Get Updates
Get notified of breaking news, exclusive insights, and must-see stories!

ರಂಜಿತ್ ಶ್ರೀನಿವಾಸನ್ ಹತ್ಯೆ: ಕುಟುಂಬದವರ ಎದುರೇ ಬಿಜೆಪಿ ಮುಖಂಡನನ್ನು ಕೊಂದ 15 ಮಂದಿಗೆ ಗಲ್ಲು ಶಿಕ್ಷೆ

ತಿರುವನಂತಪುರಂ, ಜನವರಿ 30: ಎರಡು ವರ್ಷಗಳ ಹಿಂದೆ ಅಂದರೆ, 2021 ರ ಡಿಸೆಂಬರ್‌ನಲ್ಲಿ ಅಲಪ್ಪುಳ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಒಬಿಸಿ ವಿಭಾಗದ ಮುಖಂಡ ರಂಜಿತ್ ಶ್ರೀನಿವಾಸನ್ ಅವರ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಿಷೇಧಿತ ಇಸ್ಲಾಮಿಸ್ಟ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೊಂದಿಗೆ ಸಂಬಂಧ ಹೊಂದಿದ್ದ 15 ವ್ಯಕ್ತಿಗಳಿಗೆ ಕೇರಳ ನ್ಯಾಯಾಲಯ ಮಂಗಳವಾರ ಮರಣದಂಡನೆ ವಿಧಿಸಿದೆ.

ಮಾವೇಲಿಕರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ-1 ಜನವರಿ 30 (ಮಂಗಳವಾರ) ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಅವರನ್ನು ಹತ್ಯೆ ಮಾಡಿದ 15 ಜನರಿಗೆ ಮರಣದಂಡನೆ ವಿಧಿಸಿದೆ. ಬಿಜೆಪಿಯ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮತ್ತು ವಕೀಲರಾಗಿದ್ದ ರಂಜಿತ್ ಅವರನ್ನು ಡಿಸೆಂಬರ್ 19, 2021 ರಂದು ಬೆಳಗ್ಗೆ ಅಲಪ್ಪುಳ ಪುರಸಭೆಯ ವೆಲ್ಲಕಿನಾರ್‌ನಲ್ಲಿರುವ ಅವರ ಮನೆಯಲ್ಲಿಯೇ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಯಿತು.

Ranjith Sreenivasan murder case: Kerala Court Awards Death Sentence to 15 PFI Members

ಕುಟುಂಬದವರ ಎದುರೇ ಬರ್ಬರ ಹತ್ಯೆ

ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿದ್ದ ರಂಜಿತ್ ಶ್ರೀನಿವಾಸನ್ ಅವರನ್ನು ಡಿಸೆಂಬರ್ 19, 2021 ರಂದು ಅವರ ಮನೆಯಲ್ಲೇ ಅವರ ಕುಟುಂಬದವರ ಎದುರೇ ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ರಂಜಿತ್ ಅವರ ತಾಯಿ, ಹೆಂಡತಿ ಮತ್ತು ಮಗಳ ಈ ಘೋರ ಘಟನೆಗೆ ಸಾಕ್ಷಿಯಾಗಿದ್ದರು.

ಪಿಎಫ್‌ಐ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ಗೆ ಸಂಬಂಧಿಸಿದ ಕಾರ್ಯಕರ್ತರು ಪ್ರಕರಣ ಮಾಡಿದ್ದಾರೆ ಎಂದು ಅರೋಪ ಕೇಳಿ ಬಂದಿತ್ತು. ಈಗ ಹತ್ಯೆ ಪ್ರಕರಣದಲ್ಲಿ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಿ ಶ್ರೀದೇವಿ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ತರಬೇತಿ ಪಡೆದ ಕೊಲೆಗಾರ ಸ್ಕ್ವಾಡ್!

