• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

Rajya Sabha Election 2020 LIVE: ಮತದಾನ, ಮತ ಎಣಿಕೆ ಅಪ್ಡೇಟ್ಸ್

|

ನವದೆಹಲಿ, ಜೂನ್ 19: ದೇಶದ 8 ರಾಜ್ಯಗಳ, 19 ರಾಜ್ಯಸಭಾ ಸೀಟುಗಳಿಗೆ ಇಂದು ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದೆ.

ಕರ್ನಾಟಕದ 4 ಹಾಗೂ ಅರುಣಾಚಲಪ್ರದೇಶದ ಒಂದು ಸೀಟಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ. ಕೊರೊನಾ ವೈರಸ್ ಕಾರಣದಿಂದ 18 ಸ್ಥಾನಗಳಿಗೆ ಚುನಾವಣೆ ಮುಂದೂಡಲಾಗಿದೆ. ಇಂದು ಸಂಜೆ 5 ಗಂಟೆಯ ವೇಳೆಗೆ ಫಲಿತಾಂಶ ಹೊರಬರುವ ಸಾಧ್ಯತೆಯಿತ್ತು. ಆದರೆ, ಗುಜರಾತ್ ನಲ್ಲಿ ಮತ ಎಣಿಕೆ ವಿಳಂಬವಾಯಿತು.

ರಾಜ್ಯಸಭೆ ಚುನಾವಣೆ ಫಲಿತಾಂಶ 2020: ಮೇಲ್ಮನೆಗೆ ಆಯ್ಕೆಯಾದವರ ಪಟ್ಟಿ

ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಬಿಜೆಪಿಯಿಂದ ಈರಣ್ಣ ಕಡಾಡಿ, ಅಶೋಕ್ ಗಸ್ತಿ, ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‌ನಿಂದ ಎಚ್‌ಡಿ ದೇವೇಗೌಡ ಆಯ್ಕೆಯಾಗಿದ್ದಾರೆ. ಅರುಣಾಚಲಪ್ರದೇಶದಲ್ಲಿ ನಬಾಮ್ ರೆಬಿಯಾ ಬಿಜೆಪಿಯಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Rajyasabha Elections 2020 Polling For 19 Seats In 8 States Live Updates In Kannada

ಇಂದು ಚುನಾವಣೆ ನಡೆಯಲಿರುವ ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್ ಹಾಗೂ ಉಳಿದ ಎಂಟು ರಾಜ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇತ್ತು. ಮಣಿಪುರದಲ್ಲಿ ಆಡಳಿತಾರೂಢ ಬಿಜೆಪಿಗೆ ಕೆಲ ಶಾಸಕರು ರಾಜೀನಾಮೆ ನೀಡಿರುವುದು ಚುನಾವಣಾ ಕಣದ ರಂಗೇರಿಸಿದೆ.

Oneindia explainer; ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?

ಆಂಧ್ರಪ್ರದೇಶ 4, ಗುಜರಾತ್ 4, ಮಧ್ಯಪ್ರದೇಶ 3, ರಾಜಸ್ಥಾನ 3, ಜಾರ್ಖಂಡ್ 2, ಮಣಿಪುರ 1, ಮಿಜೋರಾಂ 1, ಮೇಘಾಲಯದಲ್ಲಿ 1 ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.ಕರ್ನಾಟಕ 4 ಹಾಗೂ ಅರುಣಾಚಲಪ್ರದೇಶದ 1 ಸೀಟಿಗೆ ಅವಿರೋಧ ಆಯ್ಕೆಯಾಗಿದೆ. ಚುನಾವಣೆ ಕುರಿತ ಕ್ಷಣಕ್ಷಣದ ಮಾಹಿತಿ ಒನ್ಇಂಡಿಯಾ ಕನ್ನಡದಲ್ಲಿ ಪಡೆಯಿರಿ...

