ಕೇರಳ ಪ್ರವೇಶಿಸಿದ ಮುಂಗಾರು ಮಾರುತ, ಹಲವು ರಾಜ್ಯಗಳಲ್ಲಿ ಮಳೆ ಮುನ್ಸೂಚನೆ

ನವದೆಹಲಿ ಮೇ 29: ದೇಶದ ಅರ್ಧದಷ್ಟು ಪ್ರದೇಶಗಳಲ್ಲಿ ಮುಂಗಾರು ಪೂರ್ವ ಮಳೆ ಸುರಿಯುತ್ತಿದ್ದರೂ ಸಹ, ವಾಯುವ್ಯ ಭಾರತದ ಬಯಲು ಪ್ರದೇಶಗಳು ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನೊಂದೆಡೆ, ಮುಂಗಾರು ಮಾರುತಗಳು ಅವಧಿಗೆ ಮುನ್ನ ಕೇರಳ ಪ್ರವೇಶಿಸಿದ್ದು, ಮುಂದಿನ ಐದು ದಿನಗಳಲ್ಲಿ ಹಲವೆಡೆ ಮಳೆ ಸಾಧ್ಯತೆಯಿದೆ.

"ಮುಂದಿನ ಮೂರು ದಿನಗಳಲ್ಲಿ ವಾಯುವ್ಯ ಭಾರತದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯಿದೆ. ಅದೇ ರೀತಿ ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯಿದೆ,'' ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.

''ಆದಾಗ್ಯೂ ಮುಂದಿನ ಐದು ದಿನಗಳಲ್ಲಿ ದೇಶದಲ್ಲಿ ತಾಪಮಾನ ಗಮನಾರ್ಹವಾಗಿ ಏರಿಕೆಯಾಗುವುದು ಕಂಡುಬರುವುದಿಲ್ಲ,'' ಎಂದು ಹೇಳಿದೆ.

ದಕ್ಷಿಣ ಪೆನೆನ್ಸುಲಾರ್ ದ್ವೀಪ ಪ್ರದೇಶವು ಈಗಾಗಲೇ ನೈಋತ್ಯ ಮುಂಗಾರನ್ನು ಸ್ವಾಗತಿಸಲು ಅಣಿಯಾಗಿದೆ. ಅಲ್ಲದೇ ಪೂರ್ವ ಈಶಾನ್ಯ ಭಾರತವು ಸಹ ಮಳೆಗೆ ಸಾಕ್ಷಿಯಾಗಲಿದೆ ಎಂದು ಮಾಹಿತಿ ನೀಡಿದೆ.

ಕರ್ನಾಟಕದಲ್ಲೂ ಕೂಡ ಮಳೆ ಸಂಭವ

ಕರ್ನಾಟಕದಲ್ಲೂ ಕೂಡ ಮಳೆ ಸಂಭವ

ಅರಬ್ಬಿ ಸಮುದ್ರದಿಂದ ಭಾರತ ದಕ್ಷಿಣ ಪೆನೆನ್ಸುಲಾರ್ ದ್ವೀಪದ ಮೇಲೆ ಪಶ್ಚಿಮ ಮಾರುತಗಳ ಪ್ರಭಾವದ ಕಾರಣದಿಂದ ಕಡಿಮೆ ಉಷ್ಣ ವಲಯದ ಕೇರಳ, ಮಾಹೆ ಮತ್ತು ಲಕ್ಷ ದ್ವೀಪಗಳಲ್ಲಿ ಗುಡುಗು, ಮಿಂಚು ಸಹಿತ ಲಘು ಮಳೆಯಾಗುವ ಸಾಧ್ಯತೆಯಿದೆ. ಅದೇ ರೀತಿ ಮುಂದಿನ ಐದು ದಿನಗಳಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಪುದುಚೇರಿ ಮತ್ತು ಕಾರೈಕಲ್‌ನ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಜೂನ್ 1ರವರೆಗೆ ಕೇರಳ ಮತ್ತು ಮಾಹೆಯಲ್ಲಿ ಹಾಗೂ ಮೇ 30ರವೆರೆಗೆ ಲಕ್ಷದ್ವೀಪದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ

ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ

ಮುಂದಿನ ಐದು ದಿನಗಳಲ್ಲಿ ನೈರುತ್ಯ ಅರಬ್ಬಿ ಸಮುದ್ರದಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಚಂಡಮಾರುತ ಬೀಸಲಿದೆ. ಇದೇ ರೀತಿ ಮೇ 28 ಮತ್ತು 29 ರಂದು ಈಶಾನ್ಯ ಅರಬ್ಬಿ ಸಮುದ್ರ ಮತ್ತು ಪಕ್ಕದ ಉತ್ತರ ಗುಜರಾತ್ ಕರಾವಳಿಯ ಮೇಲೆ ಹಾಗೂ ಮೇ 29 ಮತ್ತು 30 ರಂದು ಆಗ್ನೇಯ ಅರಬ್ಬಿ ಸಮುದ್ರ, ಲಕ್ಷದ್ವೀಪ, ದಕ್ಷಿಣ ಕೇರಳ ಕರಾವಳಿ ಮತ್ತು ಕೊಮೊರಿನ್ ಪ್ರದೇಶದಲ್ಲಿ ಚಂಡಮಾರುತ ಬೀಸಲಿದೆ. ಈ ಪ್ರದೇಶಗಳಿಗೆ ಮೀನುಗಾರರು ಸಮುದ್ರಕ್ಕೆ ತೆರಳಬಾರದು ಎಂದು ಸೂಚನೆ ನೀಡಿದೆ.

ಭಾರೀ ಮಳೆಯಾಗುವ ಸಾಧ್ಯತೆ

ಭಾರೀ ಮಳೆಯಾಗುವ ಸಾಧ್ಯತೆ

ಮೇ 30 ಮತ್ತು 31 ರಂದು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ, ಜೂನ್ 1 ರಂದು ಅರುಣಾಚಲ ಪ್ರದೇಶದಲ್ಲಿ, ಜೂನ್ 1ರವರೆಗೆ ಅಸ್ಸಾಂ ಮತ್ತು ಮೆಘಾಲಯದಲ್ಲಿ, ಮೇ 29, 31 ಮತ್ತು ಜೂನ್ 1 ರಂದು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುಮ್ಸೂಚನೆ ನೀಡಿದೆ.

Recommended Video

    IPL ಫೈನಲ್ ಮ್ಯಾಚ್ ಗೂ ಮುನ್ನ ಸ್ಟೇಡಿಯಂನಲ್ಲಿ ಮಾರ್ದನಿಸಿತು KGF ನ ವಯಲೆನ್ಸ್ ಡೈಲಾಗ್ | OneIndia Kannada
    ಮುಂಗಾರು ಪ್ರವೇಶಕ್ಕೂ ಮುನ್ನವೇ ಮಳೆ

    ಮುಂಗಾರು ಪ್ರವೇಶಕ್ಕೂ ಮುನ್ನವೇ ಮಳೆ

    ಕೇರಳದಲ್ಲಿ ಮುಂಗಾರು ಪ್ರವೇಶಕ್ಕೂ ಮುನ್ನ ಮುಂಗಾರು ಪೂರ್ವ ಮಳೆ ಮುಂದುವರಿದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿಯೂ ಮಳೆ ಮುಂದುವರೆಯಲಿದೆ. ಇದರಿಂದ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆದರೆ, ಈ ವರ್ಷ ಶೇ.99ರಷ್ಟು ಮುಂಗಾರು ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಮುಂಗಾರು ಹಂಗಾಮು ರೈತರಿಗೆ ಸಂತಸ ತರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+