Ramnavami violence: ಘರ್ಷಣೆ ವಿಡಿಯೋ ಹಂಚಿಕೊಂಡ ಮಮತಾ ಬ್ಯಾನರ್ಜಿ, ಬಿಜೆಪಿ

ಕೋಲ್ಕತ್ತಾ ಏಪ್ರಿಲ್ 1: ರಾಮನವಮಿಯಂದು ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದ ಹಿಂಸಾಚಾರಕ್ಕೆ ಯಾರು ಹೊಣೆ ಎಂದು ತೋರಿಸಲು ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ವಿಡಿಯೋಗಳನ್ನು ಹಂಚಿಕೊಂಡಿವೆ. ಪ್ರತಿ ರಾಮನವಮಿ ಮತ್ತು ದುರ್ಗಾ ವಿಗ್ರಹ ನಿಮಜ್ಜನದಲ್ಲಿ ಬಂಗಾಳದಿಂದ ಇಂತಹ ದೃಶ್ಯಗಳು ಹೊರಹೊಮ್ಮುತ್ತವೆ. ಇದಕ್ಕೆ ಕಾರಣ ಯಾರು ಎನ್ನುವ ಪ್ರಶ್ನೆಗೆ ಎರಡು ಪಕ್ಷಗಳು ವಿಡಿಯೋ ಹಂಚಿಕೊಳ್ಳುವ ಮೂಲಕ ಉತ್ತರ ನೀಡಿವೆ.

ರಾಮನವಮಿಯ ದಿನದಂದು(ಮಾರ್ಚ್ 30) ಹೌರಾದಲ್ಲಿ ನಡೆದ ಹಿಂಸಾಚಾರದಲ್ಲಿ ಉದ್ರಿಕ್ತ ಗುಂಪು ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ಅಂಗಡಿಗಳಿಗೆ ಹಾನಿ ಮಾಡಿ ಆಕ್ರೋಶ ವ್ಯಕ್ತಪಡಿಸಿವೆ. ಹೀಗಾಗಿ ಎರಡು ಗುಂಪುಗಳ ನಡುವಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Ramnavami violence in Bengal

ಬಿಜೆಪಿ-ಕಾಂಗ್ರೆಸ್ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?
ಕೆಲವು ವ್ಯಕ್ತಿಗಳು ಅಂಗಡಿಗಳನ್ನು ಧ್ವಂಸಗೊಳಿಸುತ್ತಿರುವುದನ್ನು ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟವನ್ನು ತೋರಿಸುವ ವಿಡಿಯೊಗಳನ್ನು ಬಿಜೆಪಿ ಹಂಚಿಕೊಂಡಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷವಾದ ತೃಣಮೂಲ ಕಾಂಗ್ರೆಸ್ ಹಂಚಿಕೊಂಡ ವೀಡಿಯೊಗಳಲ್ಲಿ, ರಾಮನವಮಿ ಮೆರವಣಿಗೆಯಲ್ಲಿ ಬಂದೂಕುಗಳು ಮತ್ತು ಇತರ ಆಯುಧಗಳನ್ನು ಹಿಡಿದಿರುವ ಕೆಲವು ಪುರುಷರನ್ನು ಹೈಲೈಟ್ ಮಾಡಲಾಗಿದೆ. ಇದನ್ನು ವಿರೋಧಿಸಲಾಗಿದೆ. ಮಮತಾ ಬ್ಯಾನರ್ಜಿ ಪ್ರಕಾರ ಒಂದು ಸಮುದಾಯವನ್ನು ಇಲ್ಲಿ ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ಆರೋಪ ಮಾಡಿದರು. ಎರಡು ವಿಡಿಯೋಗಳನ್ನು ಗಂಭೀರವಾಗಿ ತೆಗೆದುಕೊಂಡು ಈವರೆಗೆ 14 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Ramnavami violence in Bengal

ಪಕ್ಷಗಳ ಪರಸ್ಪರ ವಾಗ್ದಾಳಿ
ಘಟಯ ಬಗ್ಗೆ ಮಾತನಾಡಿದ ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ, "ಬಂಗಾಳದಲ್ಲಿ ಬಿಜೆಪಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ. ರಾಮನವಮಿ ರ್‍ಯಾಲಿಯಲ್ಲಿ ಪುರುಷರು ಬಂದೂಕು ಹಿಡಿದಿರುವುದನ್ನು ವೀಡಿಯೊಗಳು ತೋರಿಸುತ್ತವೆ" ಎಂದು ಆಕ್ರೋಶ ಹೊರಹಾಕಿದ್ದಾರೆ.