Newest First Oldest First
11:18 PM, 19 Jun
ರಾಜ್ಯಸಭಾ ಚುನಾವಣೆ 2020 ಎಲ್ಲಾ 19 ಸ್ಥಾನಗಳ ಫಲಿತಾಂಶ ಪ್ರಕಟ
ಗುಜರಾತ್ 4 ಸ್ಥಾನಗಳ ಪೈಕಿ ಬಿಜೆಪಿ 3, ಕಾಂಗ್ರೆಸ್ 1ರಲ್ಲಿ ಗೆಲುವು; ಬಿಜೆಪಿಯ ಅಭಯ್ ಭಾರದ್ವಾಜ್, ರಮಿಲಾ ಬರ, ನರ್ಹರಿ ಅಮಿನ್ ಗೆ ಗೆಲುವು; ಕಾಂಗ್ರೆಸ್ ಅಭ್ಯರ್ಥಿ ಶಕ್ತಿಸಿಂಗ್ ಗೋಹಿಲ್ ಗೆ ಜಯ
8:58 PM, 19 Jun
ಮಿಜೋರಾಂ 1 : ಎಂಎನ್ಎಫ್ ಗೆ ಗೆಲುವು ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಮಿಜೋರಾಂ ರಾಜ್ಯಸಭೆ ಚುನಾವಣೆಯ ಏಕೈಕ ಸ್ಥಾನವನ್ನು ಮಿಜೋ ನ್ಯಾಷನಲ್ ಫ್ರಂಟ್ ಅಭ್ಯರ್ಥಿ ಕೆ ವನ್ಲಾಲ್ವೆನಾ ಅವರು ದಕ್ಕಿಸಿಕೊಂಡಿದ್ದಾರೆ
8:46 PM, 19 Jun
ಮೊದಲ ಬಾರಿಗೆ ರಾಜ್ಯಸಭೆಗೆ: ಜ್ಯೋತಿರಾದಿತ್ಯ ಸಿಂಧಿಯಾ, ಮಲ್ಲಿಕಾರ್ಜುನ ಖರ್ಗೆ, ಎಂ ತಂಬಿ ದೊರೈ(ಲೋಕಸಭೆ ಮಾಜಿ ಸ್ಪೀಕರ್), ಕೆಸಿ ವೇಣುಗೋಪಾಲ್, ಕೆಆರ್ ಸುರೇಶ್ ರೆಡ್ಡಿ.
8:43 PM, 19 Jun
ಮಣಿಪುರ: ಬಿಜೆಪಿಗೆ ಗೆಲುವು. ಬಿಜೆಪಿ ಏಕೈಕ ಸ್ಥಾನವನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ಸಿನ ಮೂವರು ರೆಬೆಲ್ ಶಾಸಕರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಈ ಮೂವರು ಶಾಸಕರು ವಿಧಾನಸಭೆ ಪ್ರವೇಶಿಸದಂತೆ ಹೈಕೋರ್ಟ್ ಆದೇಶವಿತ್ತು. ಆದರೂ, ಸ್ಪೀಕರ್ ಮೂವರಿಗೂ ಮತ ಹಾಕಲು ಅನುಮತಿ ನೀಡಿದ್ದರು. ಎಐಟಿಸಿ ಶಾಸಕ ಮತದಾನ ಮಾಡಲಿಲ್ಲ. ಮೂವರು ಬಿಜೆಪಿ ಶಾಸಕರೂ ಮತ ಹಾಕಲಿಲ್ಲ. ನಾಲ್ವರು ಎನ್ ಪಿಪಿ ಸಚಿವರು ಮತ ಹಾಕಿದರು.
8:27 PM, 19 Jun
ಗುಜರಾತಿನಲ್ಲಿ ಮತ ಎಣಿಕೆ ವಿಳಂಬ. ಬಿಜೆಪಿ ಶಾಸಕ ಕೇಸರಿ ಸಿಂಗ್ ಸೋಲಂಕಿ ಹಾಗೂ ಸಚಿವ ಭೂಪೇಂದ್ರ ಸಿಂಗ್ ಚೂಡಾಸಮಾ ಅವರ ಮತಗಳನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಚೂಡಾಸಮಾ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಗುಜರಾತ್ ಹೈಕೋರ್ಟ್ ಆದೇಶ ನೀಡಿದೆ. ಗುರುವಾರದ ತನಕ ಹುಷಾರಾಗಿದ್ದ ಕೇಸರಿ ಸಿಂಗ್ ಅವರು ಶುಕ್ರವಾರದಂದು ಪ್ರಾಕ್ಸಿ ವೋಟ್ ಹಾಕಿಸಿದ್ದಾರೆ. ಹೀಗಾಗಿ, ಎರಡು ಮತ ಅನೂರ್ಜಿತಗೊಳಿಸಲು ಕಾಂಗ್ರೆಸ್ ಆಗ್ರಹಿಸಿದೆ.
7:33 PM, 19 Jun
ಮೇಘಾಲಯದಲ್ಲಿ ಎನ್ ಪಿಪಿಗೆ ಗೆಲುವು . ನ್ಯಾಷನಲ್ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ಡಬ್ಲ್ಯೂ ಆರ್ ಖಾರ್ಲುಖಿ ಗೆಲುವುಸಾಧಿಸಿದ್ದಾರೆ.
7:24 PM, 19 Jun
