ರಾಜಸ್ಥಾನ ಸಿಎಂ ರೇಸ್: ಬಾಬಾ ಬಾಲಕನಾಥ್ ಹಿಂದೆ ಸರಿದಿದ್ದು ಏಕೆ?
ಜೈಪುರ, ಡಿಸೆಂಬರ್ 9: ರಾಜಸ್ಥಾನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ದಿನೇ ದಿನೇ ಕಾವೇರುತ್ತಿದ್ದು, ಬಿಜೆಪಿ ಹೈಕಮಾಂಡ್ ಫಲಿತಾಂಶ ಬಂದು ವಾರವಾದರೂ ಹೆಸರು ಅಂತಿಮಗೊಳಿಸದೇ ಸತಾಯಿಸುತ್ತಿದೆ. ಈ ಬೆನ್ನಲ್ಲೇ ಈಗ ಸಿಎಂ ರೇಸ್‌ನಲ್ಲಿದ್ದ ಬಾಬಾ ಬಾಲಕನಾಥ್ ಸ್ಪರ್ಧೆಯಲ್ಲಿ ನಾನಿಲ್ಲ ಎಂದು ಹಿಂದೆ ಸರಿದಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆಲುವು ಸಾಧಿಸಿದ ನಂತರ ಬಾಬಾ ಬಾಲಕನಾಥ್ ಅವರು ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿದ್ದಾರೆ. ಇಲ್ಲಿ ಶಾಸಕರಾಗಿ ಗೆದ್ದ ಬಳಿಕ ಅವರು ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಅವರಿಗೆ ಸಿಎಂ ಸ್ಥಾನ ನೀಡಬಹುದು ಎಂಬ ಊಹಾಪೋಹಗಳು ಹುಟ್ಟಿಕೊಂಡಿವೆ. ಆದಾಗ್ಯೂ, ಬಾಬಾ ಬಾಲಕನಾಥ್ ಅವರ ಇತ್ತೀಚಿನ ಹೇಳಿಕೆಯು ವಿಭಿನ್ನ ನಿಲುವವನ್ನು ಸೂಚಿಸಿದೆ.

ಬಾಬಾ ಬಾಲಕನಾಥ್ ಅವರ ಹೇಳಿಕೆ:
ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಸದರಾಗಿ ರಾಷ್ಟ್ರ ಸೇವೆ ಮಾಡುವ ಅವಕಾಶಕ್ಕಾಗಿ ಬಾಬಾ ಬಾಲಕನಾಥ್ ತಮ್ಮ ಹೇಳಿಕೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಾಧ್ಯಮಗಳು ಮತ್ತು ಸಾಮಾಜಿಕ ವೇದಿಕೆಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನಿರ್ಲಕ್ಷಿಸಬೇಕೆಂದು ಅವರು ಜನರನ್ನು ಕೇಳಿಕೊಂಡಿದ್ದಾರೆ.
"ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಸದ ಮತ್ತು ಶಾಸಕರಾಗುವ ಮೂಲಕ ರಾಷ್ಟ್ರ ಸೇವೆ ಮಾಡುವ ಅವಕಾಶವನ್ನು ಪಡೆದೆನು. ಚುನಾವಣಾ ಫಲಿತಾಂಶ ಬಂದ ನಂತರ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನಿರ್ಲಕ್ಷಿಸಿ. ಸದ್ಯಕ್ಕೆ ನಾನು ಪ್ರಧಾನಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಮಾರ್ಗದರ್ಶನದಲ್ಲಿ ನಾನು ಹೆಚ್ಚಿನ ಅನುಭವವನ್ನು ಪಡೆಯಲು ಬಯಸುತ್ತೇನೆ "ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬಾಲಕನಾಥ್ ಹೇಳಿದ್ದಾರೆ.
ಬಾಬಾ ಬಾಲಕನಾಥ್ ಪ್ರಸ್ತುತ ಬಾಬಾ ಮಸ್ತನಾಥ್ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಅವರು ನಾಥ ಪಂಥದ 8 ನೇ ಮಹಂತ್ ಕೂಡ ಆಗಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ಮಹಂತ್ ಚಂದನಾಥ್ ಅವರನ್ನು ಜುಲೈ 29, 2026 ರಂದು ನಡೆದ ಸಮಾರಂಭದಲ್ಲಿ ಘೋಷಿಸಿದರು. ಅವರ ಚುನಾವಣಾ ಪ್ರಚಾರದ ಸಮಯದಲ್ಲಿ ಅವರಿಗೆ ಯೋಗಿ ಆದಿತ್ಯನಾಥ್ ಅವರ ಬೆಂಬಲವಿತ್ತು.
ವಿಧಾನಸಭಾ ಚುನಾವಣೆಯಲ್ಲಿ ಹೇಳಿದ್ದೇನು:
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿಯ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದ ಬಾಬಾ ಬಾಲಕನಾಥ್, ಪ್ರಧಾನಿ ಮೋದಿ ನೇತೃತ್ವದಲ್ಲಿ ರಾಜಸ್ಥಾನದ ಜನರ ಸೇವೆಯನ್ನು ಬಿಜೆಪಿ ಮುಂದುವರಿಸಲಿದೆ. ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ರಾಜ್ಯದ ಜನರಿಗಾಗಿ ಕೆಲಸ ಮಾಡುವುದಾಗಿ ಮತ್ತು ಭಾರತದ ಅಭಿವೃದ್ಧಿಗೆ ಕೊಡುಗೆ ನೀಡುವುದಾಗಿ ವಾಗ್ದಾನ ಮಾಡಿದ್ದರು.
ವಸುಂಧರಾ ರಾಧೆ ಸಕ್ರಿಯ:
ಇದೇ ವೇಳೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಅವರು ಶಾಸಕರೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಸಭೆಯಲ್ಲಿ ನಡ್ಡಾ ಅವರು ರಾಜಸ್ಥಾನದ ಯಶಸ್ಸನ್ನು ಸಾಮೂಹಿಕ ನಾಯಕತ್ವದ ಮೂಲಕ ಸಾಧಿಸಲಾಗಿದೆ ಎಂದು ಒತ್ತಿ ಹೇಳಿದ್ದಾರೆ ಸರ್ಕಾರದ ಚೌಕಟ್ಟಿನಲ್ಲಿ ಒಳಗೊಳ್ಳುವ ವಿಧಾನದ ಸುಳಿವನ್ನು ನೀಡಿದ್ದಾರೆ. ವಸುಂಧರಾ ರಾಜೇ ಅವರ ಭವಿಷ್ಯದ ಪಾತ್ರವನ್ನು ಬಹಿರಂಗಪಡಿಸಲಾಗಿಲ್ಲ, ಪಕ್ಷದ ನಾಯಕತ್ವವು ಅವರ ಮುಂಬರುವ ಜವಾಬ್ದಾರಿಗಳ ಬಗ್ಗೆ ಸುಳಿವು ನೀಡಿದೆ.












Click it and Unblock the Notifications