• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರೂಪದ ಮರ: 200 ವರ್ಷಗಳ ಮರದ ಮೇಲೆ 9 ಮರಗಳು- ಜನರಿಂದ ಪೂಜೆ

|
Google Oneindia Kannada News

ಕೊಂಡಗಾಂವ್ ಜೂನ್ 23: ನಮ್ಮ ಇತಿಹಾಸವನ್ನು ಮಾನವರು ಮಾಡಿದ ರಚನೆಗಳ ಮೇಲೆ ಮಾತ್ರ ನೋಡಲಾಗುವುದಿಲ್ಲ. ಅದು ನಮ್ಮ ಹೆಮ್ಮೆ ಪ್ರಕೃತಿಯ ಸೌಂದರ್ಯದಲ್ಲಿಯೂ ಅಡಗಿದೆ. ಛತ್ತೀಸ್‌ಗಢದ ಕೊಂಡಗಾಂವ್‌ನಲ್ಲಿ ಒಂದು ಸ್ಥಳವಿದೆ. ಅಲ್ಲಿ 200 ವರ್ಷಗಳಷ್ಟು ಹಳೆಯದಾದ ಮರವೊಂದು ನಮ್ಮೆಲ್ಲರನ್ನು ಆಶೀರ್ವದಿಸುತ್ತದೆ. ಈ ಮರ ಎಷ್ಟು ಸುಂದರವಾಗಿದೆಯೋ, ಅದರ ವೈಭವವೂ ಅನನ್ಯವಾಗಿದೆ. ಈ ಮರದಲ್ಲಿ 9 ಬಗೆಯ ಗಿಡಗಳು ಬೆಳೆಯುತ್ತವೆ. ಗ್ರಾಮಸ್ಥರು ಕೂಡ ಇದನ್ನು ದೇವರೆಂದು ಭಾವಿಸಿ ಪೂಜಿಸುತ್ತಾರೆ.

ಛತ್ತೀಸ್‌ಗಢದ ಕೊಂಡಗಾಂವ್ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಬನಿಯಾಗಾಂವ್‌ನಲ್ಲಿ ಈ ಮರವಿದೆ. 200 ವರ್ಷಗಳಷ್ಟು ಹಳೆಯದಾದ ಈ ಆಲದ ಮರವು ಇತಿಹಾಸಕ್ಕೆ ಸಾಕ್ಷಿಯಾಗಿದೆ. ಈ ಮರ ಬ್ರಿಟಿಷರ ಕಾಲವನ್ನು ಕಂಡಿದೆ. ಸ್ಥಳೀಯ ಜನರ ನಂಬಿಕೆ ಅದನ್ನು ದೇವತೆಯಾಗಿ ಜೀವಂತವಾಗಿಟ್ಟಿದೆ. ಈ ಮರದ ಒಂದು ವಿಶೇಷತೆಯೆಂದರೆ ದೀರ್ಘಾಯುಷ್ಯವನ್ನು ಪೂರೈಸಿದ ಇತರ ಮರಗಳಿಗಿಂತ ಇದು ಭಿನ್ನವಾಗಿದೆ. ಈ ಮರದಲ್ಲಿ 9 ವಿವಿಧ ಜಾತಿಯ ಸಸ್ಯಗಳಿವೆ. ಈ ಬೃಹತ್ ಆಲದ ಮರವು ಜನರ ಕೌತುಕ, ನಂಬಿಕೆಯ ಜತೆಗೆ ಸಂಶೋಧನೆಗೆ ಪಾತ್ರವಾಗಿದೆ.

ಛತ್ತೀಸ್‌ಗಢ: 10 ಕಿ.ಮೀವರೆಗೆ ಮಗಳ ಶವ ಹೊತ್ತೊಯ್ದ ತಂದೆ; ತನಿಖೆಗೆ ಆದೇಶಛತ್ತೀಸ್‌ಗಢ: 10 ಕಿ.ಮೀವರೆಗೆ ಮಗಳ ಶವ ಹೊತ್ತೊಯ್ದ ತಂದೆ; ತನಿಖೆಗೆ ಆದೇಶ

ಆಶ್ಚರ್ಯಗೊಂಡ ಜನ

ಆಶ್ಚರ್ಯಗೊಂಡ ಜನ

ಬನಿಯಾಗಾಂವ್‌ನ ಈ ದೈತ್ಯ ಆಲದ ಮರವು ನೋಡಲು ತುಂಬಾ ಸುಂದರವಾಗಿದೆ. ಇದರ ಬೇರುಗಳು ಮುಖ್ಯ ರಸ್ತೆಯ ಮೇಲೆ ಬೀಳುತ್ತವೆ. ಆದ್ದರಿಂದ ಇದು ಹಾದುಹೋಗುವವರಿಗೆ ತಂಪಾದ ನೆರಳು ನೀಡುತ್ತದೆ. ಇದು ಕೊಂಬೆಗಳಿಂದ ಒಂಬತ್ತು ವಿವಿಧ ಜಾತಿಯ ಚಾಚನ್ ಜುಂಡಿ, ತೆಂಡು, ಮೊಗ್ಗು, ಪೀಪಲ್, ಹುಣಸೆ, ಸಿಂದೂರ್, ಮಕಾಡ್ ಟೆಂಡು ಮತ್ತು ಅಮರಬೆಲ್ ಸಸ್ಯಗಳು ಬೆಳೆದ ಕಾರಣ ಜನರು ಆಶ್ಚರ್ಯ ಚಕಿತರಾಗಿದ್ದಾರೆ.

