'ರಜನಿಕಾಂತ್ ರಾಜಕೀಯ ಸೇರಿಲ್ಲ, ರಾಜಕೀಯವೇ ರಜನಿ ಸೇರಿದೆ'
Recommended Video

ಬೆಂಗಳೂರು, ಡಿಸೆಂಬರ್ 31: ಸೂಪರ್ ಸ್ಟಾರ್ ರಜನಿಕಾಂತ್ ಅವರು ಹಲವು ದಶಕಗಳ ಬಳಿಕ ಬಹುದೊಡ್ಡ ಘೋಷಣೆ ಮಾಡಿದ್ದಾರೆ. ಅಧಿಕೃತವಾಗಿ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದ್ದಾರೆ.
ಚೆನ್ನೈನ ರಾಘವೇಂದ್ರ ಹಾಲ್ ನಲ್ಲಿ ಅಭಿಮಾನಿಗಳ ಜತೆಗಿನ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾನುವಾರದಂದು ರಜನಿ ಅವರು ಈ ಘೋಷಣೆ ಮಾಡಿದರು. ರಜನಿ ಅವರ ಘೋಷಣೆ ಕಿವಿಗೆ ಬೀಳುತ್ತಿದ್ದಂತೆ, ಅಭಿಮಾನಿಗಳು ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಸಾಮಾಜಿಕ ಜಾಲ ತಾಣಗಳಲ್ಲಿ ರಜನಿಕಾಂತ್ ಹೆಸರಿನ ಹ್ಯಾಶ್ ಟ್ಯಾಗ್ ಗಳು ಸಕತ್ ಟ್ರೆಂಡಿಂಗ್ ನಲ್ಲಿದೆ.
ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕಾರಣಿಗಳು ನಮ್ಮ ಹಣವನ್ನು ದೋಚುತ್ತಿದ್ದಾರೆ. ಈ ವ್ಯವಸ್ಥೆಯನ್ನು ಬದಲಾಯಿಸಬೇಕಿದೆ ಇದಕ್ಕಾಗಿ ನಾನು ರಾಜಕೀಯ ಪ್ರವೇಶ ಬಯಸಿದ್ದೇನೆ ಎಂದು ರಜನಿ ಹೇಳಿದ್ದಾರೆ.
'ರಜನಿ ಅವರು ರಾಜಕೀಯ ಪ್ರವೇಶಿಸುತ್ತಿಲ್ಲ, ರಾಜಕೀಯವೇ ರಜನಿಕಾಂತ್ ಅವರನ್ನು ಪ್ರವೇಶಿಸುತ್ತಿದೆ' ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ರಾಜಕಾರಣಿಗಳು, ಸೆಲೆಬ್ರಿಟಿಗಳು, ನಟ, ನಟಿಯರು, ಸಾರ್ವಜನಿಕರು ರಜನಿ ಅವರ ನಡೆಯನ್ನು ಸ್ವಾಗತಿಸಿದ್ದಾರೆ.

