ಚಿತ್ರಗಳಲ್ಲಿ ದೇಶದೆಲ್ಲೆಡೆ ರಂಜಾನ್ ಸಂಭ್ರಮ

ಬೆಂಗಳೂರು, ಜು.29 : ಮುಸ್ಲಿಂಮರ ಪವಿತ್ರ ರಂಜಾನ್ ಮಾಸಾಚರಣೆಯ ನಂತರ ಮಂಗಳವಾರ ದೇಶಾದ್ಯಂತ ಈದ್ ಉಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಸೋಮವಾರ ಚಂದ್ರದರ್ಶನ ಆಗಿರುವುದರಿಂದ ಮಂಗಳವಾರ ಈದ್ ಆಚರಣೆ ಮಾಡಲಾಗುತ್ತಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಟ್ವೀಟರ್‌ ನಲ್ಲಿ ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು. ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಶುಭಾಶಯ ಹಂಚಿಕೊಂಡರು.

ಬೆಂಗಳೂರಿನಲ್ಲಿ ನಡೆದ ಮುಸ್ಲಿಂಮರ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಕೋಲ್ಕತ್ತಾದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರೆ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭಾಶಯ ಕೋರಿದರು. ರಂಜಾನ್ ಆಚರಣೆಯ ಚಿತ್ರಗಳು ಇಲ್ಲಿವೆ [ಪಿಟಿಐ ಚಿತ್ರಗಳು]

ಪಾಕ್ ಯೋಧರಿಗೆ ಸಿಹಿ ಹಂಚಿಕೆ

ಪಾಕ್ ಯೋಧರಿಗೆ ಸಿಹಿ ಹಂಚಿಕೆ

ರಂಜಾನ್ ಹಬ್ಬದ ಅಂಗವಾಗಿ ಅಟಾರಿ ಗಡಿ ಪ್ರದೇದಲ್ಲಿ ಬಿಎಸ್ಎಫ್ ಯೋಧರು ಪಾಕಿಸ್ತಾನದ ಸೈನಿಕರಿಗೆ ಸಿಹಿ ತಿಂಡಿಗಳನ್ನು ನೀಡುವ ಮೂಲಕ ಹಬ್ಬದ ಶುಭಾಶಯ ಕೋರಿದರು.

ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ

ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ

ಶ್ರೀನಗರದ ಹಜರತ್ ಶೈನ್ ನಲ್ಲಿ ರಂಜಾನ್ ಹಬ್ಬದ ಅಂಗವಾಗಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಜಮ್ಮ-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪಾಲ್ಗೊಂಡಿದ್ದರು.

ಪ್ರಾರ್ಥನೆಗೆ ಬಂದ ಬ್ಯಾನರ್ಜಿ

ಪ್ರಾರ್ಥನೆಗೆ ಬಂದ ಬ್ಯಾನರ್ಜಿ

ಕೋಲ್ಕತ್ತಾದಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಅಂಗವಾಗಿ ನಡೆಸಿದ ವಿಶೇಷ ಪ್ರಾರ್ಥನೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು.

ಶ್ರೀನಗರದಲ್ಲಿ ವಿಶೇಷ ಪ್ರಾರ್ಥನೆ

ಶ್ರೀನಗರದಲ್ಲಿ ವಿಶೇಷ ಪ್ರಾರ್ಥನೆ

ರಂಜಾನ್ ಅಂಗವಾಗಿ ಶ್ರೀನಗರದ ಪೋಲೋ ಮೈದಾನದಲ್ಲಿ ಮಂಗಳವಾರ ಮುಸ್ಲಿಂ ಬಾಂಧವರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಜಮಾ ಮಸೀದಿ ಮುಂದೆ ಪ್ರಾರ್ಥನೆ

ಜಮಾ ಮಸೀದಿ ಮುಂದೆ ಪ್ರಾರ್ಥನೆ

ರಂಜಾನ್ ಅಂಗವಾಗಿ ನವದೆಹಲಿಯ ಪ್ರಸಿದ್ಧ ಜಮಾ ಮಸೀದಿ ಮುಂದೆ ಮುಸ್ಲಿಂ ಬಾಂಧವರು ಮಂಗಳವಾರ ಪ್ರಾರ್ಥನೆ ಸಲ್ಲಿಸಿದರು.

