ಹಿಂದೂಗಳಿಗೆ ಅವಮಾನ ಆರೋಪಕ್ಕೆ ರಾಹುಲ್ ಗಾಂಧಿ ಉತ್ತರ
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಭಾರತೀಯ ಜನತಾ ಪಕ್ಷವು ಸಂಸತ್ತಿನಲ್ಲಿ ಸೋಮವಾರ ಮಧ್ಯಾಹ್ನ ರಾಹುಲ್ ಗಾಂಧಿ ಮಾಡಿದ ಭಾಷಣಕ್ಕೆ ತಿರುಗೇಟು ನೀಡಿದೆ, ಅವರು ಎಲ್ಲರನ್ನು ಅವಾಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸಂವಿಧಾನದ ಪ್ರತಿ, ಭಗವಾನ್ ಶಿವ ಸೇರಿದಂತೆ ಧಾರ್ಮಿಕ ವ್ಯಕ್ತಿಗಳ ಫೋಟೋಗಳೊಂದಿಗೆ ತಮ್ಮ ಮೊದಲ ಭಾಷಣವನ್ನು ಮಾಡಲು ಬಂದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ಅನ್ನು ತರಾಟೆಗೆ ತೆಗೆದುಕೊಂಡರು. ಆರ್ ಎಸ್‌ಎಸ್ ಭಯ ಮತ್ತು ದ್ವೇಷವನ್ನು ಹರಡುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರ ಟೀಕೆಗಳನ್ನು ಖಂಡಿಸಲು ಮೋದಿ ಎರಡು ಬಾರಿ ಎದ್ದುನಿಂತರು. ಇಡೀ ಹಿಂದೂ ಸಮಾಜವನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭೀರ ಆರೋಪ ಎಂದು ಹೇಳಿದರು. ಎರಡನೇ ಬಾರಿ ಖಂಡಿಸಲು ಅವರು ಎದ್ದಾಗ ಪ್ರತಿಪಕ್ಷಗಳು ಕೂಗಿದವು. ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ಗೌರವಿಸಲು ಸಂವಿಧಾನವು ತನಗೆ ಕಲಿಸಿದೆ ಎಂದು ಪ್ರಧಾನಿ ಹೇಳಿದರು.
ರಾಹುಲ್ ಗಾಂಧಿ ಭಾಷಣ
"ಭಾರತದ ಕಲ್ಪನೆಯ ಮೇಲೆ, ಸಂವಿಧಾನದ ಮೇಲಿನ ದಾಳಿಯನ್ನು ವಿರೋಧಿಸಿದ ಜನರ ಮೇಲೆ ಪೂರ್ಣ ಪ್ರಮಾಣದ ಮತ್ತು ವ್ಯವಸ್ಥಿತ ದಾಳಿ" ಎಂದು ಹೇಳುವುದರ ಮೂಲಕ ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಅನೇಕ ವಿರೋಧ ಪಕ್ಷದ ನಾಯಕರ ಮೇಲೆ ಹಲ್ಲೆ ಮಾಡಲಾಯಿತು, ಕೆಲವರು ಇನ್ನೂ ಜೈಲಿನಲ್ಲಿದ್ದಾರೆ ಎಂದು ಹೇಳಿದರು.
ಶಿವನ ಚಿತ್ರವನ್ನು ನೋಡಿದರೆ ಹಿಂದೂಗಳು ಎಂದಿಗೂ ಭಯ ಮತ್ತು ದ್ವೇಷವನ್ನು ಹರಡಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆ, ಆದರೆ ಬಿಜೆಪಿ 24x7 ಭಯ ಮತ್ತು ದ್ವೇಷವನ್ನು ಹರಡುತ್ತದೆ ಎಂದರು. ಗುರುನಾನಕ್ ದೇವ್ ಅವರ ಚಿತ್ರಗಳನ್ನು ಸಹ ಪ್ರದರ್ಶಿಸಿದರು.
ಅಭಯ ಮುದ್ರೆ ಕಾಂಗ್ರೆಸ್‌ನ ಸಂಕೇತವಾಗಿದೆ. ಇದು ಸುರಕ್ಷತೆಯ ಸಂಕೇತವಾಗಿದೆ, ಇದು ಭಯವನ್ನು ಹೋಗಲಾಡಿಸುತ್ತದೆ ಮತ್ತು ಹಿಂದೂ ಧರ್ಮ, ಇಸ್ಲಾಂ, ಸಿಖ್ ಧರ್ಮ, ಬೌದ್ಧ ಧರ್ಮ ಮತ್ತು ಇತರ ಭಾರತೀಯ ಧರ್ಮಗಳಲ್ಲಿ ದೈವಿಕ ರಕ್ಷಣೆಯನ್ನು ನೀಡುತ್ತದೆ ಎಂದರು.
ರಾಹುಲ್ ಗಾಂಧಿ ಅವರ ಹೇಳಿಕೆಗೆ ಆರ್‌ಎಸ್‌ಎಸ್ ಸಂಘಟನೆಯ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನಿಲ್ ಅಂಬೇಕರ್ ಪ್ರತಿಕ್ರಿಯೆ ನೀಡಿದ್ದು, ಸಂಸತ್ತಿನಲ್ಲಿ ಪ್ರಮುಖ ಸ್ಥಾನದಲ್ಲಿರುವವರು ಹಿಂದುತ್ವವನ್ನು ಹಿಂಸೆಯೊಂದಿಗೆ ಜೋಡಿಸುತ್ತಿರುವುದು ದುರದೃಷ್ಟಕರ. ವಿವೇಕಾನಂದರಾಗಲಿ ಅಥವಾ ಗಾಂಧಿಯಾಗಲಿ ಹಿಂದುತ್ವವು ಸೌಹಾರ್ದತೆ ಮತ್ತು ಸಹೋದರತ್ವದ ಸಂಕೇತವಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications