• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಸ್ಥಾನ ಚುನಾವಣೆ: ಮೋದಿ, ಶಾ, ಯೋಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

By ವಿನೋದ್ ಕುಮಾರ್ ಶುಕ್ಲಾ
|

ನವದೆಹಲಿ, ನವೆಂಬರ್ 03: ರಾಜಸ್ಥಾನದಲ್ಲಿ ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಪ್ರಚಾರ ಕಾರ್ಯ ಆರಂಭವಾಗಿದೆ.

ದೀಪಾವಳಿ ವಿಶೇಷ ಪುರವಣಿ

ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡು, ನಾಮಪತ್ರ ಸಲ್ಲಿಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂತಾದ ಗಣ್ಯರು ಪ್ರಚಾರಕ್ಕೆ ಆಗಮಿಸಲಿದ್ದಾರೆ.

ಬಿಜೆಪಿಯ ತಾರಾಪ್ರಚಾರಕರ ಪಟ್ಟಿಯಲ್ಲಿ ಮೋದಿ, ಶಾ ಮತ್ತು ಯೋಗಿಯವರ ಹೆಸರು ಅಗ್ರ ಸಾಲಿನಲ್ಲಿದ್ದು, ರಾಜ್ಯದಲ್ಲಿ ಈ ನಾಯಕರು ಪ್ರಚಾರಕ್ಕೆ ಆಗಮಿಸಬೇಕೆಂಬ ಒತ್ತಾಯ ಸಾಕಷ್ಟು ಜನರಿಂದ ಬಂದಿದೆ. ಬಿಜೆಪಿ ಕಾರ್ಯಕರ್ತರು, ಮುಖಂಡರು ಸಹ ಈ ನಾಯಕರನ್ನು ಪ್ರಚಾರಕ್ಕೆ ಆಹ್ವಾನಿಸಲು ಉತ್ಸುಕರಾಗಿದ್ದಾರೆ.

ಟಿಕೆಟ್ ಸಿಗದಿದ್ದರೆ ಬಂಡಾಯದ ಹಾಡು, ರಾಜಸ್ಥಾನದ್ದೂ ಅದೇ ಪಾಡು!

ನವೆಂಬರ್ ಮತ್ತು ಡಿಸೆಂಬರ್ ಈ ಎರಡು ತಿಂಗಳಿನಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವುದರಿಂದ ಈ ಎಲ್ಲಾ ನಾಯಕರೂ ಸಾಕಷ್ಟು ಒತ್ತಡ ಎದುರಿಸುತ್ತಿದ್ದು, ದಿನೇ ದಿನೇ ಬೇರೆ ಬೇರೆ ರಾಜ್ಯಗಳಲ್ಲಿ rally ಗಳು ನಡೆಯಲಿದೆ.

ಮೋದಿಯವರ ಹೆಕ್ಟಿಕ್ ಶೆಡ್ಯೂಲ್!

ಮೋದಿಯವರ ಹೆಕ್ಟಿಕ್ ಶೆಡ್ಯೂಲ್!

ಪ್ರಧಾನಿ ನರೇಂದ್ರ ಮೋದಿಯವರ ಶೆಡ್ಯೂಲ್ ಹೆಕ್ಟಿಕ್ ಆಗಿದ್ದು, ಎಲ್ಲಾ rally ಗಳಲ್ಲೂ ಭಾಗವಹಿಸುವುದು ಕಷ್ಟವಾಗಬಹುದು ಎನ್ನಲಾಗಿದೆ. ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿಲ್ಲ. ಪಟ್ಟಿ ಬಿಡುಗಡೆಯಾದ ಮೇಲೆ ಚುನಾವಣೆಗೆ 15 ದಿನ ಬಾಕಿ ಇರುವಾಗ ಮೋದಿಯವರು ನಿರಂತರವಾಗಿ ಈ ರಾಜ್ಯದ 22 ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ನವೆಂಬರ್ 23 ರಿಂದ ಡಿಸೆಂಬರ್ 5 ರವರೆಗೆ ಮೋದಿ rally ಗಳು ನಡೆಯಲಿವೆ.

'ಮಾಜಿ ಸಂಸದರಿಗೆ ವಿಧಾನಸಭೆ ಟಿಕೆಟ್ ಬೇಡವೇ ಬೇಡ! ಯಾಕಂದ್ರೆ...'

ಯೋಗಿ rally ಗೆ ಡಿಮ್ಯಾಂಡು!

ಯೋಗಿ rally ಗೆ ಡಿಮ್ಯಾಂಡು!

ಉತ್ತರ ಪ್ರದೇಶದ ಆತುಕೊಂಡಿರುವ ರಾಜಸ್ಥಾನದ ಕೆಲವು ಭಾಗಗಳಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಆದ್ದರಿಂದ ಈ ಭಾಗದಲ್ಲಿ ಯೋಗಿ ಅವರನ್ನು ಹೆಚ್ಚಾಗಿ ಪ್ರಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ರಾಜಸ್ಥಾನದಾದ್ಯಂತ ಯೋಗಿ ಪ್ರಚಾರಕ್ಕೆ ಬೇಡಿಕೆ ಇದೆ, ಯೋಗಿ ಅಭಿಮಾನಿಗಳಿದ್ದಾರೆ. ಆದರೆ ಎಲ್ಲೆಡೆಯೂ rally ಮಾಡುವುದು ಸಮಯದ ಭಾವದಿಂದ ಸಾಧ್ಯವಿಲ್ಲದ ಕಾರಣ ಮಹತ್ವದ ಕ್ಷೇತ್ರಗಳಲ್ಲಿ ಯೋಗಿ ಪ್ರಚಾರ ನಡೆಸಲಿದ್ದಾರೆ.

ಹಿರಿಯ ನಾಯಕರಿಗೆ ಟಿಕೆಟ್ ಇಲ್ಲ! ಫಲಿಸುತ್ತಾ, ಉಲ್ಟಾ ಹೊಡೆಯತ್ತಾ ಕಾಂಗ್ರೆಸ್ ತಂತ್ರ?

ಅಮಿತ್ ಶಾ ಪ್ರಚಾರ

ಅಮಿತ್ ಶಾ ಪ್ರಚಾರ

ರಾಜಸ್ಥಾನದ ಹಾಲಿ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ rally ಗೂ ಸಾಕಷ್ಟು ಬೇಡಿಕೆ ಇದ್ದು, ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲಾ ನಾಯಕರೂ ಒಂದೇ ಜಾಗಗಳ ಬದಲು ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ಮೋದಿ, ಶಾ ಮತ್ತು ಯೋಗಿ ಪ್ರಚಾರದ ನಂತರ ರಾಜಸ್ಥಾನದಲ್ಲಿರುವ ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆ ಕೊಂಚ ಬದಲಾದೀತು ಎಂಬ ನಿರೀಕ್ಷೆ ಇದೆ.

ರಾಜಸ್ಥಾನದಲ್ಲಿ ಚುನಾವಣೆ ಎಂದು?

ರಾಜಸ್ಥಾನದಲ್ಲಿ ಚುನಾವಣೆ ಎಂದು?

ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101.

English summary
The Bharatiya Janata Party (BJP), which is facing a daunting task to save its government in Rajasthan, will have star campaigners as Uttar Pradesh chief minister Yogi Adityanath besides of course Prime Minister Narendra Modi, national party president Amit Shah and Rajasthan chief minister Varundhara Raje.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X