ಮುಂಗಾರು ಕೈ ಕೊಡುವ ಆತಂಕ, ಆರ್ ಬಿಐ ರೆಪೋ ದರ ಬದಲಾವಣೆಯಿಲ್ಲ
ಆರ್ಥಿಕ ವರ್ಷದ ಮೊದಲ ಹಣಕಾಸು ನೀತಿಯನ್ನು ಗುರುವಾರ (ಏಪ್ರಿಲ್ 6) ಘೋಷಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು 6.25ರಲ್ಲೇ ಮುಂದುವರಿಸಿದ್ದು, ಯಾವುದೇ ಬದಲಾವಣೆ ಮಾಡಿಲ್ಲ
ಮುಂಬೈ, ಏಪ್ರಿಲ್ 6: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು 6.25ರಲ್ಲೇ ಮುಂದುವರಿಸಿದೆ. ಹೊಸ ಆರ್ಥಿಕ ವರ್ಷದ ಮೊದಲ ಆರ್ಥಿಕ ನೀತಿ ಘೋಷಣೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆರು ಸದಸ್ಯರಿರುವ ಆರ್ಥಿಕ ನೀತಿ ಸಮಿತಿಯು ಅವಿರೋಧವಾಗಿ ಈ ನಿರ್ಧಾರ ಕೈಗೊಂಡಿದೆ.
ಮುಂಗಾರು ಮಳೆ ಮೇಲೆ ಎಲ್ ನಿನೋದ ಪ್ರಭಾವ ಹಾಗೂ ಜನಜೀವನದ ಮೇಲಿನ ಪರಿಣಾಮ ಹಿನ್ನೆಲೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯ ಒತ್ತಡ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ವಸ್ತುಗಳ ಬೆಲೆಯಲ್ಲಿ ನ ಏರಿಕೆ ಎಲ್ಲವನ್ನೂ ಪರಿಗಣಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.[200 ರೂ. ನೋಟು ಬರುತ್ತಂತೆ, ಅಂತೆ-ಕಂತೆ!]

ಹಣಕಾಸು ನೀತಿ ನಿರ್ಧಾರವನ್ನು ಘೋಷಿಸಿದ ನಂತರ ಬಿಎಸ್ ಇ (ಬಾಂಬೆ ಸ್ಟಾಕ್ ಎಕ್ಸ್ ಚೇಂಜ್) ಸೂಚ್ಯಂಕ ಮಧ್ಯಾಹ್ನದ ಅವಧಿಯಲ್ಲಿ 63 ಅಂಶ ಕುಸಿತ ಕಂಡಿತು. ಇನ್ನು ನಿಫ್ಟಿ ಕೂಡ ಇಪ್ಪತ್ತೊಂದು ಅಂಶಗಳಷ್ಟು ಕುಸಿತ ಕಂಡಿತ್ತು. ಆರ್ ಬಿಐನ ನಿರ್ಧಾರ ನಿರೀಕ್ಷಿತವೇ ಆಗಿತ್ತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಅಂದಹಾಗೆ, ಆರ್ ಬಿಐ ರೆಪೋ ದರ ಬಡ್ಡಿದರ ಇಳಿಕೆ ಮಾಡಿದ ಕೂಡಲೇ ಬ್ಯಾಂಕ್ ಗಳು ವಿವಿಧ ಸಾಲಕ್ಕೆ ನೀಡಿದ ಬಡ್ಡಿದರ ಇಳಿಕೆ ಮಾಡಲೇಬೇಕೆಂಬ ನಿಯಮವೇನೂ ಇಲ್ಲ. ಇದರ ಜತೆಗೆ ನಿಮಗೆ ಗೊತ್ತಿರಬೇಕಾದ ಮಾಹಿತಿ ಏನೆಂದರೆ,
ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ











Click it and Unblock the Notifications