ಮಕ್ಕಳಿಂದ ವಿಶೇಷ ಪ್ರಾರ್ಥನೆ

ಮಕ್ಕಳಿಂದ ವಿಶೇಷ ಪ್ರಾರ್ಥನೆ

ಕೋಲ್ಕತ್ತಾದಲ್ಲಿ ಮಂಗಳವಾರ ರಂಜಾನ್ ಪ್ರಯುಕ್ತ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದರು.

ಮಕ್ಕಳಿಂದ ಶುಭಾಶಯ ವಿನಿಮಯ

ಮಕ್ಕಳಿಂದ ಶುಭಾಶಯ ವಿನಿಮಯ

ದೆಹಲಿಯ ಜಮಾ ಮಸೀದಿ ಮುಂದೆ ಸಾಮೂಹಿಕ ಪ್ರಾರ್ಥನೆಯ ನಂತರ ಮಕ್ಕಳು ರಂಜಾನ್ ಶುಭಾಶಯ ವಿನಿಮಯ ಮಾಡಿಕೊಂಡರು.

ಪೊಲೀಸ್ ಸರ್ಪಗಾವಲಿನಲ್ಲಿ ಪ್ರಾರ್ಥನೆ

ಪೊಲೀಸ್ ಸರ್ಪಗಾವಲಿನಲ್ಲಿ ಪ್ರಾರ್ಥನೆ

ಗೌಹಾತಿಯಲ್ಲಿ ಮಂಗಳವಾರ ಮುಸ್ಲಿಂಮರು ರಂಜಾನ್ ಪ್ರಾರ್ಥನೆ ಮಾಡುವಾಗ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮಕ್ಕಳು

ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮಕ್ಕಳು

ದೆಹಲಿಯ ಜಮಾ ಮಸೀದಿ ಮುಂದೆ ನಡೆದ ಪವಿತ್ರ ರಂಜಾನ್ ಪ್ರಾರ್ಥನೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದರು.

ಬಾಲಕನ ಪ್ರಾರ್ಥನೆ

ಬಾಲಕನ ಪ್ರಾರ್ಥನೆ

ಮಂಗಳವಾರ ಅರ್ಗತಾಲಾದಲ್ಲಿ ನಡೆದ ಪವಿತ್ರ ರಂಜಾನ್ ಪ್ರಾರ್ಥನೆಯಲ್ಲಿ ಬಾಲಕನೊಬ್ಬ ತಲ್ಲೀನವಾಗಿರುವುದು.

ಜೈಪುರದಲ್ಲಿ ಸಾಮೂಹಿಕ ಪ್ರಾರ್ಥನೆ

ಜೈಪುರದಲ್ಲಿ ಸಾಮೂಹಿಕ ಪ್ರಾರ್ಥನೆ

ರಂಜಾನ್ ಅಂಗವಾಗಿ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.

ತಾಜ್ ಮಹಲ್ ಮುಂದೆ ಸಾಮೂಹಿಕ ಪ್ರಾರ್ಥನೆ

ತಾಜ್ ಮಹಲ್ ಮುಂದೆ ಸಾಮೂಹಿಕ ಪ್ರಾರ್ಥನೆ

ರಂಜಾನ್ ಅಂಗವಾಗಿ ಮಂಗಳವಾರ ಆಗ್ರಾದ ತಾಜ್ ಮಹಲ್ ಮುಂದೆ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.

