'ದುರ್ಬಲ' ಪ್ರಧಾನಿ ನರೇಂದ್ರ ಮೋದಿ ಎಂದು ರಾಹುಲ್ ಟ್ವೀಟ್ ಮಾಡಿದ್ದೇಕೆ?

ನವದೆಹಲಿ, ಜುಲೈ 5: ಪ್ರಧಾನಿ ನರೇಂದ್ರ ಮೋದಿ 'ದುರ್ಬಲರು' ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಕರೆದಿದ್ದಾರೆ. ಕಾಶ್ಮೀರವನ್ನು 'ಭಾರತದ ಆಡಳಿತಕ್ಕೆ ಒಳಪಟ್ಟ ಕಾಶ್ಮೀರ' ಎಂದು ಅಮೆರಿಕ ಕರೆದಿದ್ದಕ್ಕೆ ಪ್ರತಿಕ್ರಿಯೆ ನೀಡದಿದ್ದಕ್ಕೆ ಹಾಗೂ ಎಚ್ 1ಬಿ ವೀಸಾ ವಿಚಾರ ಪ್ರಸ್ತಾವ ಮಾಡದಿದ್ದಕ್ಕೆ "ಭಾರತದ ಪ್ರಧಾನಿ ದುರ್ಬಲರು" ಎಂದು ಟ್ವೀಟ್ ರಾಹುಲ್ ಟ್ವೀಟ್ ಮಾಡಿದ್ದಾರೆ.

ಜೂನ್ ಇಪ್ಪತ್ತಾರರಂದು ಅಮೆರಿಕ ನೀಡಿದ್ದ ಹೇಳಿಕೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ ವೇಳೆ, ಭಾರತದ ಆಡಳಿತಕ್ಕೆ ಒಳಪಟ್ಟ ಜಮ್ಮು ಮತ್ತು ಕಾಶ್ಮೀರ ಎಂದಿತ್ತು.

Rahul Gandhi calls PM Modi 'weak' for accepting US reference to 'Indian-administered Jammu and Kashmir'

ಈ ರೀತಿ ಪ್ರಸ್ತಾವವನ್ನು ಗುರುವಾರ ಸಮರ್ಥಿಸಿಕೊಂಡ ಕೇಂದ್ರ ಸರಕಾರ, ಗಡಿಯಾಚೆಗಿನ ಭಯೋತ್ಪಾದನೆ ವಿಚಾರವಾಗಿ ಸಲಾಹುದ್ದೀನ್ ಪಾತ್ರವನ್ನು ವಿವರಿಸುವಾಗ ಹೀಗೆ ಹೇಳಲಾಗಿದೆ ಎಂದು ತಿಳಿಸಿದೆ.

"ಭಾರತದ ಆಡಳಿತಕ್ಕೆ ಒಳಪಟ್ಟ ಜಮ್ಮು ಮತ್ತು ಕಾಶ್ಮೀರ ಎಂಬುದು ಸೈಯದ್ ಸಲಾಹುದ್ದೀನ್ ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗಿದ್ದಾನೆ ಎಂಬುದನ್ನು ಖಾತ್ರಿ ಪಡಿಸುವಂಥ ಹೇಳಿಕೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇದೇ ಪದವನ್ನು ಈ ಹಿಂದೆ ಯುಪಿಎ ಸರಕಾರ ಅಧಿಕಾರದಲ್ಲಿರುವಾಗಲೂ ಅಮೆರಿಕ ಬಳಕೆ ಮಾಡಿದೆ ಎಂದು ಕೂಡ ಸಚಿವಾಲಯವು ಹೇಳಿದೆ. ಭಾರತದ ಆಡಳಿತಕ್ಕೆ ಒಳಪಟ್ಟ ಕಾಶ್ಮೀರ ಎಂಬುದನ್ನೇ ಪಾಕಿಸ್ತಾನ ಕೂಡ ಬಳಸುತ್ತದೆ. ಆ ಕಾರಣಕ್ಕೆ ಈ ಪದ ಬಳಕೆಗೆ ಆಕ್ರೋಶ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+