Get Updates
Get notified of breaking news, exclusive insights, and must-see stories!

ಭಾರತೀಯರನ್ನು ಅವಮಾನಿಸಿ, ದೇಶದ್ರೋಹ ಎಸಗಿರುವ ಮೋಹನ್ ಭಾಗವತ್: ಆರ್‌ಎಸ್‌ಎಸ್‌ ಮುಖ್ಯಸ್ಥರ ವಿರುದ್ಧ ರಾಹುಲ್‌ ಗಾಂಧಿ ಕೆಂಡಾಮಂಡಲ

ನವದೆಹಲಿ, ಜನವರಿ 15: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಭಾರತೀಯರನ್ನು ಅವಮಾನಿಸುವ ಮೂಲಕ ದೇಶದ್ರೋಹವನ್ನು ಎಸಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೆಂಡ ಕಾರಿದ್ದಾರೆ. ನಿಜವಾದ ಸ್ವಾತಂತ್ರ್ಯವೆಂಬುದು ಭಾರತಕ್ಕೆ ಸಿಕ್ಕಿದ್ದು ರಾಮ ಮಂದಿರ ಪ್ರತಿಷ್ಠಾಪನಾ ದಿನದಂದು ಎಂಬುದಾಗಿ ಮೋಹನ್‌ ಭಾಗವತ್‌ ಹೇಳಿಕೆ ನೀಡಿದ್ದರು. ಈ ಕುರಿತಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ ಮೋಹನ್‌ ಭಾಗವತ್‌ ವಿರುದ್ಧ ವ್ಯಾಪಕ ವಾಗ್ದಾಳಿ ನಡೆಸಿದ್ದಾರೆ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆಗಳು ಭಾರತೀಯರಿಗೆ ಮಾಡಿದ ಅವಮಾನ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಸ್ವಾತಂತ್ರ್ಯ ಚಳುವಳಿ ಹಾಗೂ ಸಂವಿಧಾನದ ಬಗ್ಗೆ ತಾವು ಹೊಂದಿರುವ ಅಭಿಪ್ರಾಯವನ್ನು ದೇಶಕ್ಕೆ ತಿಳಿಸುವ ಧೈರ್ಯವನ್ನು ಮೋಹನ್ ಭಾಗವತ್ ಮಾಡಿದ್ದಾರೆ. ಎಲ್ಲ ಭಾರತೀಯರಿಗೆ ಅವಮಾನ ಮಾಡುವ ಮೂಲಕ ದೇಶದ್ರೋಹದ ಕೆಲಸವನ್ನು ಭಾಗವತ್‌ ಮಾಡಿದ್ದಾರೆ' ಎಂದು ರಾಹುಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Rahul Gandhi Accuses Mohan Bhagwat of Treason Over Independence Remarks

ಸಂವಿಧಾನದ ಪರಿಕಲ್ಪನೆ ಹಾಗೂ ಬ್ರಿಟಿಷರ ವಿರುದ್ಧದ ಭಾರತೀಯರ ಹೋರಾಟದಂತಹ ವಿಚಾರಗಳು ಮೋಹನ್‌ ಭಾಗವತ್‌ ಅವರಿಗೆ ನಗಣ್ಯವಾಗಿ ಗೋಚರಿಸುತ್ತಿವೆ. ಇದನ್ನು ಸಾರ್ವಜನಿಕವಾಗಿ ಹೇಳುವ ಧೈರ್ಯ ಅವರಿಗೆ ಇದೆ. ಈ ರೀತಿಯಾಗಿ ಬೇರೆ ಯಾವುದೇ ದೇಶದಲ್ಲಿ ಹೇಳಿಕೆ ನೀಡಿದ್ದರೆ, ಅಂತವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ರಾಹುಲ್‌ ಹರಿಹಾಯ್ದಿದ್ದಾರೆ.

