ಆರೆಸ್ಸೆಸ್ ವಸ್ತ್ರ ಸಂಹಿತೆ ಬದಲಾಗಲು ರಾಬ್ಡಿ ದೇವಿ ಕಾರಣವಂತೆ!

Posted By:
Subscribe to Oneindia Kannada

ಪಾಟ್ನ, ಮಾರ್ಚ್ 14: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಗಣವೇಷ ಬದಲಾವಣೆಯಾಗಿರುವುದು ಎಲ್ಲರಿಗೂ ತಿಳಿದಿರಬಹುದು. ಖಾಕಿ ಚಡ್ಡಿ ಬದಲು ಪ್ಯಾಂಟ್ ಧರಿಸಲು ಸಂಘ ಪರಿವಾರದ ಪ್ರಮುಖ ನಿರ್ಧರಿಸಿದ್ದಾರೆ. ಈ ಬದಲಾವಣೆಗೆ ಆರ್ ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರ ಪತ್ನಿ ರಾಬ್ಡಿ ದೇವಿ ಕಾರಣವಂತೆ!.

ಆರೆಸ್ಸೆಸ್ ಡ್ರೆಸ್ ಕೋಡ್ ಬದಲಾವಣೆಯಾಗಲು ನನ್ನ ಪತ್ನಿ ರಾಬ್ಡಿ ದೇವಿ ಕಾರಣ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರು ಸೋಮವಾರ ಘೋಷಿಸಿದ್ದಾರೆ.

Rabri Devi forced RSS to change dress code, says Lalu

ಆದರೆ, ಅವರು ಫುಲ್ ಪ್ಯಾಂಟಿಗೆ ಬದಲಾಗಿರಬಹುದು. ಅವರನ್ನು ಮತ್ತೆ ಹಾಫ್ ಪ್ಯಾಂಟಿಗೆ ಇಳಿಸುತ್ತೇನೆ ಎಂದು ಲಾಲೂ ಹೇಳಿದ್ದಾರೆ.

ಲಾಲೂ ಅವರ ಪತ್ನಿ ರಾಬ್ಡಿ ದೇವಿ ಅವರು ಎರಡು ತಿಂಗಳ ಹಿಂದೆ ಆರೆಸ್ಸೆಸ್ ನ ವಸ್ತ್ರ ಸಂಹಿತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಮುಜುಗರಕ್ಕೀಡಾದ ಆರೆಸ್ಸೆಸ್ ಡ್ರೆಸ್ ಕೋಡ್ ಬದಲಾಯಿಸಿದೆಯಂತೆ.

'ಸಾರ್ವಜನಿಕವಾಗಿ ಆರೆಸ್ಸೆಸ್ ನ ಹಿರಿಯರು ಅರ್ಧ ಚಡ್ಡಿ ಹಾಕಿಕೊಂಡು ಅಡ್ಡಾಡಲು ನಾಚಿಕೆಯಾಗುವುದಿಲ್ಲವೇ?' ಎಂದು ರಾಬ್ಡಿ ದೇವಿ ಪ್ರಶ್ನಿಸಿದ್ದರು. ಈ ಹೇಳಿಕೆಯನ್ನು ಆರೆಸ್ಸೆಸ್ ಹಾಗೂ ಭಾರತೀಯ ಜನತಾ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದ್ದರು.

ರಾಜಸ್ಥಾನದ ಜೈಪುರ ಬಳಿಯ ನಾಗೌರ್ ನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿಗಳ ನೀತಿ ನಿರ್ಧಾರಕ ಸಭೆಯಲ್ಲಿ (ಮಾ 13) ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಹೊಸ ಡ್ರೆಸ್ ಕೋಡ್ ಇದೇ ವಿಜಯದಶಮಿಯ ದಿನದಿಂದ ಜಾರಿಗೆ ಬರಲಿದೆ. [ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ]

(ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
RJD chief Lalu Prasad on Monday, March 14 credited his wife and former chief minister Rabri Devi for the change in the RSS's dress code from khaki shorts to trousers.
Please Wait while comments are loading...