ಜಾರ್ಖಂಡ್: ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಹಾಗೂ ಬಿಜೆಪಿಗೆ ತಲಾ 1 ಸ್ಥಾನ. ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಹಾಗೂ ಬಿಜೆಪಿಗೆ ತಲಾ 1 ಸ್ಥಾನ ಗಳಿಸಿದೆ. ಜೆಎಂಎಂ ಅಧ್ಯಕ್ಷ ಶಿಬು ಸೊರೆನ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ದೀಪಕ್ ಪ್ರಕಾಶ್ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಶಿಬು 31 ಹಾಗೂ ಪ್ರಕಾಶ್ 30, ಕಾಂಗ್ರೆಸ್ಸಿನ ಶಹಜಾದಾ ಅನ್ವಾ 18 ಮತಗಳಿಸಿದರು.
7:15 PM, 19 Jun
ಆಂಧ್ರಪ್ರದೇಶದಲ್ಲಿ ಎಲ್ಲಾ 4 ಸ್ಥಾನಗಳನ್ನು ಗೆದ್ದುಕೊಂಡ ವೈಎಸ್ಸಾರ್ ಕಾಂಗ್ರೆಸ್. ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಪಿಲ್ಲಿ ಸುಭಾಷ್ ಚಂದ್ರ ಬೋಸ್, ಮೊಪಿದೇವಿ ವೆಂಕಟರಮಣ, ಅಲ್ಲ ಅಯೋಧ್ಯಾರಾಮಿ ರೆಡ್ಡಿ, ಪರಿಮಲ್ ನಾತ್ವಾನಿ ಗೆಲುವು ಸಾಧಿಸಿದ್ದಾರೆ.
7:15 PM, 19 Jun
ರಾಜಸ್ಥಾನದಲ್ಲಿ ಕಾಂಗ್ರೆಸ್ 2 , ಬಿಜೆಪಿ 1 ಸ್ಥಾನದಲ್ಲಿ ಜಯ. ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಕೆಸಿ ವೇಣುಗೋಪಾಲ್, ನೀರಜ್ ಡಾಂಗಿ ಗೆಲುವು ಸಾಧಿಸಿದರೆ, ಬಿಜೆಪಿಯಿಂದ ರಾಜೇಂದ್ರ ಗೆಹ್ಲೋಟ್ ಗೆದ್ದಿದ್ದಾರೆ.
7:15 PM, 19 Jun
ಮಧ್ಯಪ್ರದೇಶದಲ್ಲಿ ಬಿಜೆಪಿ 2 , ಕಾಂಗ್ರೆಸ್ 1 ಸ್ಥಾನ ಗಳಿಸಿದೆ. ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಸುಮೇರ್ ಸಿಂಗ್ ಸೋಲಂಕಿ ಜಯಗಳಿಸಿದರೆ, ಕಾಂಗ್ರೆಸ್ಸಿನಿಂದ ದಿಗ್ವಿಜಯ್ ಸಿಂಗ್ ಗೆಲುವು ಸಾಧಿಸಿದ್ದಾರೆ.
7:14 PM, 19 Jun
ರಾಜ್ಯಸಭೆ ಚುನಾವಣೆ 2020 ಫಲಿತಾಂಶ ಪ್ರಕಟ
3:26 PM, 19 Jun
ರಾಜಸ್ಥಾನ ಮುಖ್ಯಮಂತ್ರಿ ಅಶೋಖ್ ಗೆಹ್ಲೋಟ್ ಮತ ಚಲಾಯಿಸಿದ ಸಂದರ್ಭ
3:05 PM, 19 Jun
ಮಧ್ಯಪ್ರದೇಶ: ಮೂರು ರಾಜ್ಯಸಭಾ ಸೀಟುಗಳಿಗೆ ಚುನಾವಣೆ ನಡೆಯಿತು.ಒಟ್ಟು 206 ಮಂದಿ ಮತ ಚಲಾಯಿಸಿದ್ದಾರೆ. ಮತದಾನ ಅಂತ್ಯವಾಗಿದೆ.
2:42 PM, 19 Jun
ಚಂದ್ರಬಾಬು ನಾಯ್ಡು ಮತದಾನ
ಅಮರಾವತಿ: ಟಿಡಿಪಿ ನಾಯಕ, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತದಾನ ಮಾಡಿದರು.
2:41 PM, 19 Jun
ಗುಜರಾತ್ ಬಿಜೆಪಿ ಶಾಸಕರನ್ನು ಸಂಪರ್ಕಿಸಿದ್ದ ಕಾಂಗ್ರೆಸ್
