ಪಾರ್ಶ್ವವಾಯು ಪೀಡಿತ ತಾಯಿಯನ್ನು ಹೊಡೆದು ಕೊಂದ ಮಗ!

ಅಲ್ವಾರ, ಫೆಬ್ರವರಿ 3: ಒಂದು ತಿಂಗಳ ಹಿಂದೆ ಗುಜರಾತ್ ನ ರಾಜ್ ಕೋಟ್ ನಲ್ಲಿ ಸ್ವಂತ ಮಗನೇ ತಾಯಿಯನ್ನು ಟೆರೆಸ್ ನಿಂದ ನೂಕಿದ ಸುದ್ದಿ ಕೇಳಿ ದಂಗಾಗಿರುತ್ತೀರಿ! ಆ ಘಟನೆ ನಡೆದು ತಿಂಗಳು ಕಳೆವ ಮುನ್ನವೇ ರಾಜಸ್ಥಾನದ ಅಲ್ವಾರ್ ನಲ್ಲಿ ಸ್ವಂತ ಮಗನೇ ಹೆತ್ತ ತಾಯಿಯನ್ನು ಹೊಡೆದು ಕೊಂದ ಅಮಾನವೀಯ ಘಟನೆ ನಡೆದಿದೆ.

ಪಾರ್ಶ್ವವಾಯು ಪೀಡಿತಳಾಗಿದ್ದ 82ರ ಇಳಿ ವಯಸ್ಸಿನ ತಾಯಿಯ ಮೇಲೆ ಮಗನೇ ಅಮಾನವೀಯವಾಗಿ ಹಲ್ಲೆ ನಡೆಸುತ್ತಿದ್ದ ಹೃದಯ ವಿದ್ರಾವಕ ದೃಶ್ಯವನ್ನು ಸಂಬಂಧಿಯೊಬ್ಬರು ತಮ್ಮ ಫೋನಿನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.(ಚಿತ್ರಕೃಪೆ: ಎಎನ್ ಐ)

Rajasthan: Man thrashes paralytic mother to death

ಘಟನೆ ಜ.18ರಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದು, ದೂರು ದಾಖಲಿಸಿದ್ದಾರೆ. ಆರೋಪಿ ನಾಪತ್ತೆಯಾಗಿದ್ದಾನೆ.

ಜ.3 ರಂದು ಗುಜರಾತಿನ ರಾಜ್ ಕೋಟ್ ನಲ್ಲಿ, ತಾಯಿ ಅನಾರೋಗ್ಯ ಪೀಡಿತಳೆಂದು ಬೇಸತ್ತ ಮಗ ಆಕೆಯನ್ನು ತನ್ನ ಅಪಾರ್ಟ್ಮೆಂಟಿನ ಬಹುಮಹಡಿ ಕಟ್ಟಡದಿಂದ ನೂಕಿ ಕೊಂದಿದ್ದ. ಮಗ ತಾಯಿಯನ್ನು ಟೆರೆಸ್ ಗೆ ಎಳೆದೊಯ್ಯುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರಿಂದ ಈ ಕೃತ್ಯವನ್ನು ಮಗನೇ ಮಾಡಿದ್ದಾನೆಂಬುದು ಬಹಿರಂಗವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+