ಭಾರತದ ಇಷ್ಟು ರಾಜ್ಯಗಳಿಗೆ ಮುಂದಿನ 5 ದಿನ ಮಳೆ: IMD ಮುನ್ಸೂಚನೆ!

ದೇಶದ ವಿವಿಧ ರಾಜ್ಯಗಳಲ್ಲಿ ಮುಂದಿನ ಮೂರು ದಿನ ಮಳೆ ಬೀಳವು ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಬೆಂಗಳೂರು, ಮಾರ್ಚ್ 05: ದೇಶದ ವಿವಿಧ ರಾಜ್ಯಗಳಲ್ಲಿ ಮುಂದಿನ ಮೂರು ದಿನ ಮಳೆ ಬೀಳವು ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ನಾಳೆ ಸೋಮವಾರ ಮಾರ್ಚ್ 05 ರಿಂದ ಮೂರು ದಿನಗಳ ಕಾಲ ಮಳೆ ಸುರಿಯಲಿದ್ದು, ಹಿಮವು ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Rainfall in Several States of India in Next 5 days: IMD Predicts

ದೇಶದ ಜಮ್ಮು ಮತ್ತು ಕಾಶ್ಮೀರ, ಲದಾಖ್ ನಲ್ಲಿ ಮಾರ್ಚ್ 5 ರಿಂದ 07 ರವರೆಗೆ ಹಗುರ ಮಳೆ ಬೀಳಲಿದೆ. ಹಲವು ಕಡೆಗಳಲ್ಲಿ ಹಿಮಪಾತವು ಆಗುವ ಸಂಭವವಿದೆ. ನಂತರ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ನಲ್ಲಿ ಮಾರ್ಚ್ 5,8 ಹಾಗೂ ಮಾರ್ಚ್ 09ರಂದು ಕೆಲವು ಪ್ರದೇಶಗಳಲ್ಲಿ ಹಗುರುದಿಂದ ಸಾಧಾರಣವಾಗಿ ಮಳೆ ಬೀಳುವ ಸಾಧ್ಯತೆಗಳು ಇವೆ. ಈ ಮಳೆಮುನ್ಸೂಚಿತ ಪ್ರದೇಗಳಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ಮಬ್ಬು ವಾತಾವರಣ ಇರಲಿದೆ.

ಅಷ್ಟೇ ಅಲ್ಲದೇ ದೇಶದ ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಮುಂದಿನ ಐದು ದಿನಗಳ ವರೆಗೆ ಅಂದರೆ ಮಾರ್ಚ್ 09ರವರೆಗೆ ತುಂತುರು ಕೆಲವೊಮ್ಮೆ ತುಸು ಜೋರು ಮಳೆ ದಾಖಲಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹವಾಮಾನದಲ್ಲಿ ಉಂಟಾಗುತ್ತಿರುವ ಅಕಾಲಿಕ ವೈಪರಿತ್ಯಗಳ ಪರಿಣಾಮವಾಗಿ ಬೇಸಿಗೆಯಲ್ಲೂ ಮಳೆಯ ವಾತಾವರಣ ಕಂಡು ಬರುತ್ತಿದೆ. ಸದ್ಯ ದೇಶಾದ್ಯಂತ ಬೇಸಿಗೆ ಕಾಲ ಆರಂಭವಾಗಿದೆ. ಹೀಗಿದ್ದರೂ ಕೆಲವೆಡೆ ಮಳೆ ಬರುವ ಮುನ್ಸೂಚನೆ ದೊರೆತಿದ್ದು, ಅಚ್ಚರಿ ಮೂಡಿಸಿದೆ.

Rainfall in Several States of India in Next 5 days: IMD Predicts

ಕರ್ನಾಟಕದಲ್ಲಿ ಕಳೆದ ಎರಡು ಮೂರು ದಿನಗಳಿಂದ ಬೆಳಗ್ಗೆ ಮತ್ತು ರಾತ್ರಿ ತಂಪು ವಾತಾವರಣ ಕಂಡು ಬರುತ್ತಿದೆ. ಮೊದಲೆಲ್ಲ ಫೆಬ್ರವರಿ ಅಂತ್ಯಕ್ಕೆ ರಾತ್ರಿಯಾದರೆ ಶಕೆಯ ವಾತಾವರಣ ನಿರ್ಮಾಣವಾಗುತ್ತಿತ್ತು. ಆದರೆ ಅಂತಹ ವಾತಾವರಣ ಮಾರ್ಚ್ ಮೊದಲ ವಾರ ಪೂರ್ಣಗೊಳ್ಳುತ್ತಿದ್ದರು ಕಂಡು ಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+