ಹಠಾತ್ ನಿಂತ ರೈಲು ಬೋಗಿ: ಕೈಯಿಂದಲೇ ತಳ್ಳಿ ಲೂಪ್‌ ಲೈನ್‌ಗೆ ತಂದ ಸಿಬ್ಬಂದಿ: Video

ನವದೆಹಲಿ, ಮಾರ್ಚ್ 24: ರೈಲು ಅನಾಹುತಗಳ ಕುರಿತು ನೀವು ಕೇಳಿರುತ್ತೀರಿ. ಅದರ ಅನೇಕ ವಿಡಿಯೋಗಳನ್ನು ನೋಡಿರುತ್ತೀರಿ. ಇದೀಗ ರೈಲ್ವೆ ಸಿಬ್ಬಂದಿಯೇ ಕೆಟ್ಟು ನಿಂತ ರೈಲನ್ನು ಕೈಯಿಂದ ತಳ್ಳಿದ ಅಪರೂಪದ ಘಟನೆ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.

ಹೌದು, ರೈಲ್ವೇ ದುರ್ಘಟನೆಗಳ ಕುರಿತು ಹಲವಾರು ದೃಶ್ಯಗಳು ಮತ್ತು ಸುದ್ದಿಗಳು ದೇಶಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ ಪದೇ ಪದೆ ಕಾಣಿಸಿಕೊಂಡಿವೆ. ಇತ್ತೀಚೆಗಷ್ಟೇ, ಉತ್ತರ ಪ್ರದೇಶದ ಅಮೇಥಿಯ ವೀಡಿಯೊದಲ್ಲಿ ಕೆಲವು ರೈಲ್ವೇ ಸಿಬ್ಬಂದಿಗಳು ಕೆಟ್ಟುಹೋದ ರೈಲು ಕೋಚ್ ಅನ್ನು ಕೈಯಿಂದ ತಳ್ಳಿದ ಘಟನೆ ನಡೆದಿದೆ.

Railway Staff Push Train Coach After Snag in Amethi of Uttar Pradesh Video Viral

ಹಠಾತ್ ನಿಂತ ರೈಲ್ವೆ ಬೋಗಿ

ವರದಿ ಪ್ರಕಾರ, ಅಮೇಥಿ ಹೊರವಲಯದಲ್ಲಿ ರೈಲು ಬೋಗಿ (ಇಂಜಿನ್) ಹಠಾತ್ ನಿಲುಗಡೆ ಆಗಿದೆ. ಏನು ಮಾಡಿದರೂ ಮರಳಿ ಆರಂಭವಾಗಿಲ್ಲ. ಇದು ಇತರ ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರಿತು. ಎಷ್ಟೇ ಪ್ರಯತ್ನ ಪಟ್ಟರೂ ಸಿಬ್ಬಂದಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಕಾರಣ ರೈಲನ್ನು ಸಿಬ್ಬಂದಿ ಕೈಯಿಂದಲೇ ತಳ್ಳಿದರು.

ಈ ಘಟನೆಯಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೇಥಿ ರೈಲು ನಿಲ್ದಾಣ ಸಮೀಪ ಈ ರೈಲು ಬೋಗಿ ತಾಂತ್ರಿಕ ಸಮಸ್ಯೆಯ ಸ್ಥಗಿತಗೊಂಡಿತ್ತು. ಹಠಾತ್ ಸ್ಥಗಿತಗೊಂಡಿದ್ದ ರೈಲು ಕೋಚ್ ಮರಳಿ ಚಾಲನೆಗೊಳ್ಳಲಿಲ್ಲ.