ತಮ್ಮ ಪಕ್ಷಕ್ಕೆ ಮತ ಹಾಕಿ ಎಂದು ಕೇಳಲು ಕಾಂಗ್ರೆಸ್‌ ನಾಯಕರು ಬಿಜೆಪಿ ಶಾಸಕರನ್ನು ಸಂಪರ್ಕಿಸಿದ್ದರು. ಆದರೆ ಎಂದಿಗೂ ಅವರು ಅಂದುಕೊಂಡಿರುವ ಕೆಲಸದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ- ಗುಜರಾತ್ ಸಿಎಂ ವಿಜಯ್ ರೂಪಾನಿ
1:56 PM, 19 Jun
ಭೋಪಾಲ್‌ನಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಬಂದಿದ್ದ ಕಾಂಗ್ರೆಸ್ ಶಾಸಕರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ರಾಜ್ಯ ವಿಧಾನಸಭೆಯನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಲಾಯಿತು.
1:32 PM, 19 Jun
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜ್ಯ ವಿಧಾನಸಭೆಗೆ ಆಗಮಿಸಿ ಮತ ಚಲಾಯಿಸಿದರು.
12:52 PM, 19 Jun
ಪಿಪಿಇ ಕಿಟ್ ಧರಿಸಿ ಶಾಸಕರಿಂದ ಮತ ಚಲಾವಣೆ
ಭೋಪಾಲ್: ಕೊರೊನಾ ಸೋಂಕಿನ ಭಯದಲ್ಲಿ ಪಿಪಿಇ ಕಿಟ್ ಬಳಸಿ ಶಾಸಕ ಕುನಾಲ್ ಚೌದರಿ ಮತ ಚಲಾಯಿಸಿದ್ದಾರೆ. ಅವರಿಗೆ ಈ ಮೊದಲು ಕೊರೊನಾ ಸೋಂಕು ತಗುಲಿತ್ತು.
12:21 PM, 19 Jun
ರಾಜಸ್ಥಾನದಲ್ಲಿ ಶಾಸಕರಿಗೆ ಥರ್ಮಲ್ ಸ್ಕ್ರೀನಿಂಗ್
ರಾಜಸ್ಥಾನದಲ್ಲಿ ಶಾಸಕರಿಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು, ಜೊತೆಗೆ ಎಲ್ಲಾ ಗೇಟ್‌ಗಳ ಬಳಿ ಹ್ಯಾಂಡ್ ಸ್ಯಾನಿಟೈಸರ್ ಅಳವಡಿಸಲಾಗಿತ್ತು. ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು.
12:00 PM, 19 Jun
ಹಿಮಾಚಲ ಪ್ರದೇಶ ಹಾಗೂ ಹರ್ಯಾಣದಲ್ಲಿ ತಲಾ ಒಂದು ಸ್ಥಾನಗಳು ಬಿಜೆಪಿಗೆ ಲಾಭವಾಗಲಿವೆ. ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿ ರಾಜ್ಯಸಭೆ ಟಿಕೆಟ್ ಪಡೆದಿದ್ದ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ ರಾಜ್ಯಸಭೆ ಮೂಲಕ ಸಂಸತ್ತಿಗೆ ಪ್ರವೇಶ ಬಯಸಿದ್ದಾರೆ.
11:58 AM, 19 Jun
ಗುಜರಾತ್‌ನಲ್ಲಿ ಮತದಾನ ಆರಂಭಕ್ಕೂ ಮುನ್ನ, ಅಲ್ಲಿಯ ಬುಡಗಟ್ಟು ಸಮುದಾಯದವರು, ದಲಿತರು, ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತೇವೆ ಎಂದು ಬರವಣಿಗೆ ರೂಪದಲ್ಲಿ ನೀಡುವವರೆಗೂ ನಾವು ಮತ ಚಲಾಯಿಸುವುದಿಲ್ಲ ಎಂದು ಬಿಟಿಪಿ ಶಾಸಕರು ಪಟ್ಟು ಹಿಡಿದಿದ್ದರು.
11:14 AM, 19 Jun
ಮೇಘಾಲಯ: ಮತದಾನ ಪ್ರಕ್ರಿಯೆ 9 ಗಂಟೆಗೆ ಆರಂಭವಾಗಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಆಡಳಿತ ಎಂಡಿಎ ಪಕ್ಷ ಡಾ. ಡಿಆರ್ ಖರ್ಲೂಖಿ ಅವರನ್ನು ಚುನಾವಣೆಯಲ್ಲಿ ನಿಲ್ಲಿಸಿದ್ದು, ವಿರೋಧ ಪಕ್ಷದ ಕೆನೆಡಿ ಖಿರಿಯಮ್ ಅವರನ್ನು ಕಣಕ್ಕಿಳಿಸಿದ್ದಾರೆ.
