ಮಂಗಳವಾರ ಮೊದಲ ರಫೇಲ್ ವಿಮಾನ ಭಾರತಕ್ಕೆ: ವಿಶೇಷತೆಗಳೇನು?
ನವದೆಹಲಿ, ಅಕ್ಟೋಬರ್ 07: ರಫೇಲ್ ಯುದ್ಧ ವಿಮಾನ ಮಂಗಳವಾರ ಭಾರತದ ಕೈ ಸೇರಲಿದೆ. ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಮೊದಲ ರಫೇಲ್ ವಿಮಾನವನ್ನು ಸ್ವೀಕರಿಸಿ, ಪರಿಕ್ಷಾರ್ಥ ಹಾರಾಟವೂ ನಡೆಸಲಿದ್ದಾರೆ.
ಹಲವು ಕಾರಣಗಳಿಗಾಗಿ ರಫೇಲ್ ಯುದ್ಧ ವಿಮಾನ ಭಾರತದಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಆದರೆ ಅಂತಿಮವಾಗಿ ಮೊದಲ ರಫೇಲ್ ಯುದ್ಧ ವಿಮಾನ ನಾಳೆ ಭಾರತದ ಕೈಸೇರಲಿದ್ದು, ವಾಯುಪಡೆಯ ಶಕ್ತಿ ದ್ವಿಗುಣಗೊಳಿಸಲಿದೆ.
ಭಾರಿ ಚರ್ಚೆಗೆ ಕಾರಣವಾಗಿದ್ದ ರಫೇಲ್ ನಲ್ಲಿ ಅಂತಹಾ ವಿಶೇಷತೆ ಏನಿದೆ ಎಂಬುದು ಹಲವರ ಪ್ರಶ್ನೆ. ರಫೇಲ್‌ಗೆ ಇರುವ ಶಕ್ತಿಯೇ ಇದರ ಹೆಚ್ಚಿನ ಬೆಲೆಗೆ ಕಾರಣ ಎಂದು ಆಗಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಹಾಗಿದ್ದರೆ ಆ ಶಕ್ತಿ ಏನು? ಇಲ್ಲಿದೆ ಮಾಹಿತಿ.

60,000 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯ
ಅತ್ಯಂತ ವೇಗದ ವಿಮಾನವಾದ ರಫೇಲ್, ನಿಮಿಷದಲ್ಲೇ 60,೦೦೦ ಅಡಿ ಮೇಲಕ್ಕೆ ಏರಿಬಿಡಲ್ಲದು. ಖಾಲಿ ಇದ್ದಾಗ ಇದರ ತೂಕ 24,600 ಕೆ.ಜಿ ತೂಕವಷ್ಟೆ. ಒಟ್ಟು ಸುಮಾರು 9545 ಕೆ.ಜಿ ತೂಕವನ್ನು ಹೊತ್ತೊಯ್ಯಬಲ್ಲದು.

ಗಂಟೆಗೆ ಗರಿಷ್ಟ ವೇಗ 1389 ಕಿ.ಮೀ
ತೀವ್ರ ವೇಗದಲ್ಲಿ ನುಗ್ಗುವ ಸಾಮರ್ಥ್ಯ ಹೊಂದಿರುವ ರಫೇಲ್ ವಿಮಾನದ ಗರಿಷ್ಟ ವೇಗ ಗಂಟೆಗೆ 1389 ಕಿ.ಮೀ. ರಫೇಲ್ ಯುದ್ಧವಿಮಾನವು ಒಂದು ಗಂಟೆಯಲ್ಲಿ 1389 ಕಿ.ಮೀಗಳನ್ನು ಕ್ರಮಿಸಬಲ್ಲದು. ರಫೇಲ್‌ನ ಒಟ್ಟು ಉದ್ದ 15.30 ಮೀಟರ್. ಎತ್ತರ 5.10 ಮೀಟರ್.

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ರಫೇಲ್ ವಿಮಾನ
ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ರಫೇಲ್ ಯುದ್ಧವಿಮಾನ, ವೇಗವಾಗಿ ದಾಳಿ ಮಾಡಬಲ್ಲದು, ದೂರದ ಗುರಿಗಳನ್ನು ಹೊಡೆದು ಉರುಳಿಸಬಲ್ಲದು. ಅತ್ಯಾಧುನಿಕ ತಂತ್ರಜ್ಞಾನದಿಂದ ವೈರಿಯ ಚಲನವಲನಗಳನ್ನು ಸುಲಭವಾಗಿ ಗುರುತಿಸಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.

300 ಕಿ.ಮೀ ದೂರದ ಗುರಿಯ ಮೇಲೆ ದಾಳಿ ಮಾಡಬಲ್ಲದು
ಒಂದೇ ಜಿಗಿತದಲ್ಲಿ 2000 ನಾಟಿಕಲ್ ಮೈಲು ದೂರ ಹಾರುವ ಸಾಮರ್ಥ್ಯ ರಫೇಲ್‌ಗೆ ಇದೆ. ಗರಿಷ್ಠ ಸ್ಥಿರ ಎತ್ತರ 50,000 ಅಡಿ. ಹಾರಾಟ ನಡೆಸುವಾಗಲೇ 300 ಕಿ.ಮೀ ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications