Raj kundra: ಅಶ್ಲೀಲ ವಿಡಿಯೋ ಕೇಸ್: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಬಿಗ್ ಶಾಕ್!
ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್‌ಕುಂದ್ರಾಗೆ ಮತ್ತೆ ಸಂಕಷ್ಟ ಎದುರಾಗಿದೆ. ಸೆಕ್ಸ್ (ಅಶ್ಲೀಲ) ವಿಡಿಯೋಗಳನ್ನು ನಿರ್ಮಾಣ ಮಾಡಿದ್ದು ಹಾಗೂ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಇವರ ಮೇಲೆ ಇದೆ. ರಾಜ್ ಕುಂದ್ರಾ ಮೇಲೆ ಈ ಆರೋಪ ಕೇಳಿ ಬಂದ ಮೇಲೆ ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದರು. ರಾಜ್ ಅವರ ಮೇಲೆ ಕೇಳಿ ಬಂದ ಗಂಭೀರ ಆರೋಪದಿಂದ ಶಿಲ್ಪಾ ಶೆಟ್ಟಿ ಅವರು ತಲೆತಗ್ಗಿಸುವಂತೆ ಆಗಿತ್ತು. ಸೆಕ್ಸ್ ವಿಡಿಯೋಗಳನ್ನು ತಯಾರಿಸುವುದು ಹಾಗೂ ಅವುಗಳನ್ನು ಹಂಚಿಕೊಂಡಿದ್ದರು ಎನ್ನುವ ಆರೋಪವಿದ್ದು ಜೈಲಿಗೂ ಹೋಗಿ ಬಂದಿದ್ದಾರೆ. ಈಗ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
100 ಕೋಟಿಗೂ ಹೆಚ್ಚು ಆಸ್ತಿ ವಶ: ಇನ್ನು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರಿಗೆ ಸೇರಿದ್ದ ಬರೋಬ್ಬರಿ 100 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಆಸ್ತಿಯನ್ನು ಇಡಿ ವಶಕ್ಕೆ ಪಡೆದಿದೆ. 2021ರಲ್ಲಿ ಕುಂದ್ರಾ ಅವರು ಸೆಕ್ಸ್ ವಿಡಿಯೋಗಳನ್ನು ನಿರ್ಮಾಣ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.

ರಾಜ್ ಕುಂದ್ರಾ ಅವರು ನೀಲಿ ಚಿತ್ರ (porn film) ಕೇಸ್ ಬೆಳಕಿಗೆ ಬರುತ್ತಿದ್ದಂತೆ ಭಾರೀ ಸಂಚಲನವೇ ಬಾಲಿವುಡ್‌ನಲ್ಲಿ ಸೃಷ್ಟಿಯಾಗಿತ್ತು. ಅದಷ್ಟೇ ಅಲ್ಲ, ಅವರು ಈ ಪ್ರಕರಣದಲ್ಲಿ ಜೈಲು ಸೇರಿದ್ದು ಜಾಮೀನಿನ ಮೇಲೆ ಹೊರಗಿದ್ದಾರೆ. ರಾಜ್ ಕುಂದ್ರಾ ಚಿತ್ರರಂಗದ ಪ್ರಮುಖ ನಟಿಯರನ್ನು ಹಾಗೂ ಮಾಡೆಲ್ಗಳನ್ನು ಬಳಸಿಕೊಂಡು ಬ್ಲೂಫಿಲ್ಮ್ ತಯಾರಿಸುತ್ತಿದ್ದ ಎನ್ನುವ ಗಂಭೀರ ಆರೋಪವಿದೆ. ಇದೇ ಕಾರಣಕ್ಕೆ ಕೋಟ್ಯಾಂತ ರೂಪಾಯಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ.
ಅಶ್ಲೀಲ ವಿಡಿಯೋಗಳ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು. ಇದೀಗ ಇಡಿ (ಜಾರಿ ನಿರ್ದೇಶನಾಲಯ) ಶಾಕ್ ಕೊಟ್ಟಿದೆ. ರಾಜ್ ಕುಂದ್ರಾ ಅವರಿಗೆ ಸೇರಿದ ಮನೆ ಹಾಗೂ ಆಫೀಸ್‌ಗಳ ಮೇಲೆ ಇಡಿ ರೈಡ್ ಮಾಡಿ ಶಾಕ್ ಕೊಟ್ಟಿದೆ. ಇನ್ನು ಕೆಲವು ದಿನಗಳ ಹಿಂದೆ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರ ಮೇಲೆ ವಂಚನೆ ಕೇಸ್ ದಾಖಲಾಗಿತ್ತು. ಇನ್ನು ಈ ರೀತಿ ಸೆಕ್ಸ್ ವಿಡಿಯೋಗಳನ್ನು ನಿರ್ಮಾಣ ಮಾಡಿ ಕುಂದ್ರಾ ಲಕ್ಷಾಂತರ ರೂಪಾಯಿ ದುಡ್ಡು ಗಳಿಸುತ್ತಿದ ಎನ್ನುವ ಆರೋಪವೂ ಈ ಹಿಂದೆ ಕೇಳಿ ಬಂದಿತ್ತು.

ರಾಜ್‌ಕುಂದ್ರಾ ಅವರು ಈ ರೀತಿ ವಿಡಿಯೋಗಳನ್ನು ತಯಾರಿಸುತ್ತಿದ್ದಾರೆ ಎನ್ನುವ ವಿಚಾರವು ದೇಶದಾದ್ಯಂತ ಭಾರಿ ಗದ್ದಲವನ್ನೇ ಸೃಷ್ಟಿ ಮಾಡಿತ್ತು. ಇದೀಗ ಶುಕ್ರವಾರ ಇಡಿ ಶಿಲ್ಪಾ ಶೆಟ್ಟಿ ದಂಪತಿಗೆ ಭಾರೀ ಶಾಕ್ ನೀಡಿರುವುದು ವರದಿಯಾಗಿದೆ. ರಾಜ್ ಕುಂದ್ರಾ ಅವರಿಗೆ ಸೇರಿದ ಮಹಾರಾಷ್ಟ್ರದ ರಾಜಧಾನಿ ಮುಂಬೈ ಹಾಗೂ ಉತ್ತರ ಪ್ರದೇಶದ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಇಡಿ ದಾಳಿ ನಡೆದಿದೆ.
ನಾನು ಆ ಸಿನಿಮಾ ಮಾಡಿಲ್ಲ
ಇನ್ನು ಕುಂದ್ರಾ ಅವರ ಪ್ರಕರಣ ದೇಶದಾದ್ಯಂತ ಭಾರೀ ಸುದ್ದಿಯಾದರೂ, ಅವರು ಈ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ನಾನು ಆ ರೀತಿ ಸಿನಿಮಾ ಮಾಡಿರಲಿಲ್ಲ ಕಣ್ರೀ ನಾನು (ನಿರ್ಮಾಣ ಅಥವಾ ನಿರ್ದೇಶನ) ಮಾಡಿದ್ದು , ಬ್ಲೂಫೀಲ್ಮೇನು ಅಲ್ಲ. ನಾನು ಮಾಡಿದ್ದು ಬರೀ ಕಾಮೋದ್ರೇಕದ ಸಿನಿಮಾ ಮಾತ್ರ ಅಂತ ರಾಜ್ ಕುಂದ್ರಾ ಅವರು ತೇಪೆ ಹಚ್ಚುವ ಕೆಲಸ ಮಾಡಿದ್ದರು. ಈ ವಿಷಯ ಹೊರಗೆ ಬರುತ್ತಿದ್ದಂತೆಯೇ ಅವರು ಹಲವು ತಿಂಗಳುಗಳ ಕಾಲ ಮನೆಯಲ್ಲೇ ಸ್ವಯಂ ಗೃಹಬಂಧಿ (ಮನೆಯಲ್ಲೇ ಇದ್ದರು)ಯಾಗಿದ್ದರು. ಹೊರಗೇ ಬರ್ತಿರಲಿಲ್ಲ. ಅಲ್ಲದೇ ಹೊರಗೆ ಬಂದರೂ ಮುಖಕ್ಕೆ ಹೆಲ್ಮೆಟ್ (ಮುಖ ಮುಚ್ಚುವ / ಕಾಣಿಸದಂತಹ ಮಾಸ್ಕ್) ಹಾಕಿಕೊಂಡೇ ಓಡಾಡುತ್ತಿದ್ದರು. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿತ್ತು.












Click it and Unblock the Notifications