10:56 AM, 19 Jun
ಆಂಧ್ರಪ್ರದೇಶ: ಮುಖ್ಯಮಂತ್ರಿ ವೈಎಸ್ ಜಗನ್‌ ಮೋಹನ್ ರೆಡ್ಡಿ ಮತ ಚಲಾಯಿಸಿದರು. 2014ರಲ್ಲಿ ರಾಜ್ಯ ಇಬ್ಭಾಗವಾದ ಬಳಿಕ ಮೊದಲ ಬಾರಿಗೆ ರಾಜ್ಯಸಭಾ ಚುನಾವಣೆ ನಡೆಯುತ್ತಿದೆ.
10:28 AM, 19 Jun
ಮೇಘಾಲಯ: ಒಂದು ರಾಜ್ಯಸಭಾ ಸೀಟಿಗಾಗಿ ಚುನಾವಣೆ ನಡೆದಿದ್ದು, ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದೆ.
10:16 AM, 19 Jun
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ವಿಧಾನಸಭೆಗೆ ಆಗಮಿಸಿ ಮತಚಲಾಯಿಸಿದ್ದಾರೆ.
10:10 AM, 19 Jun
ಗುಜರಾತ್: ಮಟರ್ ವಿಧಾನಸಭಾ ಕ್ಷೇತ್ರದ ಶಾಸಕ ಕೇಸರಿಸಿಂಗ್ ಸೋಲಂಕಿ ಅವರಿಗೆ ಎದೆನೋವು ಕಾಣಿಸಿಕೊಂಡ ಪರಿಣಾಮ ಜೂನ್ 18 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಆಂಬ್ಯುಲೆನ್ಸ್‌ನಲ್ಲಿ ಚುನಾವಣಾ ಮತಗಟ್ಟೆಗೆ ಆಗಮಿಸಿದ್ದಾರೆ.
10:04 AM, 19 Jun
ಭೋಪಾಲ್: ರಾಜ್ಯಸಭಾ ಒಂದು ಸೀಟಿಗೆ ಮತದಾನ ನಡೆದಿದೆ. ಮಾಜಿ ಮುಖ್ಯಮಂತ್ರಿ , ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಮತ ಚಲಾಯಿಸಿದ್ದಾರೆ.
10:00 AM, 19 Jun
ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಜ್ಯಸಭೆ ಸದಸ್ಯರ ಅವಧಿ ಮುಕ್ತಾಯವಾಗಿದ್ದು, ಚುನಾವಣೆಗೆ ಸಜ್ಜಾಗಿವೆ. 55 ರಾಜ್ಯಸಭಾ ಸೀಟುಗಳ ಪೈಕಿ 37 ಸೀಟುಗಳಿಗೆ ಅವಿರೋಧ ಆಯ್ಕೆ ನಡೆದಿದೆ.
9:46 AM, 19 Jun
ಕೊರೊನಾ ಸೋಂಕಿತ ಶಾಸಕರಿಗಾಗಿಯೇ ಚುನಾವಣಾ ಆಯೋಗದಿಂದ ಹೊಸ ನಿಯಮಗಳಿವೆ. ಜಗದೀಶ್ ಪಾಂಚಾಲ್, ಬಲರಾಮ್ ಥವಾನಿ, ಕಿಶೋರ್ ಚೌಹಾಣ್ ಅವರು ಕೊರೊನಾ ವೈರಸ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.
9:32 AM, 19 Jun
ಮಧ್ಯಪ್ರದೇಶದಲ್ಲಿ ಮೂರು ರಾಜ್ಯಸಭಾ ರಾಜ್ಯಸಭಾ ಸೀಟುಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಶಾಸಕರು ಬಸ್‌ಗಳಲ್ಲಿ ಬಂದಿಳಿದಿದ್ದಾರೆ.
READ MORE

English summary
Elections for 19 Rajya Sabha seats spread across eight states will be held on Friday with the contest in Gujarat, Madhya Pradesh and Rajasthan promising to be a close affair between the BJP and the Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X