ರೈತರಿಗೆ ಸಿಹಿ ಸುದ್ದಿ: ರಸಗೊಬ್ಬರಕ್ಕೆ ₹22,303 ಕೋಟಿ ಸಬ್ಸಿಡಿಗೆ ಕೇಂದ್ರ ಅನುಮೋದನೆ
ಬೆಂಗಳೂರು, ಅಕ್ಟೋಬರ್ 25: ದುಬಾರಿ ಕಾಲದಲ್ಲಿ ದೇಶದ ರೈತರಿಗೆ ಸಮಂಜಸ ಬೆಲೆಗೆ ರಸಗೊಬ್ಬರ ದೊರಕಿಸಿಕೊಡಲು
ಕೇಂದ್ರ ಸರ್ಕಾರವು ಪ್ರಸಕ್ತ ರಾಬಿ ಋತುವಿನಲ್ಲಿ ಪಿ ಆಂಡ್ ಕೆ ರಸಗೊಬ್ಬರಗಳ ಮೇಲೆ 22,303 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಒದಗಿಸಲು ಒಪ್ಪಿಗೆ ನೀಡಿದೆ.

ಹೆಚ್ಚಿನ ಜಾಗತಿಕ ಬೆಲೆಗಳ ಹೊರತಾಗಿಯೂ ರೈತರಿಗೆ ಸಮಂಜಸವಾದ ದರದಲ್ಲಿ ಮಣ್ಣಿನ ಪೋಷಕಾಂಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬುಧವಾರ ಕೇಂದ್ರ ಸಚಿವ ಸಂಪುಟವು ಸಹಾಯಧನ ಕ್ಕೆ (Susidy) ಅನುಮೋದನೆ ನೀಡಿದೆ. ಈ ಕುರಿತು ಸಂಪುಟ ಸಭೆ ಬಳಿಕ ಸಂಪುಟ ಸಭೆಯ ನಂತರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದರು.
ಕೇಂದ್ರ ಸಚಿವ ಸಂಪುಟವು ರಾಬಿ ಬೆಳೆ ಋತುವಿಗೆ ಅಂದರೆ ಇದೇ 2023 ಅಕ್ಟೋಬರ್ 1ರಿಂದ 2024 ಮಾರ್ಚ್ 31ರವರೆಗೆ ಸಾರಜನಕ, ರಂಜಕ, ಪೊಟ್ಯಾಶ್ ಮತ್ತು ಗಂಧಕದಂತಹ ವಿವಿಧ ಪೋಷಕಾಂಶಗಳಿಗೆ ಸಬ್ಸಿಡಿ ದರ ಒದಗಿಸಲು ಸರ್ಕಾರ ನಿರ್ಧರಿಸಿದೆ.
ಡಿ-ಅಮೋನಿಯಂ ಫಾಸ್ಫೇಟ್ ಪ್ರತಿ ಚೀಲಕ್ಕೆ 1,350ರೂಪಾಯಿ ಹಳೆಯ ದರದಲ್ಲಿ ಮಾರಾಟವಾಗುವುದನ್ನು ಮುಂದುವರಿಸಲಿದೆ. ಆದರೆ ಮ್ಯೂರಿಯೇಟ್ ಆಫ್ ಪೊಟ್ಯಾಶ್ ದರವು ಕಡಿಮೆ ಆಗುತ್ತದೆ ಎಂದು ಸಚಿವರು ತಿಳಿಸಿದರು.












Click it and Unblock the Notifications