ಅಧಿಕೃತವಾಗಿ ರಾಜಕೀಯ ಪ್ರವೇಶ
ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕಾರಣಿಗಳು ನಮ್ಮ ಹಣವನ್ನು ದೋಚುತ್ತಿದ್ದಾರೆ. ಈ ವ್ಯವಸ್ಥೆಯನ್ನು ಬದಲಾಯಿಸಬೇಕಿದೆ ಇದಕ್ಕಾಗಿ ನಾನು ರಾಜಕೀಯ ಪ್ರವೇಶ ಬಯಸಿದ್ದೇನೆ ಎಂದು ರಜನಿ ಹೇಳಿದ್ದಾರೆ. ರಜನಿ ಅವರು ರಾಜಕೀಯ ಪ್ರವೇಶಿಸುತ್ತಿಲ್ಲ, ರಾಜಕೀಯವೇ ರಜನಿಕಾಂತ್ ಅವರನ್ನು ಪ್ರವೇಶಿಸುತ್ತಿದೆ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.
|
ರಾಜಕೀಯ ತಲ್ಲಣ ಗ್ಯಾರಂಟಿ
ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸಿದ ಬಳಿಕ ತಮಿಳುನಾಡಿನಲ್ಲಿ ರಾಜಕೀಯ ತಲ್ಲಣ ಗ್ಯಾರಂಟಿ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ.
|
ತಮಿಳುನಾಡಿಗೆ ಇದು ಹೊಸದಲ್ಲ
ಎಂಜಿಆರ್, ಕಳೈಂನರ್(ಕರುಣಾನಿಧಿ), ಜಯಲಲಿತಾ, ಕ್ಯಾಪ್ಟನ್ ವಿಜಯ್ ಕಾಂತ್, ಕಮಲ್ ಹಾಸನ್ ನಂತರ ಮತ್ತೊಬ್ಬ ಸೂಪರ್ ಸ್ಟಾರ್ ರಾಜಕೀಯ ಪ್ರವೇಶಿಸಿದ್ದಾರೆ. ತಮಿಳುನಾಡಿನಲ್ಲಿ ಇದು ನಿರೀಕ್ಷಿತ.
|
ರಜನಿಕಾಂತ್ ರಾಜಕೀಯ ಸೇರಿಲ್ಲ
ರಜನಿಕಾಂತ್ ರಾಜಕೀಯ ಸೇರಿದ್ದಾರೆ ಎನ್ನುವ ಬದಲು ರಾಜಕೀಯವೇ ರಜನಿ ಅವರನ್ನು ಸೇರಿಕೊಂಡಿದೆ ಎನ್ನುವುದು ಸರಿ.
|
ರಾಷ್ಟ್ರ ರಾಜಕೀಯದತ್ತ ಮುಖ ಮಾಡಲಿ
ರಜನಿಕಾಂತ್ ಅವರುರಾಷ್ಟ್ರ ರಾಜಕೀಯದತ್ತ ಮುಖ ಮಾಡಲಿ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಜಿವಿಎಲ್ ರಾವ್ ಅವರು ಹೇಳಿದ್ದಾರೆ.
|
ಬಿಜೆಪಿಗೆ ತುಂಬಾ ಖುಷಿಯಾಗಿದೆ
ರಜನಿಕಾಂತ್ ಅವರು ರಾಜಕೀಯ ಸೇರಿರುವುದು ಎಲ್ಲರಿಗಿಂತ ಹೆಚ್ಚಾಗಿ ಬಿಜೆಪಿಗೆ ಹೆಚ್ಚು ಖುಷಿ ಕೊಟ್ಟಿದೆ
|
ಆಶ್ವಾಸನೆಗಳನ್ನು ಈಡೇರಿಸಬೇಕಿದೆ
ಚುನಾವಣೆಗೂ ಮುನ್ನ ನೀಡುವ ಆಶ್ವಾಸನೆಗಳನ್ನು ಈಡೇರಿಸಬೇಕು, ಇಲ್ಲದಿದ್ದರೆ ಮೂರು ವರ್ಷಗಳಲ್ಲಿ ರಾಜೀನಾಮೆ ನೀಡಬೇಕು.
|
ಟಾಪ್ ಟ್ರೆಂಡಿಂಗ್ ನಲ್ಲಿದೆ
ರಜನಿಕಾಂತ್ ಅವರ ಹೆಸರಿನ ಹ್ಯಾಶ್ ಟ್ಯಾಗ್ ಗಳು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿವೆ.
|
ರಜನಿ ದರ್ಶನ ಪಡೆದ ಅಭಿಮಾನಿಗಳು
ಚೆನ್ನೈನ ರಾಘವೇಂದ್ರ ಹಾಲ್ ನಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಘೋಷಿಸಿದ ರಜನಿ ಅವರು ನಂತರ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳತ್ತ ಕೈ ಬೀಸಿದರು.
|
ರಾಜಕೀಯರಂಗದಲ್ಲೂ ಸೂಪರ್ ಹಿಟ್ ಆಗಲಿ
ರಜನಿ ಅವರ ಸಿನಿಮಾಗಳು ಹಿಟ್ ಆದಂತೆ, ರಾಜಕೀಯರಂಗದಲ್ಲೂ ಸೂಪರ್ ಹಿಟ್ ಆಗಲಿ












Click it and Unblock the Notifications