Ayushman bhav: 'ಆಯುಷ್ಮಾನ್ ಭವ' ಅಭಿಯಾನಕ್ಕೆ ಬುಧವಾರ ರಾಷ್ಟ್ರಪತಿ ಮುರ್ಮು ಚಾಲನೆ, ಏನಿದು?
ನವದೆಹಲಿ, ಸೆಪ್ಟಂಬರ್ 12: ದೇಶದಾದ್ಯಂತ ಆರೋಗ್ಯ ಸೇವೆಗಳ ಲಭ್ಯತೆ, ಪ್ರಾಮುಖ್ಯತೆ ಕುರಿತು ಜನರಿಗೆ ತಿಳಿಸುವ ಸದುದ್ದೇಶದ 'ಆಯುಷ್ಮಾನ್ ಭವ' ಅಭಿಯಾನ ಆರಂಭವಾಗಲಿದೆ. ಈ ಅಭಿಯಾನಕ್ಕೆ ನಾಳೆ ಸೆಪ್ಟಂಬರ್ 13ರಂದು ಬುಧವಾರ ನಡೆಯಲಿರುವ ಪ್ರಮುಖ ಸಮಾರಂಭದಲ್ಲಿ ದ್ರೌಪದಿ ಮುರ್ಮು ಚಾಲನೆ ನೀಡಲಿದ್ದಾರೆ.
ಬುಧ್ವಾರ ಯುನಿವರ್ಸಲ್ ಹೆಲ್ತ್ ಕವರೇಜ್ (UHC) ಸಾಧಿಸಲು ಮತ್ತು ದೇಶದ ಜನರಿಗೆ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಗುರುತಿಸುವ ವರ್ಚುವಲ್ ಸಮಾರಂಭ ನಡೆಯಲಿದೆ. ಈ ವೇಳೆ ಮಹತ್ವದ ಅಭಿಯಾನ ಉದ್ಘಾಟನೆಗೊಳ್ಳಲಿದೆ.

'ಆಯುಷ್ಮಾನ್ ಭವ' ಅಭಿಯಾ ಭಾರತ ದೇಶಾದ್ಯಂತ ಒಂದು ಆರೋಗ್ಯ ಉಪಕ್ರಮವಾಗಿದೆ. ದೇಶದ ಪ್ರತಿ ಹಳ್ಳಿ, ಗ್ರಾಮೀಣಭಾಗದಿಂದ ಹಿಡಿದು ನಗರದ ತಲುಪುವ ಮೂಲಕ ಆರೋಗ್ಯ ಸೇವೆಗಳ ಲಭ್ಯತೆ ತಿಳಿಸುವ ಗುರಿ ಈ ಅಭಿಯಾನ ಹೊಂದಿದೆ. ಉಪಕ್ರಮವು ಆಯುಷ್ಮಾನ್ ಭಾರತ್ ಕಾರ್ಯಕ್ರಮದ ಯಶಸ್ಸಿನ ಮೇಲೆ ರಚನೆಯಾಗಿದೆ.
ದೇಶದ ಜನರ ಆರೋಗ್ಯ ಖಚಿತತೆಗೆ ಈ ಅಭಿಯಾನ
ಸರ್ಕಾರದ ಈ ಅಭಿಯಾನವು ಆರೋಗ್ಯ ಇಲಾಖೆ, ಗ್ರಾಮಪಂಚಾಯತಿ, ಇತರ ಸರ್ಕಾರಿ ಇಲಾಖೆಗಳು, ಗ್ರಾಮ ಮತ್ತು ನಗರ ಪ್ರದೇಶಗಳ ಸ್ಥಳೀಯ ಚುನಾಯಿತ ಸಂಸ್ಥೆಗಳ ಸಮನ್ವಯದಲ್ಲಿ ಈ ಉಪಕ್ರಮ ನಡೆಯಲಿದೆ. ಭೌಗೋಳಿಕ ಅಡೆತಡೆ ದಾಟಿ ಎಲ್ಲ ವಿಧದ ಜನರು ಆರೋಗ್ಯ ಹಿಂದುಳಿದಿದ್ದಾರೆಯೇ? ಇಲ್ಲವಾ ಎಂಬುದನ್ನು ಈ ಮೂಲಕ ಖಚಿತಪಡಿಸಿಕೊಳ್ಳುವುದು ಮೂಲ ಉದ್ದೇಶವಾಗಿದೆ ಎಂದು ಕೇಂದ್ರದ ಮೂಲಗಳು ತಿಳಿಸಿವೆ.

ಆಯುಷ್ಮಾನ್ - ಆಪ್ಕೆ ದ್ವಾರ 3.0, ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ (HWC) ಆಯುಷ್ಮಾನ್ ಮೇಳಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು (CHC) ಹಾಗೂ ಆಯುಷ್ಮಾನ್ ಸಭೆಗಳ ಮೂಲಕ ಪ್ರತಿ ಗ್ರಾಮ ಮತ್ತು ಪಂಚಾಯಿತಿಗಳ ಮೂಲಕ ಆರೋಗ್ಯ ಸೇವೆಗಳನ್ನು ಜನರಿಗೆ ಸೂಕ್ತವಾಗಿ ದೊರಕುವ ಕುರಿತು ಅರಿವು ಮೂಡಿಸಲಾಗುವುದು.
ಅಭಿಯಾನದ ಸಿದ್ಧತೆ ಪರಿಶೀಲಿಸಿದ ಕೇಂದ್ರ ಸಚಿವ
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ಅಭಿಯಾನ ಆರಂಭ ಕುರಿತು ಇಂದು ಮಂಗಳವಾರ ಪರಿಶೀಲಿಸಿದರು. ಸಚಿವರು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಆರೋಗ್ಯಾಧಿಕಾರಿಗಳ ಜೊತೆಗೆ ಚರ್ಚಿಸಿದರು. ಸಿದ್ಧತೆಗಳನ್ನು ಪರಿಶೀಲಿಸಿ ಅಗತ್ಯ ಸೂಚನೆ ನೀಡಿದರು.
ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆಯುಷ್ಮಾನ್ ಭವ ಆರೋಗ್ಯ ಸೇವೆಯ ಪ್ರಯೋಜನ ಬಗ್ಗೆ ಅವರು ತಿಳಿಸಿದರು. ಪ್ರತಿ ವರ್ಷ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ ಆರೋಗ್ಯ ಮೇಳಗಳನ್ನು ಆಯೋಜಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒತ್ತು ನೀಡಿದರು ಮತ್ತು ಪ್ರತಿ ವೈದ್ಯಕೀಯ ಕಾಲೇಜುಗಳು ಬ್ಲಾಕ್ ಮಟ್ಟದಲ್ಲಿ ಆರೋಗ್ಯ ಶಿಬಿರವನ್ನು ನಡೆಸುವಂತೆ ಒತ್ತಾಯಿಸಿದರು.












Click it and Unblock the Notifications