ವಿವಾದಿತ ಎಸ್ಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಚಂಡೀಗಢ, ಆಗಸ್ಟ್ 05: ಗುರುದಾಸಪುರದ ಪೊಲೀಸ್ ವರಿಷ್ಠಾಧಿಕಾರಿ ಸಲ್ವಿಂದರ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಅತ್ಯಾಚಾರ ಹಾಗೂ ಲಂಚ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅತ್ಯಾಚಾರ ಆರೋಪದಡಿಯಲ್ಲಿ ವಿವಾದಾತ್ಮಕ ಎಸ್ಪಿ ಸಲ್ವಿಂದರ್ ಸಿಂಗ್ ರನ್ನು ಅವರನ್ನು ಬಂಧಿಸಲು ಗುರುದಾಸಪುರ ಠಾಣಾ ಪೊಲೀಸರು ಮುಂದಾಗಿದ್ದಾರೆ.[ಸಲ್ವೀಂದರ್ ಸಿಂಗ್ ಸುಳ್ಳುಪತ್ತೆ ಪರೀಕ್ಷೆ]

ಪಠಾಣ್ಕೋಟ್ ವಾಯುನೆಲೆ ಮೇಲೆ ಜನವರಿಯಲ್ಲಿ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಗಂಭೀರವಾದ ಆರೋಪ ಎದುರಿಸುತ್ತಿದ್ದಾರೆ. ಜಲಂಧರ್ನಲ್ಲಿ 75 ಬೆಟಾಲಿಯನ್ ಕಮಾಂಡೆಂಟ್ ಆಗಿರುವ ವ್ಯಕ್ತಿಯೊಬ್ಬರ ಪತ್ನಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಹೊತ್ತಿದ್ದಾರೆ.[ಹುತಾತ್ಮ ನಿರಂಜನ್ ಸ್ನೇಹಿತನ ಕೊರಳುಬ್ಬಿದ ಮಾತುಗಳು]
ಈ ಕುರಿತಂತೆ ಆನ್ ಲೈನ್ ಮೂಲಕ ದೂರು ನೀಡಿದ ಹಿನ್ನೆಲೆಯಲ್ಲಿ ಬುಧವಾರವೇ ಐಪಿಸಿ ಸೆಕ್ಷನ್ 376-ಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.[ಪಠಾಣ್ ಕೋಟ್ ಉಗ್ರರ ದಾಳಿ ಟೈಮ್ ಲೈನ್]
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ವಿಂದರ್ ಸಿಂಗ್ ಅವರು ಸಂತ್ರಸ್ತ ಮಹಿಳೆಯ ಪತಿಯ ವಿರುದ್ಧ ಕ್ರಿಮಿನಲ್ ಕೇಸ್ ನಡೆಯುತ್ತಿದ್ದು, ಇದರಿಂದ ಆತನಿಗೆ ಮುಕ್ತಿ ಸಿಗಬೇಕಾದರೆ 50 ಸಾವಿರ ರು ನೀಡುವಂತೆ ಲಂಚ ಕೇಳಿದ್ದಾರೆ
ಆರೋಪವಿದೆ. ಹೀಗಾಗಿ ಭ್ರಷ್ಟಾಚಾರ ಪ್ರಕರಣ ಕೂಡ ದಾಖಲಾಗಿದ್ದು, ಪ್ರಕರಣ ತನಿಖೆಯ ಹಂತದಲ್ಲಿದೆ.












Click it and Unblock the Notifications