ನರೇಂದ್ರ ಮೋದಿಯವರ ರಾಖಿ ಸಹೋದರಿ ಯಾರು ಗೊತ್ತಾ..?

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 7: "ನಾನು ಕಳೆದ ಇಪ್ಪತ್ತ ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಟ್ಟುತ್ತಿದ್ದೇನೆ. ಈ ಬಾರಿ ಅವರ ಬ್ಯಸಿ ಶೆಡ್ಯೂಲ್ ನಡುವಲ್ಲಿ ನನ್ನನ್ನು ಮರೆತುಬಿಟ್ಟಿರಬಹುದು ಎಂದುಕೊಂಡಿದ್ದೆ. ಆದರೆ ಎರಡು ದಿನದ ಹಿಂದೆ ಅವರೇ ಫೋನ್ ಮಾಡಿ ರಕ್ಷಾಬಂಧನವನ್ನು ನೆನಪಿಸಿಕೊಂಡರು" ಇದು ಪಾಕಿಸ್ತಾನಿ ಮೂಲದ ಖುಮಾರ್ ಮೊಹ್ಸಿನ್ ಶೇಖ್ ಎಂಬುವವರ ಮಾತು!

ನೂಲಿನ ನಂಟು:ಇದೇ ರಕ್ಷಾ ಬಂಧನ

ಕಳೆದ ಇಪ್ಪತ್ತು ವರ್ಷಗಳಿಂದಲೂ, ಪ್ರತಿವರ್ಷವೂ ಪ್ರಸ್ತುತ ಪ್ರಧಾನಿ ಮೋದಿಯವರಿಗೆ ರಾಖಿ ಕಟ್ಟುತ್ತಿರುವ ಈಕೆ, ಈ ಬಾರಿಯೂ ಮೋದಿಯವರಿಗೆ ರಕ್ಷೆ ಕಟ್ಟಲು ಉತ್ಸುಕತೆಯಿಂದಿದ್ದಾರೆ.

Qamar Mohsin Shaikh, PM Modi's Pakistani Rakhi-sister

ನರೇಂದ್ರ ಮೋದಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದಾಗಿನಿಂದಲೂ ನನಗೆ ಪರಿಚಯ. ಸಾಮಾನ್ಯ ಕಾರ್ಯಕರ್ತರಾಗಿ ಇದೀಗ ಭಾರತದ ಪ್ರಧಾನಿಯಾಗಿರುವ ಈ ಸಾಧನೆ ಅವರ ಸತತ ಪರಿಶ್ರಮದ ಫಲ. ಅವರಿಗೆ ರಾಖಿ ಕಟ್ಟಲು ಹೆಮ್ಮೆಯಾಗುತ್ತದೆ ಎಂದು ಶೇಖ್ ಹೇಳಿದ್ದಾರೆ.

World Record at Rakhi (Raksha Bandhan) Day, Bengaluru

ಭ್ರಾತೃತ್ವದ ಸಂಕೇತವಾದ ರಕ್ಷಾಬಂಧನವನ್ನು ಇಂದು(ಆಗಸ್ಟ್ 7) ಭಾರತದಾದ್ಯಂತ ಆಚರಿಸಲಾಗುತ್ತಿದ್ದು, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಈ ಹಬ್ಬವನ್ನು ಆಚರಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Pakistani-origin woman has claimed that she has been tying Rakhi to Prime Minister Narendra Modi for over 20 years. "I ama excited to tie rakhi to Modi" she told to media in New Delhi on August 7th.
Please Wait while comments are loading...