ಮೋದಿ ಜೀ, ಮೊದ್ಲು ಸೀಲಿಂಗ್ ಫ್ಯಾನ್ ಬ್ಯಾನ್ ಆಗ್ಬೇಕ್!
ಮುಂಬೈ, ಏಪ್ರಿಲ್, 5: ಈ ನಟಿಮಣಿಗಳ ತಲೆಯಲ್ಲಿ ಅದು ಏನು ತುಂಬಿಕೊಂಡಿದೆಯೋ ಗೊತ್ತಿಲ್ಲ. ಪುಕ್ಕಟೆ ಪ್ರಚಾರಕ್ಕಾಗಿ ಇಂಥ ತರೇವಾರಿ ಹೇಳಿಕೆಗಳನ್ನು ನೀಡುತ್ತಾರೋ ಅವರೇ ಉತ್ತರ ಹೇಳಬೇಕು.
ಪ್ರಧಾನಿ ನರೇಂದ್ರ ಮೋದಿ ಅವರೇ, ದೇಶದಲ್ಲಿ ಮೊದಲು ಸೀಲಿಂಗ್ ಫ್ಯಾನ್ ನಿಷೇಧ ಮಾಡಿ. ಹೆಣ್ಣು ಮಕ್ಕಳ ಸಾವಿಗೆ ಇದೇ ಮುಖ್ಯ ಕಾರಣವಾಗಿದೆ ಎಂದು ಹೇಳಿಕೆ ನೀಡಿ ಬಾಲಿವುಡ್ ನಟಿ ರಾಖಿ ಸಾವಂತ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.[ನಟಿ ಪ್ರತ್ಯೂಷಾ ಸಾವಿನ ಪ್ರಕರಣಕ್ಕೆ ಹೊಸ ತಿರುವು!]

ನಟಿ ಪ್ರತ್ಯೂಷಾ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಬಗ್ಗೆ ಮಾತನಾಡಿರುವ ರಾಖಿ ನಿಮ್ಮ ಮನೆಗಳಲ್ಲಿ ಎಸಿ, ಟೇಬಲ್ ಫ್ಯಾನ್ ಬಳಕೆ ಮಾಡಿ ಎಂಬ ಪುಕ್ಕಟೆ ಸಲಹೆಯನ್ನು ನೀಡಿದ್ದಾರೆ.['ಬಾಲಿಕಾ ವಧು' ಪ್ರತ್ಯೂಷಾ ಆತ್ಮಹತ್ಯೆಗೆ ಏನು ಕಾರಣ?]
ಸಮಾಜದ ಹಿತ ಚಿಂತನೆಗೋಸ್ಕರ 5000 ಸಾವಿರ ಟೇಬಲ್ ಫ್ಯಾನ್ ಗಳನ್ನು ಕುಟುಂಬಗಳಿಗೆ ನೀಡಲು ನಿರ್ಧರಿಸಿದ್ದೇವೆ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಹೆಣ್ಣು ಮಕ್ಕಳನ್ನು ಉಳಿಸಿ ಅಭಿಯಾನ ಆರಂಭ ಮಾಡಿರುವ ಮೋದಿ ಮೊದಲಿಗೆ ಸೀಲಿಂಗ್ ಫ್ಯಾನ್ ನಿಷೇಧ ಮಾಡಲಿ ಎಂದು ಒತ್ತಾಯ ಮಾಡಿದ್ದಾರೆ.












Click it and Unblock the Notifications