ಪ್ರಾಸಿಕ್ಯೂಷನ್ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯನ್ನು ಕೋರಿತ್ತು. ಆರೊಪಿಗಳನ್ನು "ತರಬೇತಿ ಪಡೆದ ಕೊಲೆಗಾರ ಸ್ಕ್ವಾಡ್" ಎಂದು ಕರೆದ ಅವರು, ರಂಜಿತ್ ಶ್ರೀನಿವಾಸ್ ಅವರನ್ನು ತನ್ನ ತಾಯಿ, ಮಗಳು ಮತ್ತು ಹೆಂಡತಿಯ ಮುಂದೆ ಕೊಂದಿದ್ದಾರೆ. ಇದು ಕ್ರೂರ ಮತ್ತು ಪೈಶಾಚಿಕ ಕೃತ್ಯವಾಗಿದ್ದು, 'ಅಪರೂಪದಲ್ಲೇ ಅಪರೂಪದ ಅಪರಾಧಗಳು' ಎಂದು ಪರಿಗಣಿಸಲು ಕೋರಿದ್ದರು.

ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣ

ಪ್ರಕರಣದ ಆರೋಪಿಗಳಾಗಿರುವ 15 ಜನರಲ್ಲಿ ಒಬ್ಬರಿಂದ ಎಂಟು ಮಂದಿ ನೇರವಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜನವರಿ 20 ರಂದು ನ್ಯಾಯಾಲಯಕ್ಕೆ ತಿಳಿದು ಬಂದಿತ್ತು. ನಾಲ್ವರು (ಆರೋಪಿ ಸಂಖ್ಯೆ ಒಂಬತ್ತರಿಂದ 12) ಕೊಲೆಯ ತಪ್ಪಿತಸ್ಥರೆಂದು ತಿಳಿದು ಬಂದಿತ್ತು. ಇವರು ನೇರವಾಗಿ ಅಪರಾಧದಲ್ಲಿ ಭಾಗಿಯಾಗಿರುವವರೊಂದಿಗೆ ಮಾರಕ ಆಯುಧಗಳೊಂದಿಗೆ ಶಸ್ತ್ರಸಜ್ಜಿತವಾದ ಸ್ಥಳಕ್ಕೆ ಬಂದಿದ್ದವರು.

ರಂಜಿತ್ ಶ್ರೀನಿವಾಸನ್ ಪರಾರಿಯಾಗುವುದನ್ನು ತಡೆಯುವುದು ಮತ್ತು ಅವರ ಕಿರುಚಾಟವನ್ನು ಕೇಳಿದ ನಂತರ ಯಾರಾದರೂ ಮನೆಗೆ ಬಂದರೆ ಅವರನ್ನು ತಡೆಯುವುದು ಈ ನಾಲ್ವರ ಉದ್ದೇಶವಾಗಿತ್ತು. ಐಪಿಸಿ ಸೆಕ್ಷನ್ 149 ಅಡಿಯಲ್ಲಿ ಕೊಲೆಯ ಸಾಮಾನ್ಯ ಅಪರಾಧಕ್ಕೆ ಅವರು ಹೊಣೆಗಾರರಾಗಿದ್ದಾರೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿದೆ.

ಶ್ರೀನಿವಾಸನ್ ಹತ್ಯೆಗೆ ಸಂಚು ರೂಪಿಸಿದ್ದ ಇತರ ಮೂವರನ್ನು (ಆರೋಪಿ ಸಂಖ್ಯೆ 13 ರಿಂದ 15) ಕೊಲೆ ಮಾಡಿದ ಆರೋಪದಲ್ಲಿ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ. 2021 ರ ಡಿಸೆಂಬರ್ 18 ರ ರಾತ್ರಿ ಎಸ್‌ಡಿಪಿಐ ಮುಖಂಡ ಕೆಎಸ್ ಶಾನ್ ಅವರು ಅಲಪ್ಪುಳದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಗ್ಯಾಂಗ್‌ನಿಂದ ಹತ್ಯೆಯಾದ ಕೆಲವೇ ಗಂಟೆಗಳ ನಂತರ ಬಿಜೆಪಿ ನಾಯಕನ ಹತ್ಯೆ ಸಂಭವಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+