ಹೊಸ ಕಾಂಗ್ರೆಸ್ ಪ್ರಧಾನ ಕಚೇರಿ ( ಇಂದಿರಾ ಗಾಂಧಿ ಭವನ ) ಉದ್ಘಾಟನೆಯ ಬಳಿಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, 'ಭಾರತವು ಹಲವು ರಾಜ್ಯಗಳ ಒಕ್ಕೂಟ ಎಂದು ಒಂದು ಪರಿಕಲ್ಪನೆ ಹೇಳುತ್ತದೆ. ಇಲ್ಲಿರುವ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಆಗಿವೆ. ಇವನ್ನು ಸಮಾನವಾಗಿ ನೋಡುತ್ತಿರುವುದು ನಮ್ಮ ಸಂವಿಧಾನ. ಇಲ್ಲಿನ ಯಾವು ಭಾಷೆಯೂ ಶ್ರೇಷ್ಠ ಭಾಷೆ ಇಲ್ಲ, ಯಾವುದೇ ಭಾಷೆಯೂ ಕನಿಷ್ಠವಲ್ಲ. ಇಲ್ಲಿನ ಯಾವುದೇ ಸಂಸ್ಕೃತಿ ಶ್ರೇಷ್ಠ ಇಲ್ಲ, ಯಾವುದೇ ಸಂಸ್ಕೃತಿ ಕೀಳಲ್ಲ. ಯಾವುದೇ ಸಮುಧಾಯ ಶ್ರೇಷ್ಠವಲ್ಲ, ಯಾವುದೇ ಸಮುದಾಯ ಕೀಳಲ್ಲ. ಇಲ್ಲಿರುವ ಎಲ್ಲವೂ ಒಂದೇ ಆಗಿದೆ. ಅದು ಸಂವಿಧಾನದಲ್ಲಿ ಬರೆಯಲ್ಪಟ್ಟಿದೆ' ಎಂದು ರಾಹುಲ್‌ ಹೇಳಿದ್ದಾರೆ.

Rahul Gandhi Accuses Mohan Bhagwat of Treason Over Independence Remarks

ಇಂತಹ ಭಾರತದ ಪರಿಕಲ್ಪನೆ ಬಗ್ಗೆ ಬಿಜೆಪಿ ನೇತೃತ್ವದ ಸರ್ಕಾರವು ವಿಭಿನ್ನವಾದ ಆಲೋಚನೆಯನ್ನೇ ಹೊಂದಿದೆ. ಭಾರತದ ಬಗ್ಗೆ ಕಾಂಗ್ರೆಸ್ಸಿಗೆ ಇರುವ ಕಲ್ಪನೆಗೆ ಸಂಪೂರ್ಣವಾಗಿ ಭಿನ್ನವಾಗಿರುವುದು ಬಿಜೆಪಿ ಕಲ್ಪನೆ. ಬಿಜೆಪಿಯು ಭಾರತದ ಬಗ್ಗೆ ಭಿನ್ನವಾದ ದೃಷ್ಟಿಕೋನವನ್ನು ಹೊಂದಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಮುಕ್ತವಲ್ಲದ ಗುಪ್ತ ಸಮೂದಾಯವೊಂದು ಭಾರತವನ್ನು ಮುನ್ನಡೆಸಬೇಕೆಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಜನರು ಬಯಸುತ್ತಾರೆ. ರಾಷ್ಟ್ರವನ್ನು ವ್ಯಕ್ತಿ ಕೇಂದ್ರಿತವನ್ನಾಗಿ ಮಾಡಲು ಅವರು ಮುಂದಾಗಿದ್ದಾರೆ. ಈ ಮೂಲಕ ದಲಿತರ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ಜನಾಂಗದವರ ಧ್ವನಿಯನ್ನು ಹತ್ತಿಕ್ಕಲು ಅವರು ಬಯಸುತ್ತಾರೆ ಎಂದು ರಾಹುಲ್‌ ಹರಿಹಾಯ್ದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+