ರೆಪೋ, ರಿವರ್ಸ್ ರೆಪೋದಲ್ಲಿ ಬದಲಾವಣೆ ಮಾಡದ ರಿಸರ್ವ್ ಬ್ಯಾಂಕ್
ನವದೆಹಲಿ, ಜೂನ್ 7: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ದ್ವಿತೀಯ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ನಿಂದ ನೀಡುವ ಸಾಲದ ಬಡ್ಡಿ ದರವನ್ನು (ರೆಪೋ) ಶೇ 6.25 ಮತ್ತು ಕಮರ್ಷಿಯಲ್ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವನ್ನು (ರಿವರ್ಸ್ ರೆಪೋ) ಶೇ 6ರ ಮಟ್ಟದಲ್ಲಿಯೇ ಉಳಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ.[ಮುಂಗಾರು ಕೈ ಕೊಡುವ ಆತಂಕ, ಆರ್ ಬಿಐ ರೆಪೋ ದರ ಬದಲಾವಣೆಯಿಲ್ಲ]

ಕೆಲವು ರಾಜ್ಯ ಸರಕಾರಗಳು ಕೃಷಿ ಸಾಲ ಮನ್ನಾ ಮಾಡಿರುವುದರಿಂದ ವಿತ್ತೀಯ ಕೊರತೆ ಹೆಚ್ಚಿಗೆಯಾಗಿ ಹಣದುಬ್ಬರ ಹೆಚ್ಚಳಗೊಳ್ಳುವ ಸಾಧ್ಯತೆ ಇದ್ದು, ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಅಲಾಗಿದೆ.[ಹತ್ತು ರುಪಾಯಿ ನಾಣ್ಯ ತಿರಸ್ಕರಿಸಿದರೆ ರಾಷ್ಟ್ರದ್ರೋಹದ ಪ್ರಕರಣ]
ರೆಪೊ ದರ ಇಳಿಕೆ ಆಗದಿದ್ದರೂ ಗೃಹ ಸಾಲದ ಬಡ್ಡಿ ದರದಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ. ಕಳೆದ ಏಪ್ರಿಲ್‌ನಲ್ಲಿ ಪ್ರಕಟಿಸಿದ್ದ ಹಣಕಾಸು ನೀತಿಯಲ್ಲೂ ರಿಸರ್ವ್ ಬ್ಯಾಂಕ್ ನಿಂದ ರೆಪೊ ದರ ಇಳಿಕೆ ಮಾಡದೆ 6.25 ಮೂಲಾಂಶವನ್ನೇ ಮುಂದುವರಿಸಿತ್ತು. ಆದರೂ ಕೆಲವು ಬ್ಯಾಂಕ್‌ಗಳು ಗೃಹ ಸಾಲದ ಬಡ್ಡಿ ದರವನ್ನು ಇಳಿಸಿದ್ದವು.












Click it and Unblock the Notifications