ಪಂಜಾಬ್ ಅಸೆಂಬ್ಲಿ ಚುನಾವಣೆ ಸಮೀಕ್ಷೆ: ಸಿಕ್ಸರ್ ಸಿದ್ದು ಕಿಂಗ್ ಮೇಕರ್

Written By:
Subscribe to Oneindia Kannada

ನವದೆಹಲಿ, ಅ 14: ಮುಂದಿನ ವರ್ಷ ನಡೆಯಲಿರುವ ಪಂಜಾಬ್ ಅಸೆಂಬ್ಲಿ ಚುನಾವಣೆಯ ಸಂಬಂಧ ಇಂಡಿಯಾ ಟುಡೇ-ಏಕ್ಸಿಸ್ ಜಂಟಿಯಾಗಿ ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯ ಪ್ರಕಾರ ಹೊಸ ಎಂಟ್ರಿ ಆವಾಜ್ - ಎ- ಪಂಜಾಬ್ ಪಕ್ಷ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ.

ಸಮೀಕ್ಷೆಯ ಪ್ರಕಾರ ಆಡಾಳಿತಾರೂಢ ಅಕಾಲಿದಳ - ಬಿಜೆಪಿ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆಯಾಗಲಿದ್ದು, ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಪಂಜಾಬ್ ನಲ್ಲಿನ ಕಾಂಗ್ರೆಸ್ ಮುಖಂಡ ಅಮರೀಂದರ್ ಸಿಂಗ್ ಅವರ ವೈಯಕ್ತಿಕ ವರ್ಚಸ್ಸು ಕಾಂಗ್ರೆಸ್ ಪಾಲಿಗೆ ಸಂಜೀವಿನಿಯಾಗುವ ಸಾಧ್ಯತೆ ದಟ್ಟವಾಗಿದೆ. (ಉ.ಪ್ರ ಸಮೀಕ್ಷೆ, ರಂಗೇರುತ್ತಿರುವ ಬಿಜೆಪಿ ಕನಸು)

Punjab assembly elections 2017: Opinion poll results by India Today - Axis

ಬಿಜೆಪಿ ತೊರೆದು, ಆವಾಜ್ - ಎ- ಪಂಜಾಬ್ ಎನ್ನುವ ಹೊಸ ಪಕ್ಷ ಹುಟ್ಟು ಹಾಕಿರುವ ನವಜೋತ್ ಸಿಂಗ್ ಸಿದ್ದು ಎರಡಂಕಿ ಸ್ಥಾನ ದಾಟುವ ಸಾಧ್ಯತೆ ಕಷ್ಟವಾದರೂ, ಅಧಿಕಾರಕ್ಕೇರಲು ಕಾಂಗ್ರೆಸ್ ಅಥವಾ ಆಮ್ ಆದ್ಮಿ ಪಕ್ಷಕ್ಕೆ ಇವರು ನಿರ್ಣಾಯಕವಾಗಲಿದ್ದಾರೆ.

ಸಮೀಕ್ಷೆಯ ಪ್ರಕಾರ ಯಾರಿಗೆ ಎಷ್ಟು ಸ್ಥಾನ ಸಿಗಬಹುದು? (ಆವರಣದಲ್ಲಿ ಈಗಿನ ಬಲಾಬಲ)
ಒಟ್ಟು ಸ್ಥಾನಗಳು: 117
ಅಕಾಲಿದಳ - ಬಿಜೆಪಿ: 17-21 (66)
ಕಾಂಗ್ರೆಸ್ : 49-55 (46)
ಆಮ್ ಆದ್ಮಿ : 42-46 (ಮೊದಲ ಬಾರಿಗೆ ಸ್ಪರ್ಧಿಸುತ್ತಿದೆ)
ಆವಾಜ್-ಎ-ಪಂಜಾಬ್: 3-7 (ಮೊದಲ ಬಾರಿಗೆ ಸ್ಪರ್ಧಿಸುತ್ತಿದೆ)

ಮುಖ್ಯಮಂತ್ರಿ ಸ್ಥಾನಕ್ಕೆ ಉತ್ತಮ ಆಯ್ಕೆ ಯಾರು ಎನ್ನುವ ಪ್ರಶ್ನೆಗೆ, ಮೊದಲ ಸ್ಥಾನ ಕಾಂಗ್ರೆಸ್ ಮುಖಂಡ ಅಮರೀಂದರ್ ಸಿಂಗ್, ನಂತರ ಹಾಲಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಆನಂತರ ಸ್ಥಾನ ನವಜೋತ್ ಸಿಂಗ್ ಸಿದ್ದು ಮತ್ತು ಭಗವಂತ್ ಮನ್ ಅವರ ಹೆಸರನ್ನು ಸಮೀಕ್ಷೆಯಲ್ಲಿ ಮತದಾರ ಸೂಚಿಸಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Punjab Assembly Elections 2017 Opinion Poll Results: Congress-lead by Amarinder Singh to be biggest winner with 49-55 seats, says India Today-Axis poll.
Please Wait while comments are loading...