'ವೈಟ್ ಟಿ-ಶರ್ಟ್ ಚಳವಳಿ' ಆರಂಭಿಸಿದ ರಾಹುಲ್ ಗಾಂಧಿ: ಚುನಾವಣೆ ಮೊದಲೇ ಸಖತ್ ಆಕ್ವಿವ್!
ನವದೆಹಲಿ, ಏಪ್ರಿಲ್ 07: ಇದೇ ವರ್ಷಾಂತ್ಯಕ್ಕೆ ಬಿಹಾರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಅವರು ರಾಜ್ಯದಲ್ಲಿ 'ಬಿಳಿ ಟಿ-ಶರ್ಟ್ ಚಳವಳಿ' ಆರಂಭಿಸಿದ್ದಾರೆ. ಇದಕ್ಕೆ ಎಲ್ಲ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಚಳವಳಿಯಲ್ಲಿ ಯಶಸ್ವಿಗೊಳಿಸುವಂತೆ ಕರೆ ನೀಡಿದ್ದಾರೆ.
ಇಂದು ಅವರು 'ಬಿಳಿ ಟಿ-ಶರ್ಟ್ ಚಳವಳಿ' ಆರಂಭಿಸಿದ್ದು, ಈ ಸಂಬಂಧ ಅವರು ಬಿಹಾರ ರಾಜ್ಯದ ಬೇಗುಸರಾಯ್ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಈ ಭೇಟಿ ಹಾಗೂ ಚಳವಳಿ ಕುರಿತು ಹಾಗೂ ಬಿಹಾರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಮಾತನಾಡಿದ್ದಾರೆ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬಿಹಾರ ನಿರುದ್ಯೋಗ, ವಲಸೆ ಹೋಗುವುದು, ಹಣದುಬ್ಬರ, ಜನ ಸಾಮಾನ್ಯರ ಸಮಸ್ಯೆಗಳು, ಖಾಸಗೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಸೋಮವಾರದಿಂದ 'ಬಿಳಿ ಟಿ-ಶರ್ಟ್' ಆರಂಭಿಸಿದ್ದಾರೆ. ಬಿಹಾರದ ಯುವಕರು ಇದರಲ್ಲಿ ಪಾಲ್ಗೊಳ್ಳುವಂತೆ ಅವರು ಭಾನುವಾರವೇ ವಿಡಿಯೋ ಮಾಡಿದ್ದರು. ಸೋಮವಾರ ಜಿಲ್ಲೆಗೆ ಭೇಟಿ ನೀಡಿ ಚಳವಳಿ ಆರಂಭಿಸಿದ ಅವರು, ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ಬಿಹಾರದಲ್ಲಿ ಸದ್ಯ ಬಿಜೆಪಿ ನೇತೃತ್ವದ ಮೈತ್ರಿ ಪಕ್ಷಗಳ ಸರ್ಕಾರ ಇದೆ. ರಾಜ್ಯದಲ್ಲಿ ಇನ್ಮುಂದೆ ಜನರು ದಾರಿ ತಪ್ಪುವುದಿಲ್ಲ. ಅವರ ಭವಿಷ್ಯ ಬರೆಯಲು ಕಾಂಗ್ರೆಸ್ ಸಿದ್ಧವಾಗಿದೆ. ನಾವೆಲ್ಲರು ಬಲವಾದ ಸಂದೇಶ ರವಾನಿಸಬೇಕಿದೆ ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ..
ಬಿಹಾರದಲ್ಲಿ 'ವಲಸೆ ನಿಲ್ಲಿಸಿ ಉದ್ಯೋಗ ನೀಡಿ' ಯಾತ್ರೆಯು ಬಿಹಾರ ಯುವ ಜನರ ಭಾವನೆಗಳನ್ನು ಜಗತ್ತಿಗೆ ಅನಾವರಣಗೊಳಿಸಲಿದೆ ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ. ರಾಜ್ಯದ ಪ್ರತಿ ಯೊಬ್ಬ ನಿವಾಸಿಯ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇನೆ. ನಿಮ್ಮ ಸಮಸ್ಯೆಗೆ ಜೊತೆಯಾಗಿ ನಡೆಯುತ್ತೇನೆ. ಹಣದುಬ್ಬರ, ನಿರುದ್ಯೋಗ, ಖಾಸಗೀಕರಣ, ಭ್ರಷ್ಟಾಚಾರ ಸೇರಿದಂತೆ ಸಾರ್ವಜನಿಕರ ಮೇಲೆ ಉಂಟಾಗುವ ಪ್ರತಿ ಸಮಸ್ಯೆ ವಿರುದ್ಧ ಧ್ವನಿ ಎತ್ತಲಾಗುವುದು ಎಂದು ತಿಳಿಸಿದ್ದಾರೆ..
ನಮ್ಮ ಈ ಬಿಳಿ ಟಿ-ಶರ್ಟ್ ಯಾತ್ರೆಯು ಹೊಸ ಬಿಹಾರ ನಿರ್ಮಿಸುವುದು, ಯುವಕರಿಗೆ ಶಕ್ತಿ ತುಂಬುವುದೇ ಆಗಿದೆ. ಬಿಹಾರದ ಯುವಕರು ಈಗ ದಾರಿ ತಪ್ಪುವುದಿಲ್ಲ. ಅವರು ಯಾರ ಮುಂದೆಯೂ ತಲೆಬಾಗುವುದಿಲ್ಲ. ರಾಜ್ಯದ ಯುವ ಸಮೂಹ ಒಟ್ಟಾಗಿ ಸಾಗುತ್ತದೆ. ತಮ್ಮ ಭವಿಷ್ಯ ನಿರ್ಮಿಸಿಕೊಳ್ಳಲಿದ್ದಾರೆ ಎಂದು ಹೇಳಿದರು..
ಇದೇ ವರ್ಷಾಂತ್ಯಕ್ಕೆ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದೆ. ಇಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷವು ಹೊಸ ಜಿಲ್ಲಾಧ್ಯಕ್ಷರನ್ನು ನೇಮಿಸಿದೆ. ರಾಜ್ಯದ 40 ಸಾಂಸ್ಥಿಕ ಜಿಲ್ಲೆಗಳಲ್ಲಿ ಎಐಸಿಸಿ ಹೊಸ ಅಧ್ಯಕ್ಷರು ಮತ್ತು ಕಾರ್ಯಕಾರಿ ಅಧ್ಯಕ್ಷರನ್ನು ನೇಮಿಸುವ ಮೂಲಕ ತಿಂಗಳುಗಳ ಮೊದಲೇ ಕಾಂಗ್ರೆಸ್ ಕ್ಷೇತ್ರದಲ್ಲಿ ಕಾರ್ಯೋನ್ಮುಖವಾಗಿದೆ..












Click it and Unblock the Notifications