಮಾಡುವುದರಲ್ಲಿ ಬ್ಯೂಸಿ

ರಿಸರ್ವ್ ಬ್ಯಾಂಕ್ 30,659 ಕೋಟಿ ರೂಪಾಯಿ ಹೆಚ್ಚುವರಿ ಲಾಭಾಂಶದ ಮೊತ್ತವನ್ನು ಕೇಂದ್ರಕ್ಕೆ ನೀಡುತ್ತಿದೆ. ರಿಸರ್ವ್ ಬ್ಯಾಂಕ್ ಹಳೇ ನೋಟನ್ನು ಕೌಂಟ್ ಮಾಡುವುದರಲ್ಲಿ ಬ್ಯೂಸಿಯಾಗಿತ್ತು.

ಅಮಿತ್ ಶಾ ಮತ್ತು ಮೋದಿ ನಡುವಿನ ಸಂಭಾಷಣೆಯ ರೀತಿಯ ಟ್ವೀಟ್

ಅಮಿತ್ ಶಾ ಮತ್ತು ಮೋದಿ ನಡುವಿನ ಸಂಭಾಷಣೆಯ ರೀತಿಯಲ್ಲಿರುವ ಟ್ವೀಟ್
ಅಮಿತ್ ಶಾ: ಹೇಗಿದ್ದೀರಾ?
ಮೋದಿ: ಸರ್ದಾರ್ಜೀ ಮತ್ತು ದೀದೀ ಜೊತೆ ಹೆಚ್ಚು ಮಾತನಾಡುತ್ತಿರುವುದರಿಂದ ನಿಮಗೆ ಪ್ಲಸ್ ಮತ್ತು ಮೈನಸ್ ಬಗ್ಗೆ ಹೆಚ್ಚು ಗೊತ್ತಿಲ್ಲ. ಗುಣಾಕಾರದ ಬಗ್ಗೆ ನಿಮಗೆ ಗೊತ್ತಿಲ್ಲ ಬಿಡಿ.

ರಿಸರ್ವ್ ಬ್ಯಾಂಕ್ ನೀಡುತ್ತಿರುವ ಲಾಭಾಂಶದಲ್ಲಿ ಅರ್ಧಕರ್ಥ ಇಳಿಕೆ

ರಿಸರ್ವ್ ಬ್ಯಾಂಕ್ ನೀಡುತ್ತಿರುವ ಲಾಭಾಂಶದಲ್ಲಿ ಅರ್ಧಕರ್ಥ ಇಳಿದಿದೆ, ಬ್ಯಾಂಕ್ ಕೊನೇ ಪಕ್ಷ ಲಾಭಾಂಶದಲ್ಲಿ ಇಳಿಕೆಯಾದ ಮೊತ್ತವನ್ನು ಲೆಕ್ಕಹಾಕಲಿ.

RBI cuts Repo rates upto 6% | Loans may get cheaper now | Oneindia Kannada

ಹೋದ ವರ್ಷ 65,876 ಕೋಟಿ ನೀಡಿದ್ದ ರಿಸರ್ವ ಬ್ಯಾಂಕ್

ಹೋದ ವರ್ಷ 65,876 ಕೋಟಿ ನೀಡಿದ್ದ ರಿಸರ್ವ ಬ್ಯಾಂಕ್, ಈ ವರ್ಷ 30,659 ಕೋಟಿ ನೀಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Reserve Bank of India (RBI) to pay Rs 30,659 crore dividend to Union government, less than half of what it paid in previous year. RBI’s Central Board, at its meeting held today (Aug 10), approved the transfer of surplus amount to the union government for the year ended June 30, 2017.
Please Wait while comments are loading...