ದೇವಿಯ 9 ರೂಪ

ದೇವಿಯ 9 ರೂಪ

ಈ ಮರಕ್ಕೆ ಧಾರ್ಮಿಕ ಮಹತ್ವವೂ ಇದೆ. ಅದರ ಕೆಳಗೆ ಗ್ರಾಮ ದೇವತೆ ಶೀತಲ ಮಾತೆಯ ದೇವಸ್ಥಾನವನ್ನು ಸ್ಥಾಪಿಸಲಾಗಿದೆ. ಮಾತೃದೇವತೆಯ 9 ರೂಪಗಳಾಗಿರುವ ಈ ಮರದಲ್ಲಿ 9 ಜಾತಿಯ ಗಿಡಗಳು ಹೊರಬಂದಿವೆ ಎನ್ನುತ್ತಾರೆ ಗ್ರಾಮದ ಅರ್ಚಕ ನರಪತಿ ಪೊಯ್ಯಂ. ಸ್ಥಳೀಯ ನಿವಾಸಿಗಳು ಶೀತಲ ಮಾತೆಯ ದೇವಸ್ಥಾನ ಮತ್ತು ಆಲದ ಮರವನ್ನು ವರ್ಷಗಳಿಂದ ಪೂಜಿಸುತ್ತಿದ್ದಾರೆ. ಶೀಟ್ಲ ಮಾತಾ ಮಂದಿರ ಸಮಿತಿ ಸದಸ್ಯ ನರಪತಿ ಪಟೇಲ್ ಮಾತನಾಡಿ, ಇಲ್ಲಿನ ಗ್ರಾಮಸ್ಥರು ಹಲವು ವರ್ಷಗಳಿಂದ ದೇವಸ್ಥಾನದ ದೇವಿಯನ್ನು ಪೂಜಿಸುತ್ತಿದ್ದಾರೆ, ಈ ಆಲದ ಮರದಿಂದ 9 ಸಸಿಗಳು ಬೆಳೆಯುತ್ತಿರುವುದು ಅಚ್ಚರಿ ತಂದಿದೆ. ಇದು ನಂಬಿಕೆಯ ಕೇಂದ್ರವೂ ಆಗಿದೆ.

ಔಷಧೀಯ ಗುಣಗಳುಳ್ಳ ಮರ

ಔಷಧೀಯ ಗುಣಗಳುಳ್ಳ ಮರ

ಈ ಹಳೆಯ ಆಲದ ಮರದಲ್ಲಿ 9 ಜಾತಿಯ ಮರಗಳಿರುವುದನ್ನು ಪ್ರಜ್ಞಾವಂತರು ತಮ್ಮ ಕಣ್ಣಾರೆ ನೋಡುತ್ತಾರೆ. ಗುಂಡಧೂರು ​​ಕಾಲೇಜಿನ ಸಸ್ಯಶಾಸ್ತ್ರ ಪ್ರಾಧ್ಯಾಪಕ ಶಶಿಭೂಷಣ ಕನೌಜೆ ಮಾತನಾಡಿ, ಮರದಲ್ಲಿ ಇತರ ಸಸ್ಯಗಳು ಹುಟ್ಟುವುದು ಸಹಜ ಪ್ರಕ್ರಿಯೆಯಾದರೂ ಅದು ಸಂಶೋಧನೆಯ ವಿಷಯವಾಗಿದೆ, ಏಕೆಂದರೆ ಆಲದ ಮರದಲ್ಲಿ 9 ವಿವಿಧ ಜಾತಿಯ ಸಸ್ಯಗಳಿವೆ. ಈ ಸ್ಥಳದಲ್ಲಿ ಹತ್ತಿರದಲ್ಲಿ ಕಂಡುಬರದ ಔಷಧೀಯ ಗುಣಗಳನ್ನು ಸಸ್ಯಗಳು ಹೊಂದಿವೆ ಎಂದು ಹೇಳುತ್ತಾರೆ.

ಮರವನ್ನು ಕಾಣಲು ಮುಗಿಬಿದ್ದ ಜನ

ಮರವನ್ನು ಕಾಣಲು ಮುಗಿಬಿದ್ದ ಜನ

ಆಲದ ಮರದ ವಿಶೇಷತೆಯಿಂದಾಗಿ ಎಲ್ಲೆಡೆ ಫೋಟೋಗಳು ವೈರಲ್ ಆಗಿವೆ. ಇದರ ವಿಶೇಷತೆಯಿಂದಾಗಿ ಹಾಗೂ ನಬಿಕೆಯಿಂದಾಗಿ ಹಲವಾರು ಜನ ಮರವನ್ನು ನೋಡಲು ಮತ್ತು ಪೂಜಿಸಲು ಆಗಮಿಸುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಮರದಲ್ಲಿ ಇನ್ನಿತರ ಸಸ್ಯಗಳು ಬೆಳೆಯುತ್ತವೆ. ಆದರೆ ಒಂಬತ್ತು ಸಸ್ಯಗಳು ಬೆಳೆದಿರುವುದನ್ನು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಕಾಣಲಾಗುತ್ತಿದ್ದು, ಇದೊಂದು ದೇವಿ ಸ್ವರೂಪ ಎನ್ನಲಾಗುತ್ತಿದೆ.

English summary
There is a place in Kondagaon, Chhattisgarh. There is a tree that is 200 years old that blesses us all. There are 9 trees on a 200 year old tree that people worship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X