ಗಾಂಧೀಜಿಗೆ 'ಮಹಾತ್ಮಾ' ಬಿರುದು ಕೊಟ್ಟಿದ್ದು ಯಾರು?

Posted By:
Subscribe to Oneindia Kannada

ಅಹಮದಾಬಾದ್, ಫೆ. 15:ನೋಬೆಲ್ ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರನಾಥ್ ಟ್ಯಾಗೂರ್ ಅವರು ರಾಷ್ಟ್ರ ಪಿತ ಗಾಂಧೀಜಿ ಅವರಿಗೆ ‘ಮಹಾತ್ಮ' ಎಂಬ ಬಿರುದು ನೀಡಿದರು ಎಂದು ಶಾಲಾದಿನಗಳಲ್ಲಿ ಓದಿದ್ದು ನೆನಪಿರಬಹುದು. ಆದರೆ, ಗುಜರಾತಿನಲ್ಲಿ ಈ ವಿಷಯ ಕೋರ್ಟ್ ಮೆಟ್ಟಿಲೇರಿದೆ.

ಗುಜರಾತ್ ಸರ್ಕಾರದ ಉದ್ಯೋಗದ ನೇಮಕಾತಿ ಪರೀಕ್ಷೆಯೊಂದರಲ್ಲಿ ಈ ಕುರಿತ ಪ್ರಶ್ನೆಗೆ ‘ಅನಾಮಧೇಯ ಪತ್ರಕರ್ತ' ಎಂಬ ಉತ್ತರ ಪ್ರಕಟವಾಗಿದೆ. ಭಾರತದ ಅತಿ ದೊಡ್ಡ ನದಿ, ಗಂಗಾ ಅಲ್ಲ ಬ್ರಹ್ಮಪುತ್ರಾ ಎಂಬ ಉತ್ತರವನ್ನು ನೀಡಲಾಗಿದೆ.

ಸೌರಾಷ್ಟ್ರದ ಜೆಟ್‌ಪುರ ಪಟ್ಟಣದ ಪತ್ರಕರ್ತನೊಬ್ಬ ಗಾಂಧೀಜಿ ಇನ್ನೂ ದಕ್ಷಿಣ ಆಫ್ರಿಕದಲಿದ್ದ ಸಂದರ್ಭದಲ್ಲೇ ಅವರಿಗೆ ಬರೆದ ಪತ್ರದಲ್ಲಿ 'ಮಹಾತ್ಮ 'ಎಂದು ನಮೂದಿಸಿದ್ದ ಎಂದು ಗುಜರಾತ್ ಹೈಕೋರ್ಟಿಗೆ ಜಿಲ್ಲಾ ಪಂಚಾಯತ್ ನೀಡಿರುವ ಅಫಡವಿಟ್ ನಲ್ಲಿ ಹೇಳಲಾಗಿದೆ. [ಗಾಂಧೀಜಿ ಮರಿಮೊಮ್ಮಗಳ ಮೇಲೆ ವಂಚನೆ ಆರೋಪ]

Rabindranath Tagore did not gave Mahatma title to Bapu

ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳ ಪೈಕಿ ಸಂಧ್ಯಾ ಮರು ಎಂಬುವರು ಗುಜರಾತ್ ಹೈಕೋರ್ಟಿನಲ್ಲಿ ಪಿಟೀಷನ್ ಹಾಕಿ ಕೆಲವು ಪ್ರಶ್ನೆಗಳಿಗೆ ಸರಿಯುತ್ತರ ಬಯಸಿದ್ದಾರೆ.

2501ಕಿ.ಮೀ. ಉದ್ದದ ಗಂಗಾ ನದಿಗೆ ಬದಲಾಗಿ 1,346ಕಿ.ಮೀ ಉದ್ದಕ್ಕೆ ಹರಿಯುವ ಬ್ರಹ್ಮ ಪುತ್ರಾ ನದಿಯೇ ದೇಶದ ಅತಿ ದೊಡ್ಡ ನದಿ ಎಂದು ನಮೂದಿಸಲಾಗಿದೆ. ಗುಜರಾತ್ ಸರ್ಕಾರದ ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶ ಜೆ.ಬಿ.ಸರ್ದಿವಾಲಾ, ವಿವಿಧ ಇಲಾಖೆಗಳ ನೇಮಕಾತಿ ವಿಷಯದಲ್ಲಿ ಈ ರೀತಿ ಹುಡುಗಾಟ ಅಥವಾ ಉತ್ತರ ತಿರುಚುವುದು ಸರಿಯಲ್ಲ ಎಂದು ಹೇಳಿದ್ದಾರೆ.[ಮಹಾತ್ಮ ಮತ್ತು ಮನುಬೆನ್ : ಬೆಚ್ಚಿಬೀಳಿಸುವ ನಗ್ನ ಸತ್ಯಗಳು]

ವೃತ್ತಿ ಆಯ್ಕೆ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲೂ ಈ ಉತ್ತರಗಳನ್ನು ಕೊಡಲಾಗಿದೆ. ಗುಜರಾತ್ ಸರ್ಕಾರದ ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶ ಜೆ.ಬಿ.ಸರ್ದಿವಾಲಾ, ವಿವಿಧ ಇಲಾಖೆಗಳ ನೇಮಕಾತಿ ವಿಷಯದಲ್ಲಿ ಈ ರೀತಿ ಹುಡುಗಾಟ ಅಥವಾ ಉತ್ತರ ತಿರುಚುವುದು ಸರಿಯಲ್ಲ ಎಂದು ಹೇಳಿದ್ದಾರೆ. ನ್ಯಾಯವಾದಿ ಹೆಚ್.ಎಸ್.ಮುಶ್ವಾ ಅವರು ಈ ಬಗ್ಗೆ ಸರಿಯಾದ ಸ್ಪಷ್ಟನೆ ಸಿಗಲಿದೆ ಎಂದಿದ್ದಾರೆ.ಈ ಕುರಿತ ವಿಚಾರಣೆಯನ್ನು ನ್ಯಾಯಾಧೀಶರು ಫೆ.17ಕ್ಕೆ ಮುಂದೂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gujarat government insists that Rabindranath Tagore did not gave Mahatma title to Bapu. It was actually an anonymous journalist from Jetpur town of Saurashtra who gave the title.
Please Wait while comments are loading...