ಕೇದಾರನಾಥದತ್ತ 'ಆಮ್ ಆದ್ಮಿ'ಯಂತೆ ಹೊರಟ ರಾಹುಲ್
ಡೆಹ್ರಾಡೂನ್, ಏ.,23: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಕೇದರಾನಾಥ ಯಾತ್ರೆ ಕೈಗೊಂಡಿದ್ದಾರೆ. 'ಆಮ್ ಆದ್ಮಿ' ಅವತಾರದಲ್ಲಿ ರಾಹುಲ್ ಗಾಂಧಿ ಅವರು ಗೌರಿಕುಂಡದಿಂದ ಪಾದಯಾತ್ರೆ ಅಥವಾ ಅವರ ಭಾಷೆಯಲ್ಲಿ ಟ್ರೆಕ್ಕಿಂಗ್ ಕೈಗೊಂಡಿದ್ದಾರೆ.
55-56 ದಿನಗಳ ಕಾಲ ಭಾರತದಿಂದ ಕಣ್ಮರೆಯಾಗಿದ್ದ ರಾಹುಲ್ ಗಾಂಧಿ ಅವರು ಭಾರತಕ್ಕೆ ಬಂದ ಮೇಲೆ ರೈತರ ಸಮಾವೇಶ, ಲೋಕಸಭೆ ಅಧಿವೇಶನದಲ್ಲಿ ಪಾಲ್ಗೊಂಡು ಭಾಷಣ ಮಾಡಿ ಮೋದಿ ಸರ್ಕಾರವನ್ನು ಕಾಡಿದ್ದರು. ಈಗ ಹಿಮಾಲಯದತ್ತ ಮುಖ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ.[ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?]
ಯಾತ್ರಾರ್ಥಿ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಅಂಬಿಕಾ ಸೋನಿ, ಉತ್ತರಾಖಂಡ ಸಿಎಂ ಹರೀಶ್ ರಾವತ್ ಸೇರಿದಂತೆ ಹಲವು ನಾಯಕರು ಸಾಥ್ ನೀಡಲಿದ್ದಾರೆ ಎಂದು ಉತ್ತರಾಖಂಡ್ ಸಿಎಂ ಅವರ ಮಾಧ್ಯಮ ವಕ್ತಾರ ಸುರೇಂದ್ರ ಕುಮಾರ್ ಹೇಳಿದ್ದಾರೆ. [ಕೇದಾರನಾಥ ಸೃಷ್ಟಿ ಹೇಗಾಯ್ತು?]

ರಾಹುಲ್ ಗಾಂಧಿ ಯಾತ್ರೆ ವಿವರ
* ಗುರುವಾರ ಮುಂಜಾನೆ ಗೌರಿಕುಂಡ ಮತ್ತು ಕೇದಾರನಾಥ ನಡುವಿನ 16 ಕಿ.ಮೀ ದೂರವನ್ನು ಹೆಲಿಕಾಪ್ಟರ್ ಬಳಸದೆ, ಪಾದಯಾತ್ರೆ ಮೂಲಕ ಕ್ರಮಿಸುವುದಾಗಿ ತಿಳಿಸಿದರು.
* ಗುರುವಾರ 5 ಕಿ.ಮೀ ದೂರವನ್ನು ಕ್ರಮಿಸಿ ರಾತ್ರಿ ಲಿಂಚೋಲಿಯಲ್ಲಿ ತಂಗಲಿದ್ದಾರೆ.
* ಶುಕ್ರವಾರ ಮುಂಜಾನೆ ಪಾದಯಾತ್ರೆ ಆರಂಭಿಸಿ ಬೆಳಗ್ಗೆ 8.30ರ ವೇಳೆಗೆ ಕೇದಾರನಾಥ ದೇಗುಲ ತಲುಪುವ ನಿರೀಕ್ಷೆಯಿದೆ.
|
ಆಮ್ ಆದ್ಮಿಯಂತೆ ಹೊರಟ ರಾಹುಲ್
ರಾಹುಲ್ ಗಾಂಧಿ ಅವರ ಜೊತೆ ಉತ್ತರಾಖಂಡ್ ಸಿಎಂ ಹರೀಶ್ ರಾವತ್, ಅಂಬಿಕಾ ಸೋನಿ ಸೇರಿದಂತೆ ಇತರರು ಸಾಥ್ ನೀಡಿದ್ದಾರೆ.
|
ಗೌರಿಕುಂಡಕ್ಕೆ ಆಗಮಿಸಿದ ರಾಹುಲ್ ಗಾಂಧಿ
ಗುರುವಾರ ಮುಂಜಾನೆ ಗೌರಿಕುಂಡಕ್ಕೆ ಆಗಮಿಸಿದ ರಾಹುಲ್ ಗಾಂಧಿ.
|
ರಾಹುಲ್ ಪಾದಯಾತ್ರೆಗೆ ಪ್ರತ್ಯೇಕ ಹ್ಯಾಶ್ ಟ್ಯಾಗ್
ರಾಹುಲ್ ಪಾದಯಾತ್ರೆಗೆ ಪ್ರತ್ಯೇಕ ಹ್ಯಾಶ್ ಟ್ಯಾಗ್ #RGInKedarnath ಆರಂಭಿಸಿದ ಕಾಂಗ್ರೆಸ್ .. ಕಾಲಕಾಲಕ್ಕೆ ಅಪ್ಡೇಟ್ಸ್ ನೀಡುತ್ತಿದೆ.