ಲಕ್ನೋ ರೈಲು ನಿಲ್ದಾಣದಲ್ಲಿ ಇಲಿ ಕೊಲ್ಲೋಕೆ ತಿಂಗಳಿಗೆ 40 ಸಾವಿರ

Posted By:
Subscribe to Oneindia Kannada

ಬ್ರಿಟಿಷರ ಕಾಲದಲ್ಲಿ ಕಟ್ಟಿದ ಲಕ್ನೋದ ಚಾರ್ ಬಾಗ್ ರೈಲು ನಿಲ್ದಾಣದಲ್ಲಿ ಇಲಿಗಳು ಪ್ಲಾಟ್ ಫಾರ್ಮ್ ಕೆಳಗೆ ದೊಡ್ಡ ದೊಗರುಗಳನ್ನು ಕೊರೆದಿದ್ದು, ಈಗ ಇಲಿಗಳನ್ನು ಕೊಲ್ಲುವುದಕ್ಕೆ ಗುತ್ತಿಗೆ ಆಧಾರದಲ್ಲಿ ಜನರನ್ನು ನೇಮಿಸಲಾಗಿದೆ. ಖಾಸಗಿ ಕಂಪೆನಿಯೊಂದಕ್ಕೆ 4.76 ಲಕ್ಷಕ್ಕೆ ಇಲಿಗಳನ್ನು ಕೊಲ್ಲುವ ಗುತ್ತಿಗೆ ನೀಡಲಾಗಿದೆ.

1914ರಲ್ಲಿ ಶಂಕುಸ್ಥಾಪನೆಯಾದ ಇಲ್ಲಿನ ರೈಲು ನಿಲ್ದಾಣದ ಕಟ್ಟಡ ಕಟ್ಟಿ ಮುಗಿಸಿದ್ದು 1923ರಲ್ಲಿ. ರೈಲ್ವೆ ಇಲಾಖೆ ಆಸ್ತಿಗಳಿಗೆ, ಸರ್ಕಾರಿ ಕಡತಗಳಿಗೆ, ಪ್ರಯಾಣಿಕರ ವಸ್ತುಗಳಿಗೆ ಇಲಿಗಳಿಂದ ಭಾರಿ ಹಾನಿಯಾಗಿದೆ. ಆದ್ದರಿಂದ ಒಂದು ವರ್ಷದ ಗುತ್ತಿಗೆ ನೀಡಲಾಗಿದೆ. ಈ ತಿಂಗಳ ಕೊನೆಗೆ ಆ ಕಂಪೆನಿಯವರು ಕೆಲಸ ಶುರು ಮಾಡುತ್ತಾರೆ ಎಂದು ಅಧಿಕಾರಿ ಎ.ಕೆ.ಸಿನ್ಹಾ ತಿಳಿಸಿದ್ದಾರೆ.[ಮುನಿರಾಬಾದ್ ರೈಲು ನಿಲ್ದಾಣದಲ್ಲಿ ದಂಪತಿಗಳ ಶವ ಪತ್ತೆ]

Railways hire 'killer' to end rat menace

ನಿಲ್ದಾಣದ ಪ್ರದೇಶ, ಪ್ಲಾಟ್ ಫಾರ್ಮ್, ಕಟ್ಟಡಗಳಲ್ಲಿ ಇಲಿಗಳನ್ನು ಕೊಲ್ಲುವುದಕ್ಕೆ ತಿಂಗಳಿಗೆ 40 ಸಾವಿರ ರುಪಾಯಿ ಖರ್ಚು ಬರುತ್ತದೆ. ಇಲಿಗಳನ್ನು ಕೊಲ್ಲುವುದಕ್ಕಾಗಿಯೇ ಗುತ್ತಿಗೆ ಪಡೆದ ರುಚಿಯಾದ ತಿಂಡಿಗಳನ್ನು ತಯಾರಿಸುತ್ತದಂತೆ. ಅದೂ ವಿಶ್ವ ಆರೋಗ್ಯ ಸಂಸ್ಥೆ ನಿಯಮಾವಳಿಗಳ ಪ್ರಕಾರ.