"ಅಪರಾಧಿಗೆ ಧರ್ಮವಿಲ್ಲ... ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಕೋಲ್ಕತ್ತಾಗೆ ಹಿಂತಿರುಗುತ್ತಾನೆ. ಮರುದಿನ ಸಾರ್ವಜನಿಕ ಸಭೆ ನಡೆಸಿ 'ನಾಳೆ ಟಿವಿ ನೋಡಿ' ಎಂದು ಹೇಳುತ್ತಾನೆ. ಮರುದಿನ ಗಲಭೆಗಳನ್ನು ಮಾಡಿಸುತ್ತಾನೆ. ಅರ್ಥ ಮಾಡಿಕೊಳ್ಳಿ. ಈ ಕಾಲಾನುಕ್ರಮವನ್ನು" ಎಂದು ಮುಖ್ಯಮಂತ್ರಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಹೇಳಿದರು. ಬಂಗಾಳದ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಅಮಿತ್ ಶಾ ಅವರೊಂದಿಗಿನ ಭೇಟಿಯನ್ನು ಮತ್ತು ಅವರೇ ಗಲಭೆಗೆ ಕಾರಣ ಎಂದು ಅರ್ಥೈಸಿ ಅಭಿಷೇಕ್ ಹೇಳಿದರು.

ತನಿಖೆಯಿಂದ ತಪ್ಪಿಸಿಕೊಳ್ಳುವ ಯತ್ನ
ರಾಜ್ಯದಲ್ಲಿ ತನಿಖೆಯಾಗುವುದನ್ನು ತಪ್ಪಿಸಲು ಬಿಜೆಪಿಯು ಕೇಂದ್ರೀಯ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆಯನ್ನು ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದೆ. ಇಲ್ಲಿ ತನಿಖೆ ನಡೆದರೆ ಸಿಕ್ಕಿ ಬೀಳುತ್ತೇವೆ ಎಂಬುದು ಅವರಿಗೆ ಗೊತ್ತಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.

ಮೆರವಣಿಗೆಯಲ್ಲಿ ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಬಂಗಾಳ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಕೋಮುಗಲಭೆಗಳನ್ನು ನಡೆಸಲು ಬಿಜೆಪಿಯು ಇತರ ರಾಜ್ಯಗಳ ಗೂಂಡಾಗಳನ್ನು ನೇಮಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ಹೇಳುವುದೇನು?
ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಅವರು ಮಾತನಾಡಿ, "ಬಂಗಾಳದಲ್ಲಿ ಹಿಂದೂಗಳಿಗೆ ಬೆದರಿಕೆ ಇದೆ" ಎಂದು ಆರೋಪಿಸಿದ್ದಾರೆ ಮತ್ತು ರಾಜ್ಯದ ಗೃಹ ಸಚಿವರೂ ಆಗಿರುವ ಶ್ರೀಮತಿ ಬ್ಯಾನರ್ಜಿ ಅವರು ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

"ಇದು ನಿರಾಶಾದಾಯಕವಾಗಿದೆ. ಪ್ರತಿ ರಾಮನವಮಿ ಮತ್ತು ದುರ್ಗಾ ವಿಗ್ರಹ ನಿಮಜ್ಜನದಲ್ಲಿ ಬಂಗಾಳದಿಂದ ಇಂತಹ ದೃಶ್ಯಗಳು ಹೊರಹೊಮ್ಮುತ್ತವೆ. ಬಂಗಾಳದಲ್ಲಿ ಹಿಂದೂಗಳ ಜೀವಕ್ಕೆ ಬೆದರಿಕೆ ಇದೆ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ನಿನ್ನೆ ಹೌರಾದಲ್ಲಿ ಹಿಂಸಾಚಾರ ನಡೆದಾಗ, ಮಮತಾ ಬ್ಯಾನರ್ಜಿ 30 ಗಂಟೆಗಳ ಕಾಲ ಧರಣಿ ಕುಳಿತಿದ್ದರು" ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+