Rajasthan assembly election result 2023: ಬಿಜೆಪಿ ವಸುಂಧರಾ ರಾಜೇಗೆ ಮುನ್ನಡೆ

ಜೈಪುರ, ಡಿಸೆಂಬರ್‌ 3: ರಾಜಸ್ಥಾನದಲ್ಲಿ ಬಿಜೆಪಿಯ ವಸುಂಧರಾ ರಾಜೇ ಅವರು ಝಲ್ರಾಪತನ್ ವಿಧಾನಸಭಾ ಕ್ಷೇತ್ರದಿಂದ ಮುನ್ನಡೆ ಸಾಧಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯು ಸರ್ಕಾರ ರಚಿಸಲು ಮ್ಯಾಜಿಕ್‌ ನಂಬರ್‌ ತಲುಪಿದೆ. ಕಾರ್ಯಕರ್ತರು ಈಗಾಗಲೇ ಗೆಲುವಿನ ವಿಜಯ ಪತಾಕೆ ಹಾರಿಸಲು ಸಜ್ಜಾಗುತ್ತಿದ್ದಾರೆ.

ರಾಜಸ್ಥಾನದಲ್ಲಿ ಬಿಜೆಪಿ ಬಹುಮತದತ್ತ ಮುನ್ನುಗ್ಗುತ್ತಿರುವಂತೆಯೇ ಚುನಾವಣಾ ಆಯೋಗದ ಆರಂಭಿಕ ಟ್ರೆಂಡ್‌ಗಳ ಪ್ರಕಾರ ಟೋಂಕ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಜಿತ್ ಸಿಂಗ್ ಮೆಹ್ತಾ ವಿರುದ್ಧ ಕಾಂಗ್ರೆಸ್ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮುನ್ನಡೆ ಸಾಧಿಸಿದ್ದಾರೆ. 2018 ರಲ್ಲಿ ಸಚಿನ್‌ ಪೈಲಟ್, ಬಿಜೆಪಿ ಅಭ್ಯರ್ಥಿ ಯೂನುಸ್ ಖಾನ್ ಅವರನ್ನು 54,179 ಮತಗಳ ಅಂತರದಿಂದ ಸೋಲಿಸುವ ಮೂಲಕ ಸ್ಥಾನವನ್ನು ಗೆದ್ದಿದ್ದರು.

Rajasthan election result: BJP Vasundhara Raje leads

ಕಾಂಗ್ರೆಸ್ ಪಕ್ಷದಿಂದ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಅಜಿತ್ ಸಿಂಗ್ ಮೆಹ್ತಾ ಟೋಂಕ್ ಕ್ಷೇತ್ರದಲ್ಲಿ ಇಬ್ಬರು ಪ್ರಮುಖ ಅಭ್ಯರ್ಥಿಗಳು. ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಶೋಕ್ ಬೈರ್ವಾ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಅಬ್ದುಲ್ ಲತೀಫ್, ಇಂಡಿಯನ್ ಪೀಪಲ್ಸ್ ಗ್ರೀನ್ ಪಾರ್ಟಿಯ (ಐಪಿಜಿಪಿ) ಗಣೇಶ್, ಆಜಾದ್ ಸಮಾಜ ಪಕ್ಷದ (ಕಾನ್ಶಿ ರಾಮ್) ಮೊಹಮ್ಮದ್ ಶೋಬ್ ಖಾನ್ ಮತ್ತು ಸ್ವತಂತ್ರ ಅಭ್ಯರ್ಥಿಗಳಾದ ಸೀತಾರಾಮ್ ಮತ್ತು ಜಗದೀಶ್ ಪ್ರಸಾದ್ ಶರ್ಮಾ ಕೂಡ ಕಣದಲ್ಲಿದ್ದಾರೆ.

ಚುನಾವಣಾ ಆಯೋಗದಿಂದ ದೊರೆತ ಮಾಹಿತಿಯ ಪ್ರಕಾರ. 11.31ಕ್ಕೆ ಬಿಜೆಪಿ 116, ಕಾಂಗ್ರೆಸ್‌ 67, ಪಕ್ಷೇತರರು 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಎಸ್‌ಪಿ 3, ಸಿಪಿಐ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜಸ್ಥಾನ ವಿಧಾನಸಭಾ ಚುನಾವಣೆಯ ಫಲಿತಾಂಶ ಭಾನುವಾರ ಸಂಜೆ ವೇಳೆಗೆ ಅಂತಿಮ ಫಲಿತಾಂಶ ಚಿತ್ರಣ ದೊರೆಯಲಿದೆ. ಜೈಪುರದ ಪಕ್ಷದ ಕಚೇರಿಯ ಹೊರಗೆ ಬಿಜೆಪಿ ಕಾರ್ಯಕರ್ತರು ಡ್ರಮ್ ಬಾರಿಸುವುದು ಮತ್ತು ನೃತ್ಯ ಮಾಡುವುದು ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+