ಇದೇ ರೀತಿ 2013ರಲ್ಲೂ ಇಲಿಗಳನ್ನು ಕೊಲ್ಲಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಸಿಕ್ಕಿರಲಿಲ್ಲ. ಕಳೆದ ವರ್ಷ ಇಲಿಗಳ ಕಾಟಕ್ಕೆ ಕಚೇರಿ ಕಟ್ಟಡ, ಪ್ಲಾಟ್ ಫಾರ್ಮ್ ಮಾರಾಟಗಾರರಿಗೆ 10 ಲಕ್ಷ ರುಪಾಯಿ ಲುಕ್ಸಾನಾಗಿತ್ತು. ಬರೀ ವ್ಯಾಪಾರಿಗಳಿಗಷ್ಟೇ ಅಲ್ಲ, ಪ್ರಯಾಣಿಕರ ಲಗೇಜುಗಳಿಗೂ ಹಾನಿಯಾಗಿತ್ತು. ಪ್ರಯಾಣಿಕರು ಹೇಳುವ ಪ್ರಕಾರ, ಒಂದೊಂದು ಇಲಿಯೂ ಅರ್ಧ ಕೆ.ಜಿ.ಗಿಂತ ತೂಗುವಂತೆ ಕಾಣುತ್ತದೆ.[ಕೋಟಿ ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಯೇ ಇರಲಿಲ್ಲ!]

ತಿಂಡಿಗಳನ್ನು ಪೊಟ್ಟಣದಿಂದ ತೆಗೆಯುವ ಮುಂಚೆಯೇ ಇಲಿಗಳು ಕಡಿದು ಹಾಕಿರುತ್ತವೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಇಲ್ಲಿನ ತಿಂಡಿ ಮಾರಾಟಗಾರರು. ಮುಖ್ಯವಾದ ಸರ್ಕಾರಿ ಕಡತಗಳನ್ನು ಇಲಿ ತುಂಡುಗಳಾಗಿ ಮಾಡಿದ್ದ ವೇಳೆ, ಅವುಗಳನ್ನೆಲ್ಲ ಒಟ್ಟು ಮಾಡುವುದಕ್ಕೆ ನೌಕರರು ಬೆವರು ಹರಿಸುತ್ತಾರೆ.

ಚಾರ್ ಬಾಗ್ ತುಂಬ ಸುಂದರವಾದ ರೈಲು ನಿಲ್ದಾಣ. ಮೇಲು ಭಾಗದಿಂದ ನೋಡುವುದಕ್ಕೆ ಚದುರಂಗದ ಬೋರ್ಡ್ ನಂತೆ ಕಾಣುತ್ತದೆ. ಕಟ್ಟಡದ ಸ್ತಂಭಗಳು, ಗುಮ್ಮಟ ಆಟದ ಕಾಯಿಗಳಂತೆ ಕಾಣುತ್ತವೆ.[ರೈಲ್ವೆ ಇಂಜಿನಿಯರಿಂಗ್ ಕೋರ್ಸ್‌ ಆರಂಭಕ್ಕೆ ಸಚಿವರ ಮನವಿ]

ಇದು ಭಾರತದಲ್ಲೇ ತುಂಬ ಜನನಿಬಿಡ ರೈಲು ನಿಲ್ದಾಣಗಳ ಪೈಕಿ ಒಂದು. 85 ಪ್ರಯಾಣಿಕರ ರೈಲು ಇಲ್ಲಿಂದ ಹೊರಡುತ್ತವೆ. ದೇಶದ ನಾನಾ ಭಾಗಗಳಿಗೆ ಹೋಗುವ 300 ರೈಲುಗಳು ಈ ನಿಲ್ದಾಣದಿಂದಲೇ ತೆರಳುತ್ತವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Railway hired 'contract killers' to eliminate hundreds of rodents that have dug tunnels under the platforms of the British-era Charbagh railway station in Lucknow. A private company has been given the contract for Rs 4.76 lakh to kill the rats.
Please Wait while comments are loading...