13ರ ಬಾಲಕಿ ಮೇಲೆ ಅತ್ಯಾಚಾರ, ಗರ್ಭಪಾತ ಮಾತ್ರೆಗಳಿಂದ ಕ್ಯಾನ್ಸರ್

ರಾಜಸ್ತಾನದ ಬಿಕನೇರ್ ನ ಶಾಲೆಯೊಂದರಲ್ಲಿ 2015ರಿಂದ ಹದಿಮೂರು ವರ್ಷದ ಬಾಲಕಿ ಮೇಲೆ 8 ಶಿಕ್ಷಕರು ಅತ್ಯಾಚಾರ ನಡೆಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಕೆ ಗರ್ಭ ಧರಿಸದಿರಲು ನೀಡಿದ ಮಾತ್ರೆಗಳಿಂದ ಆಕೆ ದೇಹದಲ್ಲಿ ಕ್ಯಾನ್ಸರ್ ಬೆಳವಣಿಗೆ ಆಗಿದೆ

ಬಿಕನೇರ್, ಮಾರ್ಚ್ 26: ಈ ವರದಿ ಮನಸ್ಸಿಗೆ ಘಾಸಿ ಮಾಡುವಂಥದ್ದು. ಘಟನೆ ನಡೆದಿರುವುದು ರಾಜಸ್ತಾನದ ಬಿಕನೇರ್ ನಲ್ಲೇ ಆದರೂ ಇಂಥ ಅಮಾನವೀಯ ಘಟನೆ ಎಂಥವರ ಹೃದಯವನ್ನು ಕಲಕುತ್ತದೆ. ಆ ಬಾಲಕಿ ವಯಸ್ಸು 13. ಆಕೆ ಓದುತ್ತಿರುವ ಶಾಲೆಯ ಎಂಟು ಶಿಕ್ಷಕರು 2015ರಿಂದ ಅತ್ಯಾಚಾರ ಎಸಗಿದ್ದಾರೆ.

ಆ ನಂತರ ಬಲವಂತವಾಗಿ ಗರ್ಭಪಾತ ಹಾಗೂ ಗರ್ಭ ನಿರೋಧಕ ಮಾತ್ರೆಗಳನ್ನು ನುಂಗಿಸಿದ್ದಾರೆ. ಇದರಿಂದ ಆ ಬಾಲಕಿ ದೇಹದಲ್ಲಿ ಕ್ಯಾನ್ಸರ್ ಅಂಶಗಳು ಕಾಣಿಸಿಕೊಂಡಿವೆ. ಪೊಲೀಸರಿಗೆ ಬಾಲಕಿ ನೀಡಿದ ದೂರಿನಲ್ಲಿ ತನ್ನ ಮೇಲೆ ಆದ ದೌರ್ಜನ್ಯದ ಬಗ್ಗೆ ತಿಳಿಸಿದ್ದಾಳೆ. "ಶಿಕ್ಷಕರು ವಿಶೇಷ ತರಗತಿ ಇದೆ ಎಂದು ಉಳಿಸಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದರು.[ಅಪ್ರಾಪ್ತೆ ಮೇಲೆ ಕ್ಯಾಮರಾಮನ್ ನಿಂದ ಅತ್ಯಾಚಾರ]

"ವಿಡಿಯೋ ಮಾಡಿಕೊಂಡು, ಅದನ್ನು ಎಲ್ಲ ಕಡೆ ಹಂಚುವುದಾಗಿ ಬೆದರಿಸಿದರು" ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ತಾನು ಗರ್ಭ ಧರಿಸಿದ್ದಾಗಿ ಹೇಳಿದಾಗ ಆ ಶಿಕ್ಷಕರು ಗರ್ಭಪಾತದ ಮಾತ್ರೆಗಳನ್ನು ನುಂಗಿಸಿದರು. ಗರ್ಭ ಧರಿಸದಿರಲಿ ಎಂಬ ಕಾರಣಕ್ಕೆ ಗರ್ಭನಿರೋಧಕ ಮಾತ್ರೆಗಳನ್ನು ನುಂಗಿಸಿದ್ದಾರೆ. ಇದರಿಂದ ಆ ಬಾಲಕಿ ದೇಹದಲ್ಲಿ ಕ್ಯಾನ್ಸರ್ ಗೆ ಕಾರಕ ಬೆಳವಣಿಗೆಗಳು ಆಗಿವೆ ಎಂದು ಆಕೆ ಪೋಷಕರು ಹೇಳಿದ್ದಾರೆ.

Rape

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ. ಇನ್ನು ವಿಚಾರಣೆ ಹಂತದಲ್ಲೇ ಗೊತ್ತಾಗಿರುವ ಅಂಶ ಏನೆಂದರೆ, ಆ ಬಾಲಕಿ ಶಾಲೆಗೆ ತಡವಾಗಿ ಬಂದಳು ಎಂಬ ಕಾರಣಕ್ಕೆ ಶಿಕ್ಷಕರು 400 ಬಸ್ಕಿ ಹೊಡೆಸಿದ್ದಾರೆ.[ದೆಹಲಿಯಲ್ಲಿ ಮಹಿಳೆ ಮೇಲೆ ಬಿಪಿಓ ಉದ್ಯೋಗಿಗಳಿಂದ ಅತ್ಯಾಚಾರ]

ಮೊದಲಿಗೆ ಸ್ಥಳೀಯರು ರಾಜಿ-ಸಂಧಾನ ಮಾಡಿಸಿ, ಪ್ರಕರಣ ಇತ್ಯರ್ಥಗೊಳಿಸಲು ಯತ್ನಿಸಿದ್ದಾರೆ. ಆದರೆ ಅದಕ್ಕೆ ಒಪ್ಪದೆ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+