ರಾಫೇಲ್ ಡೀಲ್ ನಲ್ಲಿ ಗೋಲ್ ಮಾಲ್: ರಾಹುಲ್ ಗಂಭೀರ ಆರೋಪ

ನವದೆಹಲಿ, ಫೆಬ್ರವರಿ 6: ರಾಫೇಲ್ ಯುದ್ಧ ವಿಮಾನಗಳ ಬೆಲೆಯನ್ನು ಬಹಿರಂಗಪಡಿಸದ ಕೇಂದ್ರ ಸರಕಾರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಡೀಲ್ ನಲ್ಲಿ ಹಗರಣ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

"ಮೊದಲ ಬಾರಿಗೆ ರಕ್ಷಣಾ ಮಂತ್ರಿಗಳು ವಿಮಾನಗಳ ಖರೀದಿಗೆ ವೆಚ್ಚ ಮಾಡಿದ ಹಣದ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರಲ್ಲಿ (ರಾಫೇಲ್ ಡೀಲ್) ಹಗರಣ ನಡೆದಿದೆ ಎಂದು ನಾನು ಗುಜರಾತ್ ಚುನಾವಣೆ ವೇಳೆಯೇ ಹೇಳಿದ್ದೆ. ಮೋದಿಯವರು ತಾವೇ ಖುದ್ದು ಈ ಡೀಲ್ ನಡೆಯುವಂತೆ ನೋಡಿಕೊಂಡಿದ್ದಾರೆ," ಎಂದು ರಾಹುಲ್ ಗಾಂಧಿ ಸಂಸತ್ ಭವನದ ಮುಂದೆ ವರದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

"ಮೋದಿ ತಾವೇ ಖುದ್ದು ಪ್ಯಾರಿಸ್ ಗೆ ಹೋಗಿದ್ದಾರೆ. ಖುದ್ದು ಡೀಲ್ ಬದಲಿಸಿದ್ದಾರೆ. ಇಡೀ ಭಾರತಕ್ಕೆ ಇದು ತಿಳಿದಿದೆ," ರಾಹುಲ್ ಹೇಳಿದ್ದಾರೆ.

Rahul alleges scam in Rafale deal

"ವಿಮಾನಗಳ ಖರೀದಿಗೆ ಮಾಡಿರುವ ವೆಚ್ಚದ ಬಗ್ಗೆ ಭಾರತಕ್ಕೆ, ಭಾರತದ ಹುತಾತ್ಮರಿಗೆ, ಅವರ ಕುಟುಂಬದವರಿಗೆ ಮಾಹಿತಿ ನೀಡುವುದಿಲ್ಲ ಎಂಬುದಾಗಿ ರಕ್ಷಣಾ ಮಂತ್ರಿಗಳು ಹೇಳುತ್ತಾರೆ. ಇದರ ಅರ್ಥ ಏನು? ಇದರ ಅರ್ಥ ಏನು ಎಂದರೆ ಇಲ್ಲಿ ಹಗರಣ ನಡೆದಿದೆ," ಎಂದು ರಾಹುಲ್ ಕಿಡಿಕಾರಿದ್ದಾರೆ.

ನಿರ್ಮಲಾ ಸೀತಾರಾಮನ್ ಡೀಲ್ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಒಂದು ದಿನಗಳ ತರುವಾಯ ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+