ರೈನ್ ಕೋಟ್ ಟೀಕಾಸ್ತ್ರ: ಪ್ರಧಾನಿ ಹೇಳಿಕೆ ನಾಚಿಕೆಗೇಡು ಎಂದ ರಾಹುಲ್

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 9: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು 'ರೈನ್ ಕೋಟ್ ಹಾಕಿಕೊಂಡು ಸ್ನಾನ ಮಾಡಬಲ್ಲ ಕಲೆಯುಳ್ಳವರು' ಎಂದು ಹಗುರವಾಗಿ ಹಂಗಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನ ಘನತೆ, ಗೌರವಗಳಿಗೆ ಚ್ಯುತಿ ತಂದಿದ್ದಾರೆ. ಅವರ ನಡೆ, ನಾಚಿಕೆಗೇಡಿನದ್ದಾಗಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ವಯಸ್ಸಿನಲ್ಲಿ, ಅನುಭವದಲ್ಲಿ ತಮಗಿಂತ ಹಿರಿಯರಾದ ರಾಜಕಾರಣಿಯೊಬ್ಬರನ್ನು, ಅದರಲ್ಲೂ ಮಾಜಿ ಪ್ರಧಾನಿಯೊಬ್ಬರನ್ನು ಹಾಲಿ ಪ್ರಧಾನಿಯೊಬ್ಬರು ಹೀಗೆ ತುಚ್ಛವಾಗಿ ಲೇವಡಿ ಮಾಡಿದ್ದು ಭಾರತದ ಇತಿಹಾಸದಲ್ಲೇ ಇಲ್ಲ. ಮಾಜಿ ಪ್ರಧಾನಿಯೊಬ್ಬರನ್ನು ಹೀಗೆ ಅವಹೇಳನ ಮಾಡುವ ಮೂಲಕ ಪ್ರಧಾನಿ ಸ್ಥಾನಕ್ಕೂ ಅವರು ಅಪಮಾನ ಮಾಡಿದ್ದಾರೆ'' ಎಂದು ರಾಹುಲ್ ಗಾಂಧಿ ಕಿಡಿಕಾರಿದರು.[ರೈನ್ ಕೋಟ್ ಹಾಕ್ಕೊಂಡು ಸ್ನಾನ ಮಾಡೋದು ಸಿಂಗ್ ಗೆ ಗೊತ್ತು: ಮೋದಿ]

Rahul Gandhi Hits Back At PM Modi Over 'Raincoat' Remark

ಪ್ರಸಕ್ತ ವರ್ಷದ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಮಾಡಿದ್ದ ಭಾಷಣಕ್ಕೆ ವಂದನಾ ನಿರ್ಣಯಕ್ಕಾಗಿ ಕರೆಯಲಾಗಿದ್ದ ಲೋಕಸಭೆಯ ಅಧಿವೇಶದಲ್ಲಿ ಮಾತನಾಡಿದ್ದ ಮೋದಿ, ಅಪನಗದೀಕರಣದ ಹಿನ್ನೆಲೆಯಲ್ಲಿ ರಾಷ್ಟ್ರದ ಹಣಕಾಸು ಪರಿಸ್ಥಿತಿ ಹಿನ್ನೆಡೆ ಕಂಡಿದ್ದನ್ನು ವಿರೋಧಿಸಿ ಆರೋಪ ಮಾಡಿದ್ದ ಡಾ. ಮನಮೋಹನ್ ಸಿಂಗ್ ಹಾಗೂ ಇನ್ನಿತರ ಕಾಂಗ್ರೆಸ್ಸಿಗರ ವಿರುದ್ಧ ಅವರು ಹರಿಹಾಯ್ದಿದ್ದರು.['ಕ್ಷಮೆ ಕೇಳೋ ತನಕ ಮೋದಿಯನ್ನು ಸಂಸತ್ ಪ್ರವೇಶಿಸಲು ಬಿಡೆವು']

ರೈನ್ ಕೋಟ್ ಹಾಕಿಕೊಂಡು ಮೈಗೆ ಒಂದು ಚೂರೂ ನೀರು ತಾಗದಂತೆ ಸ್ನಾನ ಮಾಡವುದು ಹೇಗೆಂಬುದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗಿಂತ ಚೆನ್ನಾಗಿ ಬಲ್ಲವರು ಮತ್ಯಾರೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಈ ಬಗ್ಗೆ ಕಾಂಗ್ರೆಸ್ಸಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಪ್ರಧಾನಿ ಕ್ಷಮೆ ಕೋರುವವರೆಗೂ ಅವರನ್ನು ಸಂಸತ್ತಿನೊಳಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On replying the remark of PM Narendra Modi on former PM Dr. Manmohan Singh, congress leader Rahul Gandhi said "It is saddening and shameful".
Please Wait while comments are loading...