ಅತ್ಯಾಚಾರವೆಸಗಿ ಆಕೆಯ ಮೇಲೆ ಬೈಕ್ ಓಡಿಸಿದರು!

Posted By: Chethan
Subscribe to Oneindia Kannada

ಚುರು (ರಾಜಸ್ಥಾನ), ಜ. 5: ಹದಿನೈದರ ಬಾಲೆಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ದುಷ್ಕರ್ಮಿಗಳು, ನಿಶ್ಯಕ್ತಳಾಗಿ ಬಿದ್ದಿದ್ದ ಆಕೆಯ ಮೇಲೆ ನಿರ್ದಯವಾಗಿ ಬೈಕ್ ಓಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪರಿಚಯಸ್ಥರಿಂದಲೇ ಈ ಕೃತ್ಯ ನಡೆದಿದೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.

ಕಳೆದ ತಿಂಗಳ ಕ್ರಿಸ್ಮಸ್ ದಿನದಂದು ಬೆಳಗಿನ ಜಾವ 3:30ರ ಸುಮಾರಿಗೆ ಈ ಘೋರ ಘಟನೆ ನಡೆದಿದ್ದು, ದುಷ್ಕರ್ಮಿಗಳು ಬೈಕ್ ಚಲಾಯಿದ್ದರ ಪರಿಣಾಮ ಬಾಲಕಿಯು ನಡುವಿನಿಂದ ಕೆಳಭಾಗ ಸ್ವಾಧೀನ ಕಳೆದುಕೊಂಡಿದ್ದಾಳೆ.

Raped victim left paralysed after rapists rode bike on her in Rajasthan

ಬಾಲಕಿಯ ತಂದೆ ಅಲ್ವಾರ್ ನಲ್ಲಿ ಕೂಲಿಗಾರನಾಗಿ ದುಡಿಯುತ್ತಿದ್ದು ಜ. 2ರಂದು ತನ್ನ ಹಳ್ಳಿಗೆ ಮಂಗಳವಾರ ಬಂದಾಗ ಈ ವಿಚಾರ ಆತನಿಗೆ ಗೊತ್ತಾಗಿದೆ. ಈ ಬಗ್ಗೆ ಪೊಲೀಸರಿಗೆ ಆತ ದೂರು ನೀಡಿದ್ದು ತನಿಖೆ ಮುಂದುವರಿದಿದೆ.

ದೂರಿನನ್ವಯ, ಕ್ರಿಸ್ಮಸ್ ಮುನ್ನಾದಿನ ಶಾಲೆಗೆ ಹೋಗಿ ಮನೆಗೆ ವಾಪಸಾಗುತ್ತಿದ್ದ ಬಾಲಕಿಯನ್ನು ಪರಿಚಿತರಾದ ರಾಕೇಶ್, ನರೇಶ್ ಭಾರ್ಗವ ಎಂಬ ಯುವಕರು ಡ್ರಾಪ್ ಕೊಡುವ ನೆಪದಲ್ಲಿ ತಮ್ಮ ವಾಹನದಲ್ಲಿ ಹತ್ತಿಸಿಕೊಂಡು ಹೋಗಿ ಕುಕೃತ್ಯವೆಸಗಿದ್ದಾರೆನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On Christmas day, a 15-year-old girl in Rajasthan was allegedly gang-raped and beaten-up by two men, who then drove their motorcycle over her. She survived, but only as a paraplegic, paralysed waist down
Please Wait while comments are loading...