ಶ್ರೀನಗರದಲ್ಲಿ ಸಾಮೂಹಿಕ ಪ್ರಾರ್ಥನೆ

ಶ್ರೀನಗರದಲ್ಲಿ ಸಾಮೂಹಿಕ ಪ್ರಾರ್ಥನೆ

ರಂಜಾನ್ ಅಂಗವಾಗಿ ಶ್ರೀನಗರದಲ್ಲಿ ಮಂಗಳವಾರ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಜಮಾ ಮಸೀದಿ ಮುಂದೆ ಪ್ರಾರ್ಥನೆ

ಜಮಾ ಮಸೀದಿ ಮುಂದೆ ಪ್ರಾರ್ಥನೆ

ನವದೆಹಲಿಯ ಜಮಾ ಮಸೀದಿ ಮುಂದೆ ಮುಸ್ಲಿಂಮರು ರಂಜಾನ್ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಹಿಳೆಯರಿಂದ ಪ್ರಾರ್ಥನೆ ಸಲ್ಲಿಕೆ

ಮಹಿಳೆಯರಿಂದ ಪ್ರಾರ್ಥನೆ ಸಲ್ಲಿಕೆ

ರಂಜಾನ್ ಅಂಗವಾಗಿ ಶ್ರೀನಗರದಲ್ಲಿ ಆಯೋಜಿಸಿದ್ದ ಪ್ರಾರ್ಥನೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

ದೆಹಲಿಯಲ್ಲಿ ಸಾಮೂಹಿಕ ಪ್ರಾರ್ಥನೆ

ದೆಹಲಿಯಲ್ಲಿ ಸಾಮೂಹಿಕ ಪ್ರಾರ್ಥನೆ

ರಂಜಾನ್ ಅಂಗವಾಗಿ ನವದೆಹಲಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.

ತಾಜ್ ಮಹಲ್ ಬಳಿ ಪ್ರಾರ್ಥನೆ

ತಾಜ್ ಮಹಲ್ ಬಳಿ ಪ್ರಾರ್ಥನೆ

ರಂಜಾನ್ ಅಂಗವಾಗಿ ಆಗ್ರಾದ ತಾಜ್ ಮಹಲ್ ಬಳಿ ಏರ್ಪಡಿಸಿದ್ದ ಪವಿತ್ರ ಪ್ರಾರ್ಥನೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಂಡರು.

ರಾಷ್ಟ್ರಪತಿಗೆ ಶುಭಾಶಯ

ರಾಷ್ಟ್ರಪತಿಗೆ ಶುಭಾಶಯ

ರಂಜಾನ್ ಅಂಗವಾಗಿ ಮುಸ್ಲಿಂ ಬಾಂಧವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಶುಭಾಶಯ ಕೋರಿದರು.

ಮುಖ್ಯಮಂತ್ರಿಗಳಿಂದ ಶುಭಾಶಯ

ಮುಖ್ಯಮಂತ್ರಿಗಳಿಂದ ಶುಭಾಶಯ

ರಂಜಾನ್ ಅಂಗವಾಗಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.

ಸಂಭ್ರಮದ ನಡುವೆ ಪ್ರತಿಭಟನೆ

ಸಂಭ್ರಮದ ನಡುವೆ ಪ್ರತಿಭಟನೆ

ಬೆಂಗಳೂರಿನಲ್ಲಿ ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಬಾಂಧವರು ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಪ್ರಾರ್ಥನೆ ಮುಗಿಸಿ ಬೈಕ್ ಸವಾರಿ

ಪ್ರಾರ್ಥನೆ ಮುಗಿಸಿ ಬೈಕ್ ಸವಾರಿ

ಚಿಕ್ಕಮಗಳೂರಿನಲ್ಲಿ ರಂಜಾನ್ ಸಾಮೂಹಿಕ ಪ್ರಾರ್ಥನೆ ಮುಗಿಸಿ ಮನೆಯತ್ತ ಹೊರಟಿದ್ದು ಹೀಗೆ.

ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸಿಎಂ

ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸಿಎಂ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ನಡೆದ ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+