ಶೀಘ್ರದಲ್ಲಿಯೇ ಬರಲಿವೆ ಹೊಸ 20 ಹಾಗೂ 50 ರು ಮುಖಬೆಲೆ ನೋಟುಗಳು!

Written By: Ramesh
Subscribe to Oneindia Kannada

ನವದೆಹಲಿ, ಡಿಸೆಂಬರ್. 04 : ಹೊಸ 20 ಹಾಗೂ 50 ರು ಮುಖಬೆಲೆ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಮುದ್ರಿಸಲಿದೆ.

ಐನೂರು-ಸಾವಿರ ನೋಟುಗಳು ರದ್ದಾಗಿನಿಂದ ಸಾರ್ವಜನಿಕರು ಎದುರಿಸುತ್ತಿರುವ ಚಿಲ್ಲರೆ ಸಮಸ್ಯೆ ಬಗೆಹರಿಸಲು ಆರ್ ಬಿಐ ಈ ಹೊಸ ಉಪಾಯ ಮಾಡಿದೆ.

RBI To Issue New 20 And 50 Rupee Notes; Old Currency Continues To Be Valid

ಶೀಘ್ರದಲ್ಲೇ 20ರ ಹೊಸ ನೋಟುಗಳನ್ನು ಆರ್‍ ಬಿ ಐ ಮುದ್ರಿಸಲಿದ್ದು ಇದರಲ್ಲಿ ಮಹಾತ್ಮ ಗಾಂಧಿ ಸೀರೀಸ್ 2005, ಎರಡೂ ಸಂಖ್ಯಾ ಪ್ಯಾನಲ್ ಗಳಲ್ಲಿ 'L' ಎಂಬ ಇನ್ಸೆಟ್ ಲೆಟರ್, ಆರ್ ಬಿ ಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿರಲಿದೆ.

ಮುದ್ರಣ ಇಸವಿ 2016 ಎಂದು ಅಚ್ಚಾಗಿರುತ್ತದೆ ಎಂದು ಆರ್ ಬಿ ಐ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು 50ರು ಹೊಸ ನೋಟುಗಳನ್ನೂ ಮುದ್ರಿಸಲಾಗುತ್ತಿದ್ದು ಅದರಲ್ಲಿ ಮಹಾತ್ಮ ಗಾಂಧಿ ಸೀರೀಸ್ 2005, ಎರಡೂ ಸಂಖ್ಯಾ ಪ್ಯಾನಲ್ ಗಳಲ್ಲಿ ಯಾವುದೇ ಇನ್ಸೆಟ್ ಲೆಟರ್ ಇರುವುದಿಲ್ಲ.

ಹೊಸ ನೋಟುಗಳು ಮುದ್ರಣವಾಗಿ ಚಲಾವಣೆಗೆ ಬಂದರೂ ಹಳೆಯ ನೋಟುಗಳು ಕೂಡಾ ಚಲಾವಣೆಯಲ್ಲಿರುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Reserve Bank of India (RBI) Sunday announced that it would issue new Rs 50 and Rs 20 bank notes, but said the old versions of these notes will continue to be valid.
Please Wait while comments are loading...