ರೈಲ್ವೆ 'ಕ್ಲೀನ್ ಮೈ ಕೋಚ್' ಆನ್ ಲೈನ್ ಗೆ ಎಂಟ್ರಿ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 11: ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಶುಕ್ರವಾರ ಭಾರತೀಯ ರೈಲ್ವೆಯ 'ಕ್ಲೀನ್ ಮೈ ಕೋಚ್' ಸೇವೆಯ ಆನ್ ಲೈನ್ ಸೌಲಭ್ಯಕ್ಕೆ ಚಾಲನೆ ನೀಡಿದರು.

ರೈಲ್ವೆ ಬಜೆಟ್ 2016ರಲ್ಲಿ ಕ್ಲೀನ್ ಮೈ ಕೋಚ್ ಸೌಲಭ್ಯವನ್ನು ಎಸ್ಎಂಎಸ್ ಮೂಲಕ ಪಡೆದುಕೊಳ್ಳುವ ಅವಕಾಶವನ್ನು ಪ್ರಯಾಣಿಕರಿಗೆ ಘೋಷಿಸಲಾಗಿತ್ತು. ಈಗ ಎಸ್ಎಂಎಸ್, ಅಪ್ಲಿಕೇಷನ್ ಅಥವಾ ವೆಬ್ ಸೈಟ್ ಮೂಲಕ ಮನವಿ ಸಲ್ಲಿಸಬಹುದಾಗಿದೆ.[ಜನ ಸಾಮಾನ್ಯರಿಗೆ ಪ್ರಭು ರೈಲು ಬಜೆಟ್ಟಿನಿಂದ ಸಿಕ್ಕಿದ್ದೇನು?]

Railways launch online ‘clean my coach’ service

ಈ ಸೌಲಭ್ಯದ ಮೂಲಕ ಯಾವುದೇ ಕೋಚ್ ಖಲೀಜಾಗಿದ್ದರೆ ಪ್ರಯಾಣಿಕರು 58888ಗೆ ಸಂದೇಶ ಕಳಿಸಿ ಸ್ವಚ್ಛ ಮಾಡುವಂತೆ ಮನವಿ ಸಲ್ಲಿಸಬಹುದಾಗಿದೆ. ಇದಲ್ಲದೆ www.cleanmycoach.com ವೆಬ್ ಸೈಟ್ ಮೂಲಕ ಅರ್ಜಿ ಹಾಕಬಹುದು.

ಇದು ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ 'ಕ್ಲೀನ್ ಮೈ ಕೋಚ್' ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. 'ಸ್ವಚ್ಛ ರೈಲ್, ಸ್ವಚ್ಛ ಭಾರತ್' ಗುರಿಯನ್ನು ಹೊಂದಲಾಗಿದ್ದು, ಭಾರತದಲ್ಲೆಡೆ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಸಚಿವ ಸುರೇಶ್ ಪ್ರಭು ಅವರು ಸಾರ್ವಜನಿಕರಿಗೆ ಸೂಚಿಸಿದ್ದಾರೆ. [ಹೊಸತನವಿಲ್ಲದ ಗೂಡ್ಸ್ ಗಾಡಿ ಓಡಿಸಿದ ಪ್ರಭು]

ಇದಲ್ಲದೆ ಸ್ಮಾರ್ಟ್ ಕೋಚ್ ಯೋಜನೆ ಅಡಿಯಲ್ಲಿ ಬಯೋ ವ್ಯಾಕ್ಯೂಮ್ ಟಾಯ್ಲೆಟ್ಸ್, ಪಿಎ ಸಿಸ್ಟಮ್ ಸೇರಿದಂತೆ ಅನೇಕ ವ್ಯವಸ್ಥೆ ಜಾರಿಗೊಳಿಸಲಾಗಿದೆ. 30,000 ಬಯೋ ಟಾಯ್ಲೆಟ್ ಅಳವಡಿಕೆ. ರೈಲ್ ಮಿತ್ರ ಯೋಜನೆ ಮೂಲಕ ಅಂಗವಿಕಲರಾಗಿ ಸಾರಥಿ ಸೇವೆ ಸೌಲಭ್ಯ. ದಿವ್ಯಾಂಗರಿಗೆ ಅನುಕೂಲಕರ ವ್ಯವಸ್ಥೆ ಕಲ್ಪಿಸಲಾಗಿದೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Railway Minister Suresh Prabhu on Friday launched an online “clean my coach” service that allows travellers to get their compartments cleaned by sending an SMS or by using an app or a designated website.
Please Wait while comments are loading...