ಅತ್ಯಾಚಾರ ಸಂತ್ರಸ್ಥ ಕ್ರೈಸ್ತ ಸನ್ಯಾಸಿನಿಯಿಂದ ಕ್ಯಾಥೊಲಿಕ್ ಚರ್ಚ್‌ಗೆ ಭಾವುಕ ಪತ್ರ
ಕೊಚ್ಚಿ, ಸೆಪ್ಟೆಂಬರ್ 12: ಕೇರಳ ಮಾತ್ರವಲ್ಲದೆ ದೇಶದಾದ್ಯಂತ ಸುದ್ದಿಯಾಗಿರುವ ಕೇರಳದ ಚರ್ಚ್ ಬಿಶಪ್ ಫ್ರಾಂಕೊ ಮುಲ್ಲಕಲ್ ಕ್ರೈಸ್ತ ಸನ್ಯಾಸಿನಿ ಮೇಲೆ ನಡೆಸಿದ ಅತ್ಯಾಚಾರ ದಿನೇ ದಿನೇ ಕಾವೇರುತ್ತಿದೆ.
ಇದೀಗ ಬಹಿರಂಗ ಪತ್ರ ಬರೆದಿರುವ ಅತ್ಯಾಚಾರ ಸಂತ್ರಸ್ಥ ಕ್ರೈಸ್ತ ಸನ್ಯಾಸಿನಿಯು ಹಿರಿಯ ಕ್ಯಾಥೊಲಿಕ್ ಚರ್ಚ್‌ಗೆ ಪತ್ರ ಬರೆದಿದ್ದು. 'ನಾನು ಕಳೆದುಕೊಂಡದ್ದನ್ನು ಚರ್ಚ್ ಮರಳಿ ಕೊಡಬಲ್ಲುದೇನು?' ಎಂದು ಪ್ರಶ್ನಿಸಿದ್ದಾರೆ.
ತನ್ನ ಮೇಲೆ ಚರ್ಚ್‌ನ ಬಿಶಪ್ ಸತತವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿ ಆರೋಪ ಮಾಡಿದ್ದು, ದೂರು ಸಹ ದಾಖಲಾಗಿದೆ. ಆದರೆ ಈವರೆಗೆ ಬಿಶಪ್‌ನ ಬಂಧನವಾಗಿಲ್ಲ. ಪ್ರಕರಣದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಸೆಪ್ಟೆಂಬರ್ 8 ರಂದು ಬರೆದಿರುವ ಏಳು ಪುಟಗಳ ಸುಧೀರ್ಘ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದ್ದು. ಕ್ಯಾಥೊಲಿಕ್ ಚರ್ಚ್ ಕೇವಲ ಬಿಶಪ್‌ಗಳಿಗೆ ಮತ್ತು ಸನ್ಯಾಸಿಗಳ ಬಗ್ಗೆ ಮಾತ್ರವೇ ಕಾಳಜಿಹೊಂದಿದೆಯೇ. ಕ್ರೈಸ್ತ ಸನ್ಯಾಸಿನಿಗಳಿಗೆ, ಮಹಿಳೆಯರಿಗೆ ಯಾವ ಕಾನೂನುಗಳೂ 'ಕ್ಯಾನನ್' ಕಾನೂನಿನಲ್ಲಿ ಇಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಅತ್ಯಾಚಾರ ಆರೋಪಿ ಬಿಶಪ್ ಫ್ರಾಂಕೋನನ್ನು ಕೂಡಲೇ ಬಂಧಿಸುವಂತೆ ಕೊಚ್ಚಿ ಸೇರಿದಂತೆ ಹಲವೆಡೆ ಕ್ರೈಸ್ತ ಸನ್ಯಾಸಿನಿಯರು ಮತ್ತು ಹಲವು ಮಹಿಳಾ ಸಂಘಟನೆಗಳು ಕಳೆದ ನಾಲ್ಕು ದಿನದಿಂದಲೂ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹ ಮಾಡುತ್ತಿವೆ. ಆದರೆ ಈವರೆಗೆ ಬಿಶಪ್‌ನನ್ನು ಬಂಧಿಸಲಾಗಿಲ್ಲ.












Click it and Unblock the Notifications