ಮನೆಯಲ್ಲಿ ನೀರು ಉಳಿಸುವ ಸರಳ ಮತ್ತು ಪರಿಣಾಮಕಾರಿ ಮಾರ್ಗಗಳು
ಭೂಮಿಯ ಮೇಲೆ ಜೀವ ಉಳಿಯಲು ಅತ್ಯಗತ್ಯವಾದ ಸಂಪನ್ಮೂಲ ಎಂದರೆ ನೀರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಕೊರೆತೆ ಹೆಚ್ಚಾಗಿದೆ. ನಾವೆಲ್ಲರೂ ಈ ಅಮೂಲ್ಯವಾದ ಸಂಪನ್ಮೂಲವನ್ನು ತುಂಬಾ ಹಗುರವಾಗಿ ತೆಗೆದುಕೊಂಡಿದ್ದೆವೆ. ನಮ್ಮ ಅಜಾಗರೂಕ ಬಳಕೆ ಮತ್ತು ನೀರಿನ ಸಂಪನ್ಮೂಲಗಳ ದುರುಪಯೋಗವು ನಮ್ಮನ್ನು ಮುಂಬರುವ ದಿನಗಳಲ್ಲಿ ಬಿಕ್ಕಟ್ಟಿನತ್ತ ಕೊಂಡೊಯ್ಯಲಿದೆ.
ಮನೆಯಲ್ಲಿ ನೀರು ಉಳಿಸುವ ಸರಳ ಸಲಹೆಗಳು
ನೀರು ಉಳಿಸುವುದು ಒಂದು ದೊಡ್ಡ ಕಾರ್ಯ ಎಂದು ಅನಿಸಬಹುದು. ಆದರೆ, ನಮ್ಮ ದಿನನಿತ್ಯದ ಬದುಕಿನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿದರೆ ಸಾಕು, ನಾವು ಸಾಕಷ್ಟು ನೀರನ್ನು ಉಳಿಸಬಹುದು.

ಸ್ನಾನದ ವೇಳೆ ಜಾಗ್ರತೆ ಅಗತ್ಯ
ಶವರ್ ಬಳಕೆ ಮಾಡುವಾಗ ಸೋಪ್ ಹಚ್ಚುವ ಸಮಯದಲ್ಲಿ ಟ್ಯಾಪ್ ಆಫ್ ಮಾಡುವುದು ಒಳ್ಳೆಯದು. ನೀರನ್ನು ಉಳಿಸಲು ಉತ್ತಮ ಮಾರ್ಗವೆಂದರೆ ಬಕೆಟ್ ಬಳಸಿ ಸ್ನಾನ ಮಾಡಿದರೆ ಹೆಚ್ಚು ನೀರು ಉಳಿಸಬಹುದು.
ಟ್ಯಾಪ್ ಸೋರಿಕೆಗಳನ್ನು ತಕ್ಷಣ ಸರಿಪಡಿಸಿ
ಮನೆಯಲ್ಲಿರುವ ಪೈಪ್‌ಗಳು ಅಥವಾ ಟ್ಯಾಪ್‌ಗಳಲ್ಲಿ ಸೋರಿಕೆ ಕಂಡುಬಂದಲ್ಲಿ ಅದನ್ನು ನಿರ್ಲಕ್ಷ್ಯ ಮಾಡಬಾರದು. ಸಣ್ಣ ಹನಿಯೂ ದಿನಕ್ಕೆ ಲೀಟರ್‌ಗಟ್ಟಲೆ ನೀರನ್ನು ಹಾಳಾಗುತ್ತದೆ.
ಹಲ್ಲುಜ್ಜುವಾಗ ಟ್ಯಾಪ್ ಆಫ್ ಮಾಡಿ
ಹಲ್ಲುಜ್ಜುವಾಗ ಟ್ಯಾಪ್ ಆನ್ ಮಾಡಿ ನೀರು ಹರಿಯಲು ಬಿಡಬೇಡಿ. ಅಗತ್ಯವಿದ್ದಾಗ ಮಾತ್ರ ಟ್ಯಾಪ್ ಬಳಸುವುದು ಉತ್ತಮ.
ಮರುಬಳಕೆ ಅಭ್ಯಾಸ ಬೆಳೆಸಿಕೊಳ್ಳಿ
ನೀರನ್ನು ನೇರವಾಗಿ ಡ್ರೈನೇಜ್‌ಗೆ ಬಿಡುವ ಬದಲು, ಬಕೆಟ್‌ನಲ್ಲಿ ಸಂಗ್ರಹಿಸಿ ಸಸ್ಯಗಳಿಗೆ ನೀರು ಹಾಕಲು ಅಥವಾ ಶೌಚಾಲಯಕ್ಕೆ ಹಾಕಲು ಬಳಕೆ ಮಾಡಬಹುದು.
ಕೈ ತೊಳೆಯುವಾಗ ನೀರಿನ ಬಳಕೆ ಕಡಿಮೆ ಮಾಡಿ
ಕೈಗಳನ್ನು ಸಾಬೂನು ಬಳಸಿ ಉಜ್ಜುವಾಗ ಟ್ಯಾಪ್ ಆಫ್ ಮಾಡಿ. ಇದರಿಂದ ಸಾಕಷ್ಟು ನೀರು ಉಳಿಸಬಹುದು.
ನೀರಿನ ಉಳಿತಾಯ ಸಾಧನಗಳನ್ನು ಬಳಸಿ
ಕಡಿಮೆ ಫ್ಲೋ ಶವರ್ ಹೆಡ್, ಸಮರ್ಥ ಟ್ಯಾಪ್ ಮತ್ತು ವಾಟರ್-ಸೇವಿಂಗ್ ಉಪಕರಣಗಳನ್ನು ಬಳಸುವುದರಿಂದ ನೀರಿನ ಬಳಕೆಯನ್ನು ಕಡಿಮೆ ಮಾಡಬಹುದು.
ಮಳೆನೀರು ಸಂಗ್ರಹಣೆ ಮಾಡಿ
ಮಳೆಗಾಲದಲ್ಲಿ ಮಳೆನೀರನ್ನು ಸಂಗ್ರಹಿಸಿ, ನಂತರದ ದಿನಗಳಲ್ಲಿ ಅದನ್ನು ತೋಟಗಾರಿಕೆ ಅಥವಾ ಇತರ ಬಳಕೆಗಳಿಗೆ ಉಪಯೋಗಿಸಬಹುದು.














Click it and Unblock the Notifications