ಮೋದಿಯ ಹೊಸ ಭಾರತದಲ್ಲಿ ಮಾನವೀಯತೆಯಿಲ್ಲ, ಬರೀ ದ್ವೇಷ: ರಾಹುಲ್

ನವದೆಹಲಿ, ಜುಲೈ 23: ನರೇಂದ್ರ ಮೋದಿಯವರ ಹೊಸ ಭಾರತದಲ್ಲಿ ಮಾನವೀಯತೆಯ ಜಾಗವನ್ನು ದ್ವೇಷ ಆವರಿಸಿದೆ. ಜನರನ್ನು ತುಳಿದು, ಸಾಯುವಂತೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ರಾಜಸ್ಥಾನದಲ್ಲಿ ಗೋಕಳ್ಳನೆಂದು ತಿಳಿದು ವ್ಯಕ್ತಿಯೊಬ್ಬನನ್ನು ಜನರು ಹೊಡೆದು ಸಾಯಿಸಿದ ಘಟನೆ ವರದಿಯಾಗಿತ್ತು. ಈ ಘಟನೆಯಲ್ಲಿ ರಕ್ಬರ್ ಖಾನ್ ಎಂಬ ವ್ಯಕ್ತಿಯೊಬ್ಬನ ಮೇಲೆ ಜನರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಬದಲು ಪೊಲಿಸರು ಗೋವುಗಳ ರಕ್ಷಣೆಗೆ ಮುಂದಾದರು. ಕೇವಲ ಆರು ಮೈಲಿ ದೂರದ ಆಸ್ಪತ್ರೆಗೆ ಆತನನ್ನು ಕರೆದೊಯ್ಯಲು ಪೊಲೀಸರು ಮೂರೂವರೆ ಗಂಟೆ ಸಮಯ ತೆಗೆದುಕೊಂಡರು ಎಂಬ ಆರೋಪ ಕೇಳಿಬಂದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, "ಆರು ಕಿಮೀ. ದೂರದ ಆಸ್ಪತ್ರೆಗೆ ಗಾಯಗೊಂಡ ರಕ್ಬರ್ ಖಾನ್ ನನ್ನು ಕರೆದೊಯ್ಯಲು ಪೊಲೀಸರು ಮೂರು ತಾಸು ತೆಗೆದುಕೊಂಡರು. ಯಾಕೆ? ಅವರು ಮಾರ್ಗಮಧ್ಯೆ ಟೀ ಬ್ರೇಕ್ ತೆಗೆದುಕೊಂಡರೇ? ಇದು ಮೋದಿಯವರ ಕ್ರೂರ ಹೊಸ ಭಾರತ. ಇಲ್ಲಿ ಮಾನವೀಯತೆಯ ಜಾಗವನ್ನು ದ್ವೇಷ ಆವರಿಸಿದೆ. ಜನರನ್ನು ತುಳಿದು ಕೊಲ್ಲಲಾಗುತ್ತದೆ" ಎಂದಿದ್ದಾರೆ.

Rahul Gandhi twitter war against Narendra Modi

ಗೋ ರಕ್ಷಣೆಯ ಹೆಸರಿನಲ್ಲಿ ಗುಂಪುಗೂಡಿಕೊಂಡು ಹೊಡೆಯುವುದು, ಕೊಲ್ಲುವುದು ಅಪರಾಧ. ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದನ್ನು ಇಲ್ಲಿ ಉಲ್ಲೇಖಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+