ಜೈಲಿನಲ್ಲೇ ಅತ್ಯಾಚಾರಿಯ ವರಿಸಿದ ಸಂತ್ರಸ್ತ ಮಹಿಳೆ
ಭುವನೇಶ್ವರ್, ಜ. 29: ಅತ್ಯಾಚಾರಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವುದು ಸಾಮಾನ್ಯ. ಆದರೆ, ಒರಿಸ್ಸಾ ರಾಜ್ಯದಲ್ಲಿ ಅತ್ಯಾಚಾರ ಸಂತ್ರಸ್ತೆಯೋರ್ವಳು ಆರೋಪಿಯನ್ನೇ ವಿವಾಹವಾಗಿದ್ದಾರೆ.
ಈ ವಿವಾಹ ನಡೆದಿದ್ದು ಒರಿಸ್ಸಾ ರಾಜಧಾನಿ ಭುವನೇಶ್ವರದ ಜೈಲಿನಲ್ಲಿ. ನ್ಯಾಯಾಲಯದ ಮಾರ್ಗದರ್ಶನದಂತೆ ಜೈಲು ಅಧಿಕಾರಿಗಳು, ನ್ಯಾಯವಾದಿಗಳು ಹಾಗೂ ಕುಟುಂಬದ ಸದಸ್ಯರ ಎದುರು 32 ವರ್ಷ ವಯಸ್ಸಿನ ಅತ್ಯಾಚಾರ ಆರೋಪಿಯು 22 ವರ್ಷ ವಯಸ್ಸಿನ ಸಂತ್ರಸ್ತೆಯನ್ನು ಝರ್ಪದಾ ಜೈಲಿನಲ್ಲಿ ಮದುವೆಯಾಗಿದ್ದಾನೆ. [ಸಾಕು ಪ್ರಾಣಿಯನ್ನೂ ಬಿಡದ ಕಾಮಾಂಧ]
ಘಟನೆಯ ವಿವರ : ಭುಬನೇಶ್ವರಕ್ಕೆ ಸಮೀಪದ ಹಳ್ಳಿಯಲ್ಲಿ ಬಸ್‌ಗಾಗಿ ಯುವತಿ ಕಾಯುತ್ತಿದ್ದರು. ಅವರಿಗೆ ಲಿಫ್ಟ್ ಕೊಡುವುದಾಗಿ ನಂಬಿಸಿದ ಚಾಲಕ ವೃತ್ತಿಯಲ್ಲಿರುವ ದಿಲೀಪ್ ಬೆಹೆರಾ ಎಂಬಾತ ತನ್ನ ವಾಹನದಲ್ಲಿ ಹತ್ತಿಸಿಕೊಂಡು ಯಾರೂ ಇಲ್ಲದ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.

ಈ ಘಟನೆ ನಡೆದದ್ದು 2014ರ ಜನವರಿ 23ರಂದು. ಕೆಲವು ದಿನಗಳ ನಂತರ ಪೊಲೀಸರು ಆರೋಪಿ ಬೆಹೆರಾನನ್ನು ಬಂಧಿಸಿದ್ದರು. ಅಂದಿನಿಂದ ಇಂದಿನವರೆಗೂ ಆತ ನ್ಯಾಯಾಂಗ ಬಂಧನದಲ್ಲಿಯೇ ಇದ್ದ. [ನಿರ್ಮಾಪಕ ಗೋವರ್ಧನ ಮೂರ್ತಿ ಬಂಧನ]
ವರ್ಷದ ನಂತರ ಆತ ಸಂತ್ರಸ್ತ ಯುವತಿಯನ್ನೇ ಮದುವೆಯಾಗಲು ಮುಂದಾಗಿದ್ದಾನೆ. ಇದಕ್ಕೆ ಒಪ್ಪಿದ ಯುವತಿ ತನ್ನ ಮೇಲೆ ಅತ್ಯಾಚಾರ ಎಸಗಿದ ಬೆಹೆರಾನನ್ನು ಮದುವೆಯಾಗಲು ಒಪ್ಪಿಗೆ ನೀಡಬೇಕೆಂದು ಕೋರಿ ಭುಬನೇಶ್ವರದ ಹೆಚ್ಚುವರಿ ಜಿಲ್ಲಾ ಹಾಗೂ ಸೆಶನ್ ಜಡ್ಜ್ ಎದುರು ಮನವಿ ಸಲ್ಲಿಸಿದ್ದರು. [ಅತ್ಯಾಚಾರಿಗೆ ಅವಮಾನವಾಗಿದೆ]
ಇದನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿ ಹಾಗೂ ಸಂತ್ರಸ್ತೆಯ ಹೇಳಿಕೆಗಳನ್ನು ದಾಖಲಿಸಿಕೊಂಡು ಅವರಿಬ್ಬರ ಮದುವೆಗೆ ಏರ್ಪಾಟು ಮಾಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿತು. [ನಿರ್ಭಯಾಳಿಗೆ ಸಂಗೀತ ನಮನ]
ನ್ಯಾಯಾಲಯದ ಆದೇಶದಂತೆ ಜೈಲಿನಲ್ಲಿಯೇ ಮದುವೆ ಮಾಡಲಾಯಿತು. ಮದುವೆ ಹಿಂದೂ ಧರ್ಮದ ರೀತ್ಯಾ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೀಘ್ರ ಸಂತ್ರಸ್ತ ಯುವತಿ ಆರೋಪಿ ಬೆಹೆರಾನನ್ನು ಬಂಧಮುಕ್ತಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.












Click it and Unblock the Notifications