ಲೂಪ್ ಟ್ರ್ಯಾಕ್‌ಗೆ ರೈಲ್ವೆ ಕೋಚ್ ತಳ್ಳಿದ ಸಿಬ್ಬಂದಿ

ಹೀಗಾಗಿ ಹಲವಾರು ರೈಲ್ವೇ ಅಧಿಕಾರಿಗಳು ಕೋಚ್ ಅನ್ನು ಮುಖ್ಯ ಟ್ರ್ಯಾಕ್‌ನಿಂದ ಲೂಪ್ ಟ್ರ್ಯಾಕ್‌ಗೆ ನೂಕಿದರು. ಇದರಿಂದ ಮುಖ್ಯ ಟ್ರ್ಯಾಕ್ ನಲ್ಲಿದ್ದ ರೈಲು ಕೋಚ್ ಲೂಪ್ ಟ್ರ್ಯಾಕ್‌ಗೆ ಬಂದು ಇತರ ರೈಲುಗಳು ಸರಾಗವಾಗಿ ತೆರಳಲು ಅನುಕೂಲವಾಯಿತು.

ಕೆಲ ರೈಲುಗಳು ವಿಳಂಬ

ವಿಡಿಯೋದಲ್ಲಿ ರೈಲ್ವೆ ಬೋಗಿಯನ್ನು ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಕೈಯಿಂದ ತಳ್ಳುತ್ತಿರುವ ದೃಶ್ಯ ನೀವು ಕಾಣಬಹುದು. ವರದಿಗಳ ಪ್ರಕಾರ ಈ ಘಟಮೆಯು ಉತ್ತರ ಪ್ರದೇಶದ ಅಮೇಥಿ ಜರುಗಿದೆ. ಅಲ್ಲಿ ಡಿಪಿಸಿ ಕೋಚ್ ಅನ್ನು ಹೆಚ್ಚಾಗಿ ರೈಲ್ವೇ ಅಧಿಕಾರಿಗಳು ತಪಾಸಣೆಗೆ ಬಳಸುತ್ತಾರೆ. ನಿಹಾಲ್‌ಗಢ್ ರೈಲು ನಿಲ್ದಾಣದ ಬಳಿ ಮುಖ್ಯ ಹಳಿಯಲ್ಲಿ ಮುರಿದು ಸಾಮಾನ್ಯ ರೈಲುಗಳಲ್ಲಿ ವಿಳಂಬಕ್ಕೆ ಕಾರಣವಾಗಿದೆ ಎಂದು ವರದಿ ಆಗಿದೆ.

ರೈಲ್ವೆ ಅಧಿಕಾರಿಗಳು ತಪಾಸಣೆಗಾಗಿ ಬಳಸುತ್ತಿದ್ದ ಡಿಪಿಸಿ ರೈಲು ನಿಹಾಲ್‌ಗಢ್ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಗುರುವಾರ ಕೆಟ್ಟು ಹೋಗಿತ್ತು. ಬಳಿಕ ರೈಲ್ವೆ ನೌಕರರ ಸಹಾಯದಿಂದ ನಿಲ್ದಾಣವರೆಗೆ ತಳ್ಳಿಕೊಂಡು ಬರಲಾಯಿತು. ನಂತರ ಉಂಟಾಗಿದ್ದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಯಿತು ಎಂದು ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಇನ್‌ಸ್ಪೆಕ್ಟರ್ ಆರ್‌ಎಸ್ ಶರ್ಮಾ ಅವರು ಮಾಹಿತಿ ನೀಡಿದರು.

ಸಮಗ್ರ ತನಿಖೆಗೆ ಕೋರಿಕೆ

ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಮತ್ತು ಪ್ರದೇಶದ ರೈಲ್ವೆ ಕಾರ್ಯಾಚರಣೆಗಳು ಸುರಕ್ಷಿತ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ. ದುರಂತವು ರೈಲ್ವೇ ಉದ್ಯಮದಲ್ಲಿ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳು ಮತ್ತು ನಿರ್ವಹಣೆ ಅಗತ್ಯವಿದೆ ಎಂಬುದನ್ನು ಸಾರಿ ಹೇಳುತ್ತಿದೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+