ಪ್ರಣಯ ಗೀತೆ ಹಾಡದ ಕಾರಣಕ್ಕೆ ಛತ್ತೀಸ್ ಗಢ ರೈಲ್ವೆಯಿಂದ ಅಮಾನತು ಶಿಕ್ಷೆ

By: ವಿಕಾಸ್ ನಂಜಪ್ಪ
Subscribe to Oneindia Kannada

ರಾಯ್ ಪುರ್, ಜನವರಿ 23: ಕಾರ್ಯಕ್ರಮವೊಂದರಲ್ಲಿ ಪ್ರಣಯ ಗೀತೆ ಹಾಡಲು ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರನ್ನು ಅಮಾನತು ಮಾಡಲಾಗಿದೆ. ಅಂಜಲಿ ತಿವಾರಿ-ಹಿರಿಯ ಗುಮಾಸ್ತೆ, ಅಮಾನತಾದವರು. ಆಕೆ ಛತ್ತೀಸ್ ಗಢ ರೈಲ್ವೆಗೆ ಸಾಂಸ್ಕೃತಿಕ ಮೀಸಲಾತಿ ಅಡಿ ಆಯ್ಕೆಯಾದವರು. ಜನರಲ್ ಮ್ಯಾನೇಜರ್ ಸೂಚಿಸಿದ ನಿರ್ದಿಷ್ಟ ಪ್ರಣಯ ಗೀತೆ ಹಾಡಲು ನಿರಾಕರಿದರು ಎಂದು ಅಕೆಯನ್ನು ಅಮಾನತು ಮಾಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಗಿರಗಿರ ತಿರುಗಾಡುತ್ತಿದೆ. ಇನ್ನು ಸುತ್ತೋಲೆಯ ಪ್ರಕಾರ, ಜನವರಿ 16ರಂದು ಸಾಂಸ್ಕೃತಿಕ ಕಾರ್ಯಕ್ರಮ ಇತ್ತು. ಅಂತಿಮ ಹಂತದಲ್ಲಿ, ತಿವಾರಿ ಅವರಿಗೆ ಕೆಲವು ಪ್ರಣಯ ಗೀತೆಗಳಿಗೆ ಸಿದ್ಧವಾಗುವಂತೆ ತಿಳಿಸಲಾಗಿದೆ. ಮತ್ತು ಅದನ್ನು ಜನರಲ್ ಮ್ಯಾನೇಜರ್ ಅವರ ಜೊತೆಗೂಡಿ ಹಾಡಬೇಕು ಎಂದು ಸೂಚಿಸಲಾಗಿದೆ.[ಮಾರ್ಚ್ 1ರಿಂದ ಮಂಗ್ಳೂರು-ಬೆಂಗ್ಳೂರು ರೈಲು ಸಂಚಾರ ಆರಂಭ]

Railway clerk suspended for refusing to sing duet

ಕಾರ್ಯಕ್ರಮದ ವೇಳೆ, ಒಂದು ನಿರ್ದಿಷ್ಟ ಹಾಡನ್ನು ಹಾಡುವಂತೆ ಜನರಲ್ ಮ್ಯಾನೇಜರ್ ಕೇಳಿದ್ದಾರೆ. ಆ ಹಾಡಿಗೆ ಸಿದ್ಧತೆ ನಡೆಸಿಲ್ಲ. ಹಾಡಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸಾಂಸ್ಕೃತಿಕ ಕೋಟಾದಡಿ ಆಯ್ಕೆಯಾದ ಉದ್ಯೋಗಿಗೆ ಮುಂಚಿತವಾಗಿಯೇ ಅಧಿಕಾರಿ (ವಲಯ ರೈಲ್ವೆ ನಿರ್ವಾಹಕ) ಸೂಚನೆ ನೀಡಿದ್ದರು. ಆದರೂ ಆಕೆಯ ಈ ರೀತಿ ವರ್ತನೆ ಸರಿಯಲ್ಲ. ಇದು ಆಕೆಗೆ ಕೆಲಸದೆಡೆಗಿನ ನಿರ್ಲಕ್ಷ್ಯ ತೋರುತ್ತದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.[ಅನಂತ ಕುಮಾರ್ ಹೆಸರನ್ನು ರೈಲ್ವೆ ಸಚಿವರು ಎರಡು ಸಲ ಹೇಳಿದ್ದೇಕೆ?]

ಜತೆಗೆ ರಾಯ್ ಪುರ್ ವಿಭಾಗದಲ್ಲಿ ನಡೆಯುವ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಆರು ತಿಂಗಳ ಕಾಲ ತಿವಾರಿ ಮೇಲೆ ನಿಷೇಧ ಹೇರಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
She refused to sing a duet with her general manager and was suspended. Anjali Tiwari, a senior clerk was hired by the Chattisgarh Railways under the Cultural Quota. She was suspended for refusing to sing a duet with the General Manager.
Please